ಸಿನಿಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ : ಶೀಘ್ರದಲ್ಲೇ 100 % ಸೀಟಿಂಗ್ ಗೆ ಅನುಮತಿ..!

1 min read

ಸಿನಿಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ : ಶೀಘ್ರದಲ್ಲೇ 100 % ಸೀಟಿಂಗ್ ಗೆ ಅನುಮತಿ..!

ಕೋವಿಡ್ ಹೆಚ್ಚಳವಾದ ಕಾರಣ 2ನೇ ಅಲೆ ವೇಳೆ ಲಾಕ್ ಡೌನ್ ಹೇರಲಾಗಿತ್ತು. ಲಾಕ್ ಡೌನ್ ತೆರವಾದ ಮೇಲೆ ಎಲ್ಲದರ ನಿರ್ಬಂಧಗಳನ್ನ ಸಡಿಲ ಮಾಡಿಕೊಂಡು ಬಂದರಾದ್ರೂ ಸಿನಿಮಾ ಮಂದಿರಗಳಲ್ಲಿ 50 % ಸೀಟಿಂಗ್ ಗೆ ಮಾತ್ರವೇ ಅವಕಾಶ ನೀಡಲಾಗಿದೆ. ಇದ್ರಿಂದಾಗಿ ಸಿನಿಮಾಮಂದಿರಗಳ ಮಾಲೀಕರು ತೀರ ನಷ್ಟ ಅನುಭವಿಸುವಂತಾಗಿದ್ರೆ , ಬಿಡುಗಡೆಯಾಗಬೇಕಾಗಿರುವ ಸಾಲು ಸಾಲು ಸಿನಿಮಾಗಳು ಮೀನಾಮೇಷ ಎಣಿಸುತ್ತಿವೆ. ಮತ್ತೊಂದೆಡೆ ಸ್ಟಾರ್ ಗಳ ಸಿನಿಮಾಗಳು 100 % ಸೀಟಿಂಗ್ ಅವಕಾಶಕ್ಕೆ ಕಾಯ್ತಾಯಿದ್ದಾರೆ.

ಸದ್ಯದ ಮಾಹಿತಿ ಪ್ರಕಾರ ಶೀಘ್ರವೇ ಸರ್ಕಾರವು ಚಿತ್ರಮಂದಿರಗಳಲ್ಲಿ 100 % ಸೀಟಿಂಗ್ ಗೆ ಗ್ರೀನ್ ಸಿಗ್ನಲ್ ನೀಡಲಿದೆ ಎನ್ನಲಾಗ್ತಿದೆ. ಅಂದ್ರೆ ವದಂತಿಗಳ ಪ್ರಕಾರ ಅಕ್ಟೋಬರ್ ಅಂತ್ಯದಷ್ಟ್ರಲ್ಲಿ ಸರ್ಕಾರ ಈ ನಿರ್ಧಾರ ಹೊರಹಾಕುವ ಸಾಧ್ಯತೆಯಿದೆ.  ಮೂಲಗಳ ಪ್ರಕಾರ ತಜ್ಞರ ಸಲಹೆ ಪಡೆದು ಸರ್ಕಾರ ಶೀಘ್ರವೇ ಒಂದು ಅಂತಿಮ ನಿರ್ಧಾರಕ್ಕೆ ಬರಲಿದೆ. ಅದಾಗ್ಯೂ ಕೆಲ ಕಡ್ಡಾಯವಾಗಿ ಪಾಲಿಸಲೇಬೇಕಾದ  ನಿರ್ಬಂಧಗಳನ್ನೂ ವಿಧಿಸಬಹುದಾಗಿದೆ. ಇನ್ನೂ ಮಾಸ್ಕ್ ಧಾರಣೆ  ಸ್ಯಾನಿಟೈಸಿಂಗ್ ಕಡ್ಡಾಯವಾಗಿರಲಿದೆ. ಅಂದ್ಹಾಗೆ ದುನಿಯಾ ವಿಜ ನಟನೆಯ ಸಲಗ , ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 , ಶಿವರಾಜ್ ಕುಮಾರ್ ಅಭಿನಯದ ಭಜರಂಗಿ2 ಹೀಗೆ ಸಾಲು ಸಾಲು ಸ್ಟಾರ್ ಗಳ ಸಿನಿಮಾಗಳು ರಿಲೀಸ್ ಆಗೋದಿದೆ.

ಐಟಿ ರೈಡ್ ಬಗ್ಗೆ ಮೊದಲ ಬಾರಿಗೆ ಮೌನ ಮುರಿದ ಸೋನು ಹೇಳಿದ್ದೇನು..?

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd