ಮಹಾನ್ ಸ್ಯಾಡಿಸ್ಟ್ ಗಳು ತಾಲಿಬಾನ್ ಉಗ್ರರು – ಅಫ್ಗಾನ್ ನಲ್ಲಿ ಟಿ20 ಪ್ರಸಾರ ಬ್ಯಾನ್..!

1 min read

ಮಹಾನ್ ಸ್ಯಾಡಿಸ್ಟ್ ಗಳು ತಾಲಿಬಾನ್ ಉಗ್ರರು – ಅಫ್ಗಾನ್ ನಲ್ಲಿ ಟಿ20 ಪ್ರಸಾರ ಬ್ಯಾನ್..!

ತಾಲಿಬಾನ್ ಬಂದಿರುವುದೇ ಎಲ್ಲವನ್ನೂ ಬ್ಯಾನ್ ಮಾಡೊದಕ್ಕೆ , ಜನರಿಗೆ ಮಹಿಳೆಯರಿಗೆ ನರಕ ತೋರಿಸೋದಕ್ಕೆ ಅನ್ನೋದನ್ನ ಸಾಬೀತು ಮಾಡಿದೆ. ಶಿಕ್ಷಣದಿಂದ ಮಹಿಳೆಯರನ್ನ ದೂರವಿಟ್ಟಾಯ್ತು. ಮಹಿಲಾ ಸಚಿವಾಲಯವನ್ನೇ ಧ್ವಂಸ ಮಾಡಾಯ್ತು. ಮಹಿಳೆಯರ ಕೆಲಸಗಳನ್ನ ಕಸಿದು ಮಹಿಳೆಯರ ಹಕ್ಕುಗಳನ್ನ ಕಿತ್ತುಕೊಂಡಿರುವ ಪಾಪಿ ರಾಕ್ಷಸರು ಅಲ್ಲಿನ ಜನರನ್ನ ನರಕಕ್ಕೆ ತಳ್ಳಿದ್ದಾರೆ. ಇದೀಗ ಟಿ20 ಪ್ರಸಾರವನ್ನೂ ಕೂಡ ಬ್ಯಾನ್ ಮಾಡಿ ತಾವೆಂಥಾ ಮಹಾ ಸಯಕೋಗಳು , ಸ್ಯಾಡಿಸ್ಟ್ ಗಳು ಅನ್ನೋದನ್ನ ಪ್ರೂವ್ ಮಾಡಿಕೊಂಡಿದ್ದಾರೆ ನರರೂಪಿ ರಾಕ್ಷಸರು ತಾಲಿಬಾನ್ ಉಗ್ರರು.

ಹೊಸ ತಾಲಿಬಾನ್ ಆಡಳಿತವು ಟಿ 20 ಲೀಗ್ ಪ್ರಸಾರವನ್ನ ನಿಷೇಧಿಸಿದೆ. ಐಪಿಎಲ್ 2021 ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ನಡುವಿನ ಆಟದೊಂದಿಗೆ ಪುನರಾರಂಭವಾಯಿತು. ಐಪಿಎಲ್ 2021 ರ ಯುಎಇ ಲೆಗ್ ಅನ್ನು ಅಫ್ಘಾನಿಸ್ತಾನದಲ್ಲಿ ಪ್ರಸಾರ ಮಾಡಲಾಗುವುದಿಲ್ಲ ಎಂದಿದೆ. ಇದು ಇಸ್ಲಾಂ ವಿರೋಧಿ ವಿಷಯ ಎಂದೂ ಕೂಡ ಅನಾಗರಿಕ ತಾಲಿಬಾನಿಗಳು ಪ್ರತಿಪಾದಿಸಿದ್ದಾರೆ.

ಮುಜೀಬ್ ಉರ್ ರೆಹಮಾನ್ ಐಪಿಎಲ್ 2021 ರಲ್ಲಿ ಭಾಗವಹಿಸುತ್ತಿದ್ದಾರೆ. ತಾಲಿಬಾನ್ ಗಳು ಹೆಚ್ಚಿನ ರೀತಿಯ ಮನರಂಜನೆಯನ್ನು ನಿಷೇಧಿಸಿದ್ದಾರೆ. ಹಲವು ಕ್ರೀಡೆಗಳು ಸೇರಿದಂತೆ – ಮತ್ತು ಮಹಿಳೆಯರು ಸಂಪೂರ್ಣವಾಗಿ ಆಟವಾಡುವುದನ್ನು ನಿಷೇಧಿಸಲಾಗಿದೆ.

17 ವರ್ಷದಾಕೆ ಮೇಲೆ ಸಾಮೂಹಿಕ ಅತ್ಯಾಚಾರ – ವಿಡಿಯೋ ಹರಿಬಿಟ್ಟ ಕೀಚಕರು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd