“ರಾಜಕೀಯಕ್ಕೆ ಹಲವು ಆಫರ್ ಬಂದಿವೆ ಆದ್ರೆ ನನಗೆ ಆಸಕ್ತಿ ಇಲ್ಲ” : ಸೋನು ಸೂದ್

1 min read
actor Sonu sood

“ರಾಜಕೀಯಕ್ಕೆ ಹಲವು ಆಫರ್ ಬಂದಿವೆ, ಆದ್ರೆ ನನಗೆ ಆಸಕ್ತಿ ಇಲ್ಲ” : ಸೋನು ಸೂದ್

ಕೊರೊನಾ ಹಾವಳಿಯ ನಡುವೆ ಲಾಕ್ ಡೌಕ್ ಡೌನ್ ಸಮಯದಿಂದ ಹಿಡಿದು ಇಲ್ಲಿಯವರೆಗೂ ಬಾಲಿವುಡ್ ನಟ ಸೋನು ಸೂದ್ ತಮ್ಮ ಕೈಲಾದ ಸಹಾಯಗಳನ್ನ ಮಾಡುತ್ತಲೇ ಬಂದಿದ್ದಾರೆ. ಈ ಮೂಲಕ ಬಡವರ ಪಾಲಿನ ರಿಯಲ್ ಹೀರೋ ಆಗಿದ್ದಾರೆ. ರೀಲ್ ನಲ್ಲಿ ವಿಲ್ಲನ್ ಆದ್ರು ರಿಯಲ್ ಲೈಫ್ ನ ಹೀರೋ ಸೋನು ಸೂದ್ ಗೆ ಅಪಾರ ಅಭಿಮಾನಿಗಳಿದ್ದಾರೆ. ಅಂತೆಯೇ ಕೆಲವರ ಕುದ್ರುಷ್ಠಿಯು ಅವರ ಮೇಲಿದೆ. ಇತ್ತೀಚೆಗೆ ಸೋನು ಸೂದ್ ಅವರು 20 ಕೋಟಿ ರೂ.ಗೂ ಅಧಿಕ ತೆರಿಗೆಯನ್ನು ವಂಚಿಸಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ  ಆರೋಪ ಮಾಡಿತ್ತು. ಹೌದು  ಐಟಿ ಇಲಾಖೆಯ ಅಧಿಕಾರಿಗಳು ಸತತ 3 ದಿನಗಳ ಕಾಲ ಸೂದ್ ಅವರ ಮುಂಬೈ ನಿವಾಸಕ್ಕೆ ಶೋಧಕ್ಕಾಗಿ ಭೇಟಿ ನೀಡಿದ ಬಳಿಕ ಸೋನು ವಿರುದ್ಧ ಐಟಿ ಅಧಿಕಾರಿಗಳು ಈ ಹೇಳಿಕೆ ನೀಡಿದ್ದರು.

ಅಲ್ಲದೇ ಸೋನು ಸೂದ್ ಅವರ ನಾನ್ ​ಪ್ರಾಫಿಟ್​ ಸಂಸ್ಥೆ, ಸೂದ್​ ಚ್ಯಾರಿಟಿ ಫೌಂಡೇಶನ್​​, ವಿದೇಶಿ ಕೊಡುಗೆ ಕಾಯ್ದೆಯ ಉಲ್ಲಂಘನೆ ಮಾಡಿ, ಕ್ರೌಡ್‌ಫಂಡಿಂಗ್ ಪ್ಲಾಟ್‌ಫಾರ್ಮ್ ಮೂಲಕ ವಿದೇಶಿ ಕೊಡುಗೆದಾರರಿಂದ ಸುಮಾರು 2.1 ಕೋಟಿ ರೂ. ಹಣವನ್ನು ಸಂಗ್ರಹಿಸಿದೆ ಎಂದೂ ಕೂಡ ಐಟಿ ಇಲಾಖೆ ಆರೋಪಿಸಿತ್ತು. ಇಷ್ಟೆಲ್ಲ ಆದ್ರೂ ಸೋನು ಅಭಿಮಾನಿಗಳು ಸೋನು ಪರ ಇದ್ದಾರೆ. ಆದ್ರೆ ಸೋನು ಸೂದ್ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಇತ್ತೀಚೆಗೆ ಟ್ವೀಟ್ ಮಾಡುವ ಮೂಲಕ ಮೊದಲ ಬಾರಿಗೆ ಈ ಬಗ್ಗೆ ಪ್ರತಿಕ್ರಿಯೆ ನಿಡಿದ್ದ ಸೋನು ಕಠಿಣ ಮಾರ್ಗದಲ್ಲೂ ಪ್ರಯಾಣ ಸುಲಭವೆನಿಸುತ್ತಿದೆ, ಇದು ಪ್ರತಿ ಹಿಂದೂಸ್ತಾನಿಯ ಶುಭ ಹಾರೈಕೆಗಳ ಪ್ರಭಾವ ಎನಿಸುತ್ತದೆ. ನೀವು ಪ್ರತಿ ಬಾರಿ ನಿಮ್ಮ ಕಡೆಯ ಕಥೆ ಹೇಳಬೇಕಿಲ್ಲ, ಸಮಯ ಹೇಳುತ್ತದೆ ಎಂದು ತಾವು ಸದ್ಯಕ್ಕೆ ಐಟಿ ಆರೋಪಗಳ ಬಗ್ಗೆ ಯಾವುದೇ ಸ್ಪಷ್ಟನೆ ನೀಡುವುದಿಲ್ಲ ಎಂದಿದ್ದರು.

ಸಿನಿಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ : ಶೀಘ್ರದಲ್ಲೇ 100 % ಸೀಟಿಂಗ್ ಗೆ ಅನುಮತಿ..!

ಅಷ್ಟೇ ಅಲ್ಲ ಇದ್ರಿಂದಾಗಿ ಅಸಮಾಧಾನಗೊಂಡಿದ್ದ ಸೋನು ಇತ್ತೀಚೆಗೆ NDTV ಜೊತೆಗೆ ಸಂದರ್ಶನದ ವೇಳೆ ಕೆಲ ಮಹತ್ವದ ಮಾಹಿತಿಗಳನ್ನ ಬಿಚ್ಚಿಟ್ಟಿದ್ದಾರೆ. ಮುಖ್ಯವಾಗಿ ಕೊರೊನಾ ಲಾಕ್‌ಡೌನ್ ನಂತರ ನನಗೆ ಎರಡು ಪ್ರಮುಖ ರಾಜಕೀಯ ಪಕ್ಷಗಳು ರಾಜ್ಯಸಭಾ ಸದಸ್ಯ ಸ್ಥಾನವನ್ನು ಆಫರ್ ಮಾಡಿದವು. ಆದರೆ ನಾನು ರಾಜಕೀಯಕ್ಕೆ ಮಾನಸಿಕವಾಗಿ ಸಿದ್ಧನಿಲ್ಲ. ಹಾಗಾಗಿ ಎರಡೂ ಅವಕಾಶಗಳನ್ನು ನಿರಾಕರಿಸಿದೆ. ಇನ್ನು ರಾಜಕೀಯ ಪಕ್ಷ ಸೇರುವಂತೆ ಹಲವು ಆಹ್ವಾನಗಳು ನನಗೆ ಬಂದಿವೆ ಎಂದಿದ್ದಾರೆ. ಅಲ್ಲದೇ ನಾನು ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ. ಭವಿಷ್ಯದಲ್ಲಿ ಅದು ಸಂಭವಿಸಿದರೆ ನಾನು ಸಂಪೂರ್ಣವಾಗಿ ನನ್ನನ್ನು ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದಿದ್ದಾರೆ. ಇದೇ ವೇಳೆ  ಸರಿಯಾದ ದಾಖಲೆಗಳನ್ನ ನೋಡುತ್ತಿದ್ದಂತೆಯೇ ಐಟಿ ಅಧಿಕಾರಿಗಳು ಖುಷಿಪಟ್ಟಿದ್ದಾಗಿ ತಿಳಿಸಿದ್ದಾರೆ ಸೋನು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd