KCET ಪರೀಕ್ಷೆಯ ಫಲಿತಾಂಶ ಪ್ರಕಟ..!

1 min read

KCET ಪರೀಕ್ಷೆಯ ಫಲಿತಾಂಶ ಪ್ರಕಟ..!

ಕರ್ನಾಟಕ KCET 2021 ರ ಫಲಿತಾಂಶ ಪ್ರಕಟವಾಗಿದೆ. ಸೆಪ್ಟೆಂಬರ್ 20 ರಂದು ಸಂಜೆ 4 ಗಂಟೆಗೆ ಫಲಿತಾಂಶ ಪ್ರಕಟವಾಗಿದೆ. 2021 ರ ಕೆಸಿಇಟಿ ಫಲಿತಾಂಶಗಳನ್ನ ಪಡೆಯಲು kea.kar.nic.in ವೆಬ್ ಸೈಟ್ ಗೆ ಭೇಟಿ ನೀಡಬಹುದಾಗಿದೆ.  ವೆಬ್ ಸೈಟ್ ಗೆ ಲಾಗಿನ್ ಆದ ನಂತರ ಅಭ್ಯರ್ಥಿಗಳು ರಿಜಿಸ್ಟರ್ ನಂಬರ್ , ಡೇಟ್ ಆಫ್ ಬರ್ತ್ ಹಾಕಿ ಫಲಿತಾಂಶವನ್ನು ಪರಿಶೀಲಿಸಬಹುದು. ಜೀವಶಾಸ್ತ್ರ ಮತ್ತು ಗಣಿತ ಪತ್ರಿಕೆಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆಗಳು -2021 ಆಗಸ್ಟ್ 28 ರಂದು ನಡೆದಿತ್ತು. ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪತ್ರಿಕೆಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ -2021 ಆಗಸ್ಟ್ 29 ರಂದು ನಡೆದಿತ್ತು.

KCET ಅನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಿಯಂತ್ರಿಸುತ್ತದೆ. ಎಂಜಿನಿಯರಿಂಗ್ ತಂತ್ರಜ್ಞಾನ, ಬ್ಯಾಚುಲರ್ ಆಫ್ ಫಾರ್ಮಸಿ (BPharma), ಡಿಪ್ಲೊಮಾ ಇನ್ ಫಾರ್ಮಸಿ (DPharma), ಕೃಷಿ ಕೋರ್ಸ್‌ಗಳು (ಕೃಷಿ ವಿಜ್ಞಾನ) ಮತ್ತು ಪಶುವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಇದನ್ನು ನಡೆಸಲಾಗುತ್ತದೆ. ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ನಿಂದ ಫಲಿತಾಂಶವನ್ನು ಪರಿಶೀಲಿಸಬೇಕು.

ಅಂಚೆ ಕಚೇರಿ ಇಲಾಖೆಯಿಂದ ಗ್ರಾಹಕರಿಗೆ ಗುಡ್ ನ್ಯೂಸ್..!

ಗಾರ್ಡನ್ ರೀಚ್ ಶಿಪ್‌ಬ್ಯುಲ್ಡರ್ಸ್ ಮತ್ತು ಇಂಜಿನಿಯರ್ಸ್ – ಅಪ್ರೆಂಟಿಸ್ ಮತ್ತು ಹೆಚ್‌ಆರ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd