ಭಾರತದಲ್ಲಿ ಹೆಚ್ಚುವರಿ ಕೋವಿಡ್ ಲಸಿಕೆ ಬೂಸ್ಟರ್ ನ ಅಗತ್ಯವಿದ್ಯಾ..?
ವೇಗವಾಗಿ ಹರಡುತ್ತುತ್ತಿರುವ ಕೋವಿಡ್ ರೂಪಾಂತರಿ ಡೆಲ್ಟಾ ಕೊರೊನಾ 3ನೇ ಅಲೆಗೆ ಕಾರಣವಾಗುವ ಭೀತಿ ಇದೆ. ಈ ನಡುವೆ ಹೆಚ್ಚಾಗ್ತಲೇ ಇರುವ ಕೊರೊನಾ ಹಾವಳಿ ತಡೆಯಲು ಹಲವು ದೇಶಗಳಲ್ಲಿ ಲಸಿಕೆ ಬೂಸ್ಟರ್ ಡ್ರೈವ್ ಗಳನ್ನು ಸಿದ್ಧಪಡಿಸುತ್ತಿವೆ. ಈಗಾಗಲೇ ಇಸ್ರೇಲ್, ಯುನೈಟೆಡ್ ಕಿಂಗ್ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ದೇಶಗಳಲ್ಲಿ ಆ ದೇಶದ ಜನಸಂಖ್ಯೆಯ ಬಹುತೇಕ ಮಂದಿಗೆ ಲಸಿಕೆ ನೀಡಲಾಗಿದೆ.
COVID- 19 ವಿರುದ್ಧ ತಮ್ಮ ಜನರ ರಕ್ಷಣೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಸಂಪೂರ್ಣವಾಗಿ ಲಸಿಕೆ ಹಾಕಿದ ಜನರಿಗೆ ಹೆಚ್ಚುವರಿ ಲಸಿಕೆ ನೀಡುವ ಕಾರ್ಯಕ್ರಮಗಳನ್ನು ಆರಂಭಿಸಿವೆ ಅಥವಾ ಘೋಷಿಸಿವೆ. ಈ ನಡುವೆ ಭಾರತದಲ್ಲೂ ಕೂಡ ಕೊರೊನಾ ಲಸಿಕೆಯ ಬೂಸ್ಟರ್ ಡೋಸ್ ಅಗತ್ಯವಿದ್ಯಾ ಅನ್ನೋ ಚರ್ಚೆಗಳು ಆರಂಭವಾಗಿವೆ.
ಡೆಂಗ್ಯೂಗೆ ರಾಯಚೂರಿನಲ್ಲಿ ಮೂರನೇ ಬಲಿ
ಮುಖ್ಯವಾಗಿ ಫೈಜರ್-ಬಯೋಎನ್ಟೆಕ್ ಲಸಿಕೆಯನ್ನು ತನ್ನ ರೋಲ್ ಔಟ್ನಲ್ಲಿ ಬಳಸಿದ ಇಸ್ರೇಲ್, ಪ್ರಕರಣಗಳ ಹೆಚ್ಚಳಕ್ಕೆ ಪ್ರತಿಕ್ರಿಯೆಯಾಗಿ ಜುಲೈನಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಬೂಸ್ಟರ್ ಡೋಸ್ಗಳನ್ನು ನೀಡಲು ಪ್ರಾರಂಭಿಸಿತ್ತು. ಆಗಸ್ಟ್ ಅಂತ್ಯದಲ್ಲಿ, ಸರ್ಕಾರವು ಎರಡನೇ ಜಾಬ್ ನಂತರ ಕನಿಷ್ಠ ಐದು ತಿಂಗಳ ನಂತರ ಯಾರಿಗಾದರೂ ಬೂಸ್ಟರ್ ಶಾಟ್ಗಳನ್ನು ಲಭ್ಯವಾಗುವಂತೆ ಮಾಡಿತು.
ಇಸ್ರೇಲ್ ಇಲ್ಲಿಯವರೆಗೆ ಎರಡು ಮಿಲಿಯನ್ಗಿಂತಲೂ ಹೆಚ್ಚಿನ ಬೂಸ್ಟರ್ ಶಾಟ್ಗಳನ್ನು ನೀಡಿದೆ. ಮತ್ತು ನಾಲ್ಕನೇ ಡೋಸ್ ಅಗತ್ಯವಿದ್ದಲ್ಲಿ ಅದು ಸಾಕಷ್ಟು ಪೂರೈಕೆಯನ್ನು ಹೊಂದಿದೆ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರ ಸಿದ್ಧತೆ ನಡೆಸಿದೆ ಎಂದು ಹೇಳಿದೆ. ಜರ್ಮನಿ ಮತ್ತು ಫ್ರಾನ್ಸ್ ಕೂಡ ಈ ತಿಂಗಳು ಸಂಪೂರ್ಣ ವ್ಯಾಕ್ಸಿನೇಟೆಡ್ ಜನರಿಗೆ ಹೆಚ್ಚುವರಿ ಶಾಟ್ ನೀಡಲು ಆರಂಭಿಸಿದವು.
ಯುನೈಟೆಡ್ ಕಿಂಗ್ಡಮ್ ಈ ತಿಂಗಳು 50 ಕ್ಕಿಂತ ಹೆಚ್ಚಿನವರಿಗೆ, ಮುಂಚೂಣಿಯ ಆರೋಗ್ಯ ಕಾರ್ಯಕರ್ತರಿಗೆ ಅಥವಾ ವೈದ್ಯಕೀಯವಾಗಿ ದುರ್ಬಲರಿಗೆ ಬೂಸ್ಟರ್ ಶಾಟ್ಗಳನ್ನು ನೀಡುತ್ತದೆ. ಯುಎಸ್ ನಲ್ಲಿ ಸೆಪ್ಟೆಂಬರ್ 20 ರಿಂದ ಬೂಸ್ಟರ್ ಲಸಿಕೆಗಳನ್ನು ನೀಡುವ ಭರವಸೆಯನ್ನು ನೀಡಿದೆ. ಇನ್ನೂ ದೇಶದಲ್ಲಿ ಹೆಚ್ಚುವರಿ ಬೂಸ್ಟರ್ ಅಗತ್ಯವಿದ್ಯಾ ಅನ್ನೋ ಸವಾಲು ಶುರುವಾಗಿದೆ. ಈ ನಡುವೆ ಅನೇಕ ತಜ್ಞರು ವಿಜ್ಞಾನಿಗಳು ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದು, ಭಾರತದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಹೆಚ್ಚುವರಿ ಬೂಸ್ಟರ್ ಡೋಸ್ ಕೊಡುವ ಅಗತ್ಯವಿಲ್ಲ ಎಂದಿದ್ದಾರೆ.