ತಾಲಿಬಾನ್ ಲುಕ್ ನಲ್ಲಿ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್
ತಾಲಿಬಾನ್ ಅನ್ನು ಮತ್ತೊಮ್ಮೆ ಶ್ರೇಷ್ಠರನ್ನಾಗಿ ಮಾಡಿದರ ಹಿಂದೆ ಅಮೆರಿಕಾದ ಅಧ್ಯಕ್ಷ ಜೋ ಬೈಡೆನ್ ಅವರ ಶ್ರಮವಿದೆ ಎಂದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗ್ತಿದೆ. ಹೌದು ಜೋ ಬೈಡೆನ್ ಅವರು ಅಫ್ಗಾನ್ ನಿಂದ ಅಮೆರಿಕಾ ಸೇನೆ ವಾಪಸ್ ಕರೆಸಿಕೊಂಡ ಬೆನ್ನಲ್ಲೇ ತಾಲಿಬಾನಿ ಉಗ್ರರ ಅಟ್ಟಹಾಸ ಅಫ್ಗಾನ್ ನಲ್ಲಿ ಭುಗಿಲೆದ್ದಿತ್ತು. ಇಂದು ಇಡೀ ಅಫ್ಗಾನ್ ತಾಲಿಬಾನ್ ನರರಾಕ್ಷಸರ ಕೈಲಿದೆ. ಅಲ್ಲಿನ ಕೋಟ್ಯಾಂತರ ಜನರ ಭವಿಷ್ಯ ಕತ್ತಲ್ಲಲ್ಲಿ ಇದೆ.
ಯುವಕರ ಕನಸುಗಳು ನಚ್ಚುನೂರಾಗಿದೆ. ಮಹಿಳೆಯರು ಉಸಿರು ಕಟ್ಟುವಂತ ವಾತಾವರಣದಲ್ಲಿ ನಿತ್ಯ ನರಕದಲ್ಲಿ ಬದುಕುವಂತಾಗಿದೆ. ಇಷ್ಟಕ್ಕೆಲ್ಲ ಕಾರಣ ಅಮೆರಿಕಾ ಅಧ್ಯಕ್ಷರ ಒಂದು ನಿರ್ಧಾರ. ಹೀಗಾಗಿ ಜೋ ಬೈಡೆನ್ ಅವರ ವರ್ಚಸ್ಸು ಇಡೀ ವಿಶ್ವಾದ್ಯಂತ ಅತ್ಯಂತ ಕೆಳಮಟ್ಟಕ್ಕೆ ಇಳಿದುಬಿಟ್ಟಿದೆ. ಎಲ್ಲರೂ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರ ನಡೆಯನ್ನ ಖಂಡಿಸಿದ್ದಾರೆ. ಇದೀಗ ಜೋ ಬೈಡೆನ್ ಅವರ ಮೀಮ್ಸ್ ಗಳು ಸೋಷಿಯಲ್ ಮಿಡಿಯಾ ತುಂಬ ಸದ್ದು ಮಾಡ್ತಿದೆ. ಅಷ್ಟೇ ಅಲ್ಲ ಜೋ ಬೈಡೆನ್ ತಾಲಿಬಾನ್ ಧರಿಸಿನಲ್ಲಿರುವ ಪೋಸ್ಟರ್ ಒಂದು ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.
ಅಪರಿಚಿತ ನಿಗೂಢ ವ್ಯಕ್ತಿಯೊಬ್ಬರು ಹೈವೇನಲ್ಲಿ ಬಿಲ್ ಬೋರ್ಡ್ ಟ್ರೆಂಡಿಂಗ್ ಬೋರ್ಡ್ ಗಳ ಮೇಲೆ ತಾಲಿಬಾನ್ ಧರಿಸಿನಲ್ಲಿ ಬೈಡೆನ್ ಗನ್ ಹಿಡಿದು ನಿಂತಿರುವಂತಹ ಪೋಸ್ಟರ್ ಹಾಕಿಸಿ ಅದ್ರ ಮೇಲೆ ತಾಲಿಬಾನ್ ಅನ್ನು ಮತ್ತೊಮ್ಮೆ ಗ್ರೇಟ್ ಮಾಡುವುದರ ಹಿಂದೆ ಬೈಡೆನ್ ಶ್ರಮವಿದೆ ಎಂದು ಹಾಕಿಸಿದ್ದಾರೆ. ಇನ್ನೂ ಈ ರೀತಿ ಬೋರ್ಡ್ ಹಾಕಿಸಲು ದುಡ್ಡು ನೀಡಿದವರು ಪೆನ್ಸುಲ್ ವೇನಿಯಾದ ಮಾಜಿ ಸೆನೆಟರ್ ಎಂದು ಹೇಳಲಾಗ್ತಿದೆ.
ವ್ಯಾಗ್ನರ್ ಒಂದು ಅವಧಿಯ ರಿಪಬ್ಲಿಕನ್ ಪೆನ್ಸಿಲ್ವೇನಿಯಾ ರಾಜ್ಯ ಸೆನೆಟರ್ ಮತ್ತು 2018 ರಲ್ಲಿ ವಿಫಲ ಗವರ್ನರ್ ಅಭ್ಯರ್ಥಿಯಾಗಿದ್ದರು. ಜಾಹೀರಾತುಗಳು ಟ್ರೋನ್ ಹೊರಾಂಗಣ ಜಾಹೀರಾತು ಒಡೆತನದಲ್ಲಿದೆ, ಇದರ ಉಪಾಧ್ಯಕ್ಷ ಬ್ರಿಯಾನ್ ಸ್ಕಾಟ್ ಅವರು ಕೆಲವು ಮಾನದಂಡಗಳನ್ನು ಪೂರೈಸುವವರೆಗೂ ಜಾಹೀರಾತುಗಳ ವಿಷಯಕ್ಕೆ ಅವರ ಕಂಪನಿ ಜವಾಬ್ದಾರರಾಗಿರುವುದಿಲ್ಲ ಎನ್ನಲಾಗಿದೆ.
ಅಫ್ಗಾನ್ ಸಚಿವಾಲಯದೊಳಗೆ ಮಹಿಳೆಯರಿಗೆ ನೋ ಎಂಟ್ರಿ – ತಾಲಿಬಾನ್ ಉಗ್ರರ ನಡೆ ವಿರುದ್ಧ ಪ್ರತಿಭಟನೆ