‘ಲಸಿಕಾ ಸಂಗ್ರಹ ಘಟಕ’ದಲ್ಲಿ ತಾಂತ್ರಿಕ ದೋಷ : 1000 ಡೋಸ್ ಲಸಿಕೆ ನಾಶ..!
ಅಸ್ಸಾಂ : ಈಗಾಗಲೇ ದೇಶಾದ್ಯಂತ ಲಸಿಕೆ ಅಭಿಯಾನ ಆರಂಭವಾಗಿದೆ. ಈ ನಡುವೆ ಅಸ್ಸಾಂನ ಸಿಲ್ಚಾರ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ ತಾಂತ್ರಿಕ ದೋಷದಿಂದಾಗಿ 1,000 ಡೋಸ್ ಕೋವಿಶೀಲ್ಡ್ ಲಸಿಕೆ ಹಾನಿಯಾಗಿರೋದು ತಿಳಿದುಬಂದಿದೆ. ಹೌದು SMCH ನ ಲಸಿಕೆ ಸಂಗ್ರಹ ಘಟಕದಲ್ಲಿ ಲಸಿಕೆಯ ಡೋಸ್ ಗಳು ಹೆಪ್ಪುಗಟ್ಟಿರುವುದು ಕಂಡುಬಂದಿದೆ.
ಪ್ರತಿದಿನ ಬಿಯರ್ ಕುಡಿದರೆ ಏನಾಗುತ್ತದೆ ? – ಇಲ್ಲಿದೆ ಮಾಹಿತಿ
ಇನ್ನೂ 1,000 ಡೋಸ್ ಗಳನ್ನು ಒಳಗೊಂಡ ಕೋವಿಶೀಲ್ಡ್ ಲಸಿಕೆಯ ಸುಮಾರು 100 ವೈಯಲ್ ಗಳನ್ನು ಉಪ-ಶೂನ್ಯ ತಾಪಮಾನಗಳಲ್ಲಿ ಸಂಗ್ರಹಿಸಲಾಗಿದೆ. ಕೊವಿಶೀಲ್ಡ್ ಲಸಿಕೆಯನ್ನು 2-8 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಶೇಖರಿಸಬೇಕಾಗಿರುತ್ತದೆ, ಆದರೆ ಸಿಲ್ಚಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಐಎಲ್ ಆರ್ ನ ತಾಪಮಾನವು ಶೂನ್ಯಕ್ಕಿಂತ ಕಡಿಮೆಯಿತ್ತು. ಈ ಲಸಿಕೆಗಳು ಭಾಗಶಃ ಹೆಪ್ಪುಗಟ್ಟಿರುವುದು ಕಂಡುಬಂದಿದೆ.
ಐಎಲ್ ಆರ್ ನಲ್ಲಿ ಕೆಲವು ತಾಂತ್ರಿಕ ದೋಷಗಳಿಂದಾಗಿ ಈ ಘಟನೆ ನಡೆದಿದೆ ಎಂದು ಹೇಳಲಾಗ್ತಿದೆ. ಇದೇ ವೇಳೆ, 100 ಡೋಸ್ ಹೊಂದಿರುವ ಕೋವಿಶೀಲ್ಡ್ ನ 100 ವಿಯಲ್ ಗಳ ಮತ್ತೊಂದು ಬ್ಯಾಚ್ ಅನ್ನು ಸಿಲ್ಚಾರ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಗೆ ಕಳುಹಿಸಲು ಅಸ್ಸಾಂ ಆರೋಗ್ಯ ಇಲಾಖೆ ನಿರ್ಧರಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








