ಅಫ್ಗಾನ್ ಸಚಿವಾಲಯದೊಳಗೆ ಮಹಿಳೆಯರಿಗೆ ನೋ ಎಂಟ್ರಿ – ತಾಲಿಬಾನ್ ಉಗ್ರರ ನಡೆ ವಿರುದ್ಧ ಪ್ರತಿಭಟನೆ
ಅಫ್ಗಾನ್ ಅನ್ನು ಸಂಪೂರ್ಣವಾಗಿ ವಶಕ್ಕೆ ತೆಗೆದುಕೊಂಡಿರುವ ನರರಾಕ್ಷಸ ತಾಲಿಬಾನಿಗಳು ಅಲ್ಲಿನ ಮಹಿಳೆಯರಿಂದ ಎಲ್ಲಾ ರೀತಿಯಾದ ಹಹಕ್ಕುಗಳನ್ನ ಕಸಿಯುತ್ತಿದ್ದಾರೆ. ಮಹಿಳೆಯರಿಗೆ ಚಿತ್ರಹಿಂಸೆ ನೀಡ್ತಿದ್ದಾರೆ. ಎಲ್ಲಾ ಕ್ಷೇತ್ರಗಳಿಂದಲೂ ಮಹಿಳೆಯರನ್ನ ದೂರ ಇಡುತ್ತಿರುವ ಉಗ್ರರು ಮಹಿಳೆಯರ ಕೆಲಸ ಕೇವಲ ಮಕ್ಕಳನ್ನ ಹೆರುವುದು ಅಷ್ಟೇ ಎಂದು ಹೇಳಿಕೆಗಳನ್ನ ನೀಡುತ್ತಾ ತಿರುಗಾಡ್ತಿದ್ದಾರೆ. ಈ ನಡುವೆ ಮಹಿಳೆಯರು ತಾಲಿಬಾನಿಗಳ ವಿರುದ್ಧ ತಿರುಗಿಬಿದ್ದಿದ್ದ ಸಾಮಾಜಿಕ ಜಾಲತಾಣಗಳ್ಲೂ ಅಭಿಯಾನವನ್ನೇ ಆರಂಭಿಸಿದ್ದಾರೆ.
ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಕೆಲಸ ಮಾಡುವುದಕ್ಕೆ ನಿರ್ಬಂಧ ವಿಧಿಸಲಾಗ್ತಿದೆ. ಸೆಲೆಬ್ರಿಟಿಗಳು , ಕ್ರೀಡಾಪಟುಗಳು, ರಾಜಕಾರಣಿಗಳು ಇನ್ನೂ ಅನೇಕರು ದೇಶದಿಂದ ಫಲಾಯನ ಮಾಡಿದ್ದಾರೆ. ಇದೀಗ ತಾಲಿಬಾನಿಗಳಿಂದ ಜೀವ ಭಯ ಅನುಭವಿಸುತ್ತಿರುವ ಅಫ್ಗಾನ್ ನ 32 ಮಂದಿ ಫುಟ್ ಬಾಲ್ ಆಟಗಾರ್ತಿಯರು ದೇಶ ತೊರೆದು ಪಾಕ್ ನಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. 32 ಮಂದಿ ಫುಟ್ಬಾಲ್ ಆಟಗಾರ್ತಿಯರೂ ಸಹ ತಮ್ಮ ಕುಟುಂಬ ಸಮೇತ ಪಾಕಿಸ್ತಾನಕ್ಕೆ ತೆರಳಿದ್ದಾರೆ.
ಇದೀಗ ಅಫ್ಘಾನಿಸ್ತಾನದ ಮಹಿಳಾ ವ್ಯವಹಾರಗಳ ಸಚಿವಾಲಯದೊಳಕ್ಕೆ ಮಹಿಳಾ ಉದ್ಯೋಗಿಗಳು ಪ್ರವೇಶಿಸದಂತೆ ತಾಲಿಬಾನ್ ನಿರ್ಬಂಧ ಹೇರಿದ್ದು, ಸಚಿವಾಲಯದೊಳಕ್ಕೆ ಕೇವಲ ಪುರುಷ ಉದ್ಯೋಗಿಗಳ ಪ್ರವೇಶಕ್ಕೆ ಮಾತ್ರ ಅನುಮತಿ ಕಲ್ಪಿಸಿಕೊಟ್ಟಿರುವುದಾಗಿ ತಿಳಿಸಿದೆ. ನಾಲ್ವರು ಮಹಿಳಾ ಉದ್ಯೋಗಿಗಳಿಗೆ ಸಚಿವಾಲಯದೊಳಕ್ಕೆ ಪ್ರವೇಶಿಸಲು ಅನುಮತಿ ನೀಡಿಲ್ಲ ಎಂದು ಸ್ಪುಟ್ನಿಕ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಅಲ್ಲದೇ ತಾಲಿಬಾನ್ ನಿರ್ಧಾರದ ವಿರುದ್ಧ ಮಹಿಳೆಯರು ಸಚಿವಾಲಯದ ಸಮೀಪ ಪ್ರತಿಭಟನೆ ನಡೆಸಿರುವುದಾಗಿ ತಿಳಿಸಿದೆ.