ಕಾಫಿನಾಡಿನಲ್ಲಿ ಮಿಸ್ ಮಾಡದೇ ನೋಡಲೇಬೇಕಾದ ಪ್ರವಾಸಿ ತಾಣಗಳಿವು..!
ಮಲೆನಾಡು ಚಿಕ್ಕಮಗಳೂರು ಅಂದ ತಕ್ಷಣವೇ ನೆನಪಾಗೋದು ಹಚ್ಚ ಹಸಿರು… ಸುತ್ತಲು ಕಾಡು, ಗಿಡ- ಮರಗಳು.. ಅಲ್ಲಿಲ್ಲಿ ಹರಿಯುವ ಜಲಧಾರಿ, ಗಿರಿಶಿಖರ, ಕಾಫಿ ತೋಟಗಳು.. ಪ್ರಕೃತಿಯ ರಮಣೀಯ ದೃಶ್ಯ ನೋಡುಗರ ಕಣ್ಣಿಗೆ ಹಬ್ಬ.. ಪ್ರವಾಸಿಗರ ಹಿರಿಯಾರು ಕಾಫಿನಾಡು..
ಇನ್ನೂ ನೀವು ಚಿಕ್ಕಮಗಳೂರಿಗೆ ವಿಸಿಟ್ ಮಾಡಿದ್ರೆ ತಪ್ಪದೇ ಈ 5 ಪ್ರದೇಶಗಳಿಗೆ ವಿಸಿಟ್ ಮಾಡ್ಲೇ ಬೇಕು
ಕೆಮ್ಮಣ್ಣುಗುಂಡಿ: ಮಲೆನಾಡಿಗೆ ನೀವು ಭೇಟಿ ನೀಡಿದ್ರೆ , ನೀವು ಮಿಸ್ ಮಾಡ್ದೇ ಚಿಕ್ಕಮಗಳೂರಿಗೆ ಭೇಟಿ ನೀಡ್ಲೇ ಬೇಕು. ಬೆಟ್ಟದ ತಪ್ಪಲಿನಲ್ಲಿ ನಿಂತು ಸುತ್ತಲಿನ ಪೃಕೃತಿ ಸವಿಯೋದೆ ಒಂದು ಪುಣ್ಯ ಎಂದ್ರೆ ತಪ್ಪಾಗಲಾರದು.. ಇನ್ನೂ ಕೆಮ್ಮಣ್ಣುಂಡಿಯಲ್ಲೇ ಬರುವ ಹೆಬ್ಬೆ ಜಲಪಾತಕ್ಕೆ ತೆರಳಿ ಜಲಧಾರೆಯ ಭೋರ್ಗರೆತವನ್ನ ಕಣ್ತುಂಬಿಕೊಳ್ಳುವುದೇ ಒಂದು ಆನಂದ.
ಕದಮ ಜಲಪಾತ : ಬೆಟ್ಟದ ತುದಿಂದ ಭೋರ್ಗರೆಯುತ್ತಾ ಹಾಲ್ನೊರೆಯಂತೆ ಉಕ್ಕುವ ಜಲಧಾರೆಯ ದೃಶ್ಯ ಕಣ್ಣಿಗೆ ಮುದ ನೀಡುತ್ತೆ. ಸುತ್ತಲಿ ಪ್ರಕೃತಿಯ ಮೋಹಕ ದೃಶ್ಯ ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುತ್ತೆ. ಜಳಪಾತದ ಝುಳು ಝುಳು ಶಬ್ಧ ನೋಡುಗರನ್ನು ರೋಮಾಂಚತಗೊಳಿಸುತ್ತೆ. ಸಾವಿರಾರು ಪ್ರವಾಸಿಗರು ಇಲ್ಲಿಗೆ ವಿಸಿಟ್ ಮಾಡಿ ಪ್ರಕೃತಿಯ ಸೌಂದರ್ಯ ಕಂಡು ಪುಳಕಿತರಾಗ್ತಾರೆ.
ಕುದುರೆಮುಖ: ಭಾರತದ ಸ್ವಟ್ಜರ್ಲ್ಯಾಂ ಡ್ ಎಂದೇ ಖ್ಯಾತಿ ಪಡೆದಿರುವ ಚಿಕ್ಕಮಗಳೂರಿನಲ್ಲಿ ಮತ್ತೊಂದು ನೋಡಲೇಬೇಕಾದ ತಾಣವೆಂದರೆ ಅದು ಕುದುರೆಮುಖ.. ಇದು ಪ್ರವಾಸಿ ಪ್ರಿಯರ ಹಾಟ್ ಸ್ಪಾಟ್. ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡದ್ರೆ ಪ್ರಕೃತಿಯ ಸೌಂದರ್ಯಕ್ಕೆ ಪ್ರವಾಸಿಗರು ಮಾರು ಹೋಗ್ತಾರೆ. ಅಲ್ಲಿನ ಮನೋಹರ ದೃಶ್ಯ ಪ್ರವಾಸಿಗರನ್ನು ಬೆರರಾಗಿಸುತ್ತೆ. ಬಣ್ಣ ಬಣ್ಣದ ಮಣ್ಣುಗಳಿಂದ ಕೂಡಿದ ಕುದರೆಮುಖ ಭೂಲೋಕದ ಸ್ವರ್ಗ ಎಂದೇ ವರ್ಣನೆಗೊಂಡಿದೆ. ಚಾರಣಿಗರ ಅಂದ್ರೆ ಟ್ರಕಿಂಗ್ ಪ್ರಿಯರ ಹಾಟ್ ಫೇವರೇಟ್ ತಾಣ ಈ ಕುದುರೆಮುಖ.
ಹೊನ್ನಮ್ಮನಹಳ್ಳಿ ಜಲಪಾತ: ಹೊನ್ನಮನಹಳ್ಳ ಜಲಪಾತಕ್ಕೆ ವಿಸಿಟ್ ಮಾಡಿದ್ರೆ ಪ್ರಕೃತಿಯ ಸುಂದರ ದೃಶ್ಯ ಭರ್ಜರಿ ರಸದೌತಣ ನೀಡುವುದ್ರಲ್ಲಿ ಎರೆಡು ಮಾತಿಲ್ಲ.
ಅತ್ತಿಗುಂಡಿ ಝರಿ ಜಲಪಾತ: ಅತ್ತಿಗುಂಡಿ ಝರಿ ಜಲಪಾತ ಹರಿಯುವುದನ್ನ ನೋಡಿದ ಪ್ರವಾಸಿಗರು ಪ್ರಕೃತಿಯ ಮಡಿಲಲ್ಲಿ ಬೆರೆತು ಮೂಕ ವಿಸ್ಮತರಾಗುತ್ತಾರೆ.. ನೀರಿನಲ್ಲಿ ಮಿಂದೆದ್ದು ಆಟವಾಡುತ್ತಾ ಫ್ರೆಂಡ್ಸ್ ಫ್ಯಾಮಿಲಿ ಜೊತೆಗೆ ನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿ ಎಂಜಾಯ್ ಮಾಡ್ತಾರೆ.