ಕಾಂಗರೋಗಳ ನಾಡು… ಹಚ್ಚ ಹಸಿರಿಂದ ಕಂಗೊಳಿಸುವ ಸುಂದರ ದೇಶ.. ಆಸ್ಟ್ರೇಲಿಯಾ ಬಗ್ಗೆ INTERSTING FACTS

1 min read

ಕಾಂಗರೋಗಳ ನಾಡು… ಹಚ್ಚ ಹಸಿರಿಂದ ಕಂಗೊಳಿಸುವ ಸುಂದರ ದೇಶ.. ಆಸ್ಟ್ರೇಲಿಯಾ ಬಗ್ಗೆ INTERSTING FACTS

ಆಸ್ಟ್ರೇಲಿಯಾ… ವಿಶ್ವದ ಅತ್ಯಂತ ಸುಂದರ ದೇಶ , ಸಮುದ್ರಗಳ ಭೂಮಿ , ಶ್ರೀಮಂತ ದೇಶ , ಹೆಚ್ಚು ಪ್ರಾಣಿಗಳಿರುವ ದೇಶ. ಈ ದೇಶದ ಸುಮಾರು 91 % ಭಾಗ ಕೇವಲ ಗಿಡ ಮರಗಳು ಹಚ್ಚಿ ಹಸಿರಿನಿಂದಲೇ ತುಂಬಿಕೊಂಡಿದೆ. ಹೆಚ್ಚು ಅಪಾಯಕಾರಿ ಹಾವುಗಳು ನೋಡೋಕೆ ಸಿಗೋದು ಕೂಡ ಇದೇ ದೇಶದಲ್ಲಿ. ಈ ದೇಶದ ಬಗ್ಗೆ ತಿಳಿದುಕೊಳ್ಳುವ ವಿಚಾರಗಳು ಸಾಕಷ್ಟಿವೆ…

ಮೊದಲನೇಯದ್ದಾಗಿ ಈ ದೇಶದ ಅಧಿಕೃತ ಹೆಸರು – ದಿ ಕಾಮನ್ ವೆಲ್ತ್ ಆಫ್ ಆಸ್ಟ್ರೇಲಿಯಾ

ಒಟ್ಟಾರೆ ಜನಸಂಖ್ಯೆ – ಸುಮಾರು 2 ಕೋಟಿ 57 ಲಕ್ಷ

86 % ಜನರು ನಗರದಲ್ಲಿ ವಾಸವಾಗಿದ್ರೆ 14% ಜನ ಹಳ್ಳಿಗಳಲ್ಲಿ ವಾಸವಾಗಿದ್ದಾರೆ.

ಈ ದೇಶದ ರಾಜಧಾನಿ – ಕ್ಯಾನ್ಬರಾ. ಆದ್ರೆ ಕ್ಯಾನ್ಬರಾವನ್ನೇ ದೇಶದ ರಾಜಧಾನಿ ಮಾಡಿದಕ್ಕೆ ಕಾರಣ ಕೇಳಿದ್ರೆ ಆಶ್ಚರ್ಯ ಆಗುತ್ತೆ. ಬಹಳ ಜನರು ಮೆಲ್ಬಾರ್ನ್ ಅಥವ ಸಿಡ್ನಿ ಈ ದೇಶದ ರಾಜಧಾನಿ  ಎಂದು ಅಂದುಕೊಂಡಿದ್ದಾರೆ. ಈ ನಗರಗಳು ಬಹಳ ದೊಡ್ಡ ನಗರಗಳೇ ಆದ್ರೂ ಕೂಡ ಇವುಗಳ ಬದಲಾಗಿ ಕ್ಯಾನ್ಬರಾವನ್ನ ರಾಜಧಾನಿ ಮಾಡಲಾಗಿದೆ. ಯಾಕಂದ್ರೆ ಒಂದು ವೇಳೆ ಸಿಡ್ನಿ ಅಥವ ಮೆಲ್ಬಾರ್ನ್ ಇವೆರಡರ ಪೈಕಿ ಒಂದು ನಗರವನ್ನ ರಾಜಧಾನಿಯಾಗಿ ಮಾಡಿದ್ರೆ ಆಗ ಈ ಎರೆಡೂ ನಗರಗಳ ನಡುವೆ ಗಲಾಟೆ , ಗಲಭೆ ಶುರುವಾಗುತ್ತೆ ಅನ್ನುವ ಲೆಕ್ಕಾಚಾರದಲ್ಲಿ ಅಲ್ಲಿನ ಸರ್ಕಾರ ಈ ನಿರ್ಧಾರ ಮಾಡಿದ್ಯಂತೆ.

ಈ ದೇಶವನ್ನ ದಿ ಲ್ಯಾಂಡ್ ಆಫ್ ದ ಬೀಚಸ್ ಅಂತ ಕೂಡ ಕರೆಯಲಾಗುತ್ತದೆ. ಕಾರಣ ಈ ದೇಶದಲ್ಲಿರುವ ಎಲ್ಲಾ ಸಮುದ್ರಗಳನ್ನ ಸುತ್ತಾಡಬೇಕಂದ್ರೆ ಸುಮಾರು 27 ವರ್ಷ ಬೇಕಾಗುತ್ತದೆ ಎನ್ನಲಾಗುತ್ತದೆ. ಹೌದು ಇದರಿಂದಲೇ ಅಂದಾಜಿಸಬಹುದು ಈ ದೇಶದಲ್ಲಿ ಅದೆಷ್ಟು ಬೀಚ್ ಗಳಿರಬಹುದು ಅಂತ.

ವಾಟರ್ ಗೇಮ್ಸ್ ನಲ್ಲೂ ಕೂಡ ಆಸ್ಟ್ರೇಲಿಯಾ ವಿಶ್ವದಲ್ಲೇ   ಉತ್ತಮ ತಾಣ ಎನ್ನಲಾಗುತ್ತದೆ. ಜೊತೆಗೆ ಇಲ್ಲಿ ಸರ್ಫಿಂಗ್ ಜನಪ್ರಿಯ ವಾಟರ್ ಗೇಮ್ ಆಗಿದೆ.

ಆಸ್ಟ್ರೇಲಿಯಾದಲ್ಲಿ ಸುಮಾರು 200 ಭಾಷೆಗಳನ್ನ ಅಲ್ಲಿನ ಜನರು ಮಾತನಾಡುತ್ತಾರೆ. ಇದ್ರಲ್ಲಿ 45 ದೇಸಿ ಬಾಷೆಗಳಾಗಿದೆ. ಇನ್ನೂ ಈ ದೇಶದ ಒಟ್ಟು ಜನಸಂಖ್ಯೆಯ 30 % ರಷ್ಟು ಬಾಗದ ಜನರು ಬೇರೆ ಬೇರೆ ದೇಶಗಳಿಂದ ಬಂದು ಇಲ್ಲಿ ಸೆಟಲ್ ಆಗಿದ್ದಾರೆ. ಮೆಲ್ಬರ್ನ್ ನಗರದ ಒಟ್ಟು 60 % ಜನರು ಗ್ರೀಕ್ ದೇಶದಿಂದ ಬಂದು ಇಲ್ಲಿ ನೆಲೆಸಿದವರೇ ಆಗಿದ್ದಾರೆ.

ಆಶ್ಚರ್ಯಕರ ಸಂಗತಿಯೆಂದ್ರೆ ಬಹುತೇಕರು ಅಂದುಕೊಂಡಿರುವಂತೆ ಆಸ್ಟ್ರೇಲಿಯಾ ದೇಶದಲ್ಲಿ ಸಾಕ್ಷರತಾ ದರ ಉತ್ತಮವಾಗಿಲ್ಲ. ಅಂದ್ರೆ ಇಒಲ್ಲಿನ ಲಿಟ್ರೆಸಿ ರೇಟ್ ತೀರಾ ಕಡಿಮೆಯಿದೆ. ಅಂದ್ರೆ 44 %.

ಇನ್ನೂ ಇಂಟರೆಸ್ಟಿಂಗ್ ಅಂದ್ರೆ ಈ ದೇಶದಲ್ಲಿ ಮನಷ್ಯಯರಿಗಿಂತ ಹೆಚ್ಚಾಗಿ ಪ್ರಾಣಿಗಳಿವೆ. ಇಲ್ಲಿ 2.5 ಕೋಟಿ ಜಜನರಿದ್ದಾರೆ. ಆದ್ರೆ ಸುಮಾರು 15 ಕೋಟಿ ಮೇಕೆ ಕುರಿಗಳಿವೆ. ಒಬ್ಬ ಮನಷ್ಯನ ಸರಾಸರಿ 6 ಮೇಕೆಗಳಿರುತ್ತವೆ. ಇಲ್ಲಿ ಮನುಷ್ಯರಿಗಿಂತಲೂ ಹೆಚ್ಚು ಕಾಂಗರೋಗಳಿವೆ. ಇದೇ ದೇಶದಲ್ಲಿ ವಿಶ್ವದ ಅತ್ಯಂತ ವಿಷಕಾರಿ ಹಾವುಗಳು ಕೂಡ ಇವೆ. ಆಸ್ಟ್ರೇಲಿಯಾದಲ್ಲಿ ಸ್ವಿಟ್ಜರ್ ಲ್ಯಾಂಡ್ ಗಿಂತಲೂ ಅತಿ ಹೆಚ್ಚು ಸ್ನೋ ಫಾಲ್ ಆಗುತ್ತದೆ. ಹೌದು ಆಸ್ಟ್ರೀಲಿಯಾದಲ್ಲಿನ ಆಲ್ಪ್ಸ್ ಪರ್ವತ ಪ್ರದೇಶದಲ್ಲಿ ಸ್ವಿಟ್ಜರ್ ಲ್ಯಾಂಡ್ ಗಿಂತಲೂ ಹೆಚ್ಚು ಸ್ನೋ ಫಾಲ್ ಆಗುತ್ತದೆ.

ಇಡೀ ವಿಶ್ವದಲ್ಲಿ ಅತಿ ಹೆಚ್ಚು ಜೂಜಾಟ ಅಥವ ಗ್ಯಾಂಬ್ಲಿಂಗ್  ಆಡಲಾಗುವ ದೇಶವಿದು. ಇಲ್ಲಿ ಸುಮಾರು 80%ಗಿಂತಲೂ ಹೆಚ್ಚು ಜನರು ಗದ್ಯಾಂಬ್ಲಿಂಗ್ ನಲ್ಲಿ    ತೊಡಗಗಿರುತ್ತಾರೆ. ಗ್ಯಾಂಬ್ಲಿಂಗ್ ಕ್ರೇಜ್ ಇರುವವರಿಗೆ ಇದೊಂದು ಡ್ರೀಮ್ ಡೆಸ್ಟಿನೇಷನ್.

ಆಸ್ಟ್ರೇಲಿಯಾದಲ್ಲಿರುವ ಪಿಂಕ್ ಅಂದ್ರೆ ಗುಲಾಬಿ ನದಿ  ವರ್ಲ್ಡ್ ಫೇಮಸ್. ಲೇಕ್ ಹಿಲ್ಲರ್ ಹೆಸರಿನ ಈ ಸುಂದರ ನದಿ ಸಾಕಷ್ಟು ಪ್ರವಾಸಿಗರನ್ನ ತನ್ನತ್ತ ಆಕರ್ಷಿಸುತ್ತದೆ. ಆದ್ರೆ ಈ ನದಿಯ ಬಣ್ಣ ಗುಲಾಬಿಯಾಗಿರುವದಕ್ಕೆ ಮಾತ್ರ ಈ ವರೆಗೂ ಸರಿಯಾದ ಕಾರಣ   ಗೊತ್ತಾಗಿಲ್ಲ.

ಈ ದೇಶದಲ್ಲಿರುವ ಕ್ರಿಸ್ಟ್ ಮಸ್  ಐಲ್ಯಾಂಡ್  ಏಡಿಗಳಿಗೆ ಫೇಮಸ್.. ಅಂದ್ರೆ ಈ ದ್ವೀಪದಲ್ಲಿ  ಮನುಷ್ಯರು ವಾಸಿಸುವುದಿಲ್ಲ. ಬದಲಾಗಿ ಇದೊಂದು ಏಡಿಗಳ ಸಾಮ್ರಾಜ್ಯ ಎನ್ನಬಹುದು.

ಇಲ್ಲಿನ ಬ್ರಿಸ್ ಬೇನ್ ದೇಶದಲ್ಲಿ ಪರತಿ ವರ್ಷ ಜಿರಳೆಗಳ ನಡುವೆ ರೇಸಿಂಗ್ ಸ್ಪರ್ದೇ ಏರ್ಪಡಿಸಲಾಗುತ್ತದೆ. ಈ ಸ್ಪರ್ಧೆಯಲ್ಲಿ ಬಾಗಿಯಾಗುವ ಸಾವಿರಾರು ಮಂದಿ ಬೆಟ್ಟಿಂಗ್ ಗಳನ್ನ ಕೂಡ ಕಟ್ಟಿಕೊಳ್ತಾರೆ.

ಪ್ರವಾಸಿ ತಾಣಗಳು

ಸಿಡ್ನಿ – ಆಸ್ಟ್ರೇಲಿಯಾದ ಸುಂದರ ಬಹುದೊಡ್ಡ ನಗರ ಹಾಗೂ ಜನಪ್ರಿಯ ಸಿಟಿ ಕೂಡ ಹೌದು

ಇಲ್ಲಿನ ಒಪೆರಾ ಹೌಸ್ , ಹಂಟರ್ ವ್ಯಾಲಿ ವಿನ್ ಯಾರ್ಡ್ಸ್, ಹಾರ್ಬರ್ ಹೈಲೈಟ್ಸ್ ಕ್ರೂಸ್ , ಡಾರ್ಲಿಂಗ್ ಹಾರ್ಬರ್  ಹೀಗೆ ಅನೇಕ ಪ್ರೇಕ್ಷಣೀಯ ಸ್ಥಳಗಳು ಕೇವಲ ಸಿಡ್ನಿಯೊಂದ್ರಲ್ಲಿಯೇ ಸ್ಥಿತವಾಗಿದೆ.

ಕಾಂಗರೋ ಐಲ್ಯಾಂಡ್ – ಆಸ್ಟ್ರೇಲಿಯಾದ ಮೂಲತ್ವದ ಪ್ರತೀಕ , ಆಸ್ಟ್ರೇಲಿಯಾದ ಅಭಿವೃದ್ಧಿಯ ಪ್ರತೀಕ , ರಾಷ್ಟ್ರೀಯ ಪ್ರಾಣಿ ಕಾಂಗರೋಗಳು.  ಈ ಕಾಂಗರೋ ದ್ವೀಪವು ಕಾಂಗೊರೋಗಳಿಗೆ ಹೆಚ್ಚು ಫೇಮಸ್.

ಗ್ರೇಟ್ ಬ್ಯಾರಿಯರ್ ರೀಫ್ , ತಸ್ಮಾನಿಯಾ, ಕಾಕಾಡು ನ್ಯಾಷನಲ್ ಪಾರ್ಕ್ , ಫ್ರೇಸರ್ ಐಲ್ಯಾಂಡ್, ಕಾರ್ಲ್ ಟನ್ ಗಾರ್ಡನ್ ಇನ್ನೂ ಅನೇಕ ಸ್ಥಳಗಳಿವೆ.

ವಿಶ್ವದ ಏಕಮಾತ್ರ ಸಂಪೂರ್ಣ ಹಿಂದೂ ದೇಶ ನೇಪಾಳದ ಬಗ್ಗೆ ತಿಳಿದಿರದ ವಿಚಾರಗಳು..!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd