ಸಲೂನ್ ನಲ್ಲಿ ಮಾಡೆಲ್ ಹೇರ್ ಕಟ್ ವೇಳೆ ಎಡವಟ್ಟು – 2 ಕೋಟಿ ದಂಡ
ನವದೆಹಲಿ : ಸಲೂನ್ ನಲ್ಲಿ ಮಾಡೆಲ್ ಒಬ್ರು ಹೇರ್ ಕಟ್ ಮಾಡಿಸಿಕೊಳ್ಳಲು ಹೋಗಿ ತಮ್ಮ ಕೇಶ ವಿನ್ಯಾಸವನ್ನೇ ಹಾಳು ಮಾಡಿಕೊಳ್ಳುವಂತಾಗಿದೆ. ಖ್ಯಾತ ರೂಪದರ್ಶಿಯಾಗಬೇಕು ಎಂಬ ಆಸೆಯಿಂದ ಹೇರ್ ಕಟ್ ಮಾಡಿಸಿಕೊಳ್ಳಲು ಹೋಗಿದ್ದ ಮಹಿಳೆಗೆ ತಪ್ಪಾಗಿ ಹೇರ್ ಕಟ್ ಮಾಡಿ ಕೆಟ್ಟದಾಗಿ ಕಾಣಿಸುವಂತೆ ಮಾಡಿದಕ್ಕೆ ಇದೀಗ 2 ಕೋಟಿ ರೂಪಾಯಿ ದಂಡ ಕಟ್ಟುವಂತ ಶಿಕ್ಷೆ ಎದುರಿಸುವಂತಾಗಿದೆ. ಈ ರೀತಿ ಹೇರ್ ಕಟ್ ಮಾಡುವಾಗ ಎಡವಟ್ಟು ಮಾಡಿರುವುದಕ್ಕೆ ಮಾಡೆಲ್ ಗೆ 2 ಕೋಟಿ ಪರಿಹಾರ ನೀಡುವಂತೆ ಹೋಟೆಲ್ ಒಂದಕ್ಕೆ NCDRC (National Consumer Disputes Redressal Commission)ಆದೇಶ ನೀಡಿದೆ.
ರೂಪದರ್ಶಿ ಆಶ್ನಾ ರಾಯ್ ಅವರಿಗೆ ತಪ್ಪಾದ ಹೇರ್ ಕಟ್ ಮತ್ತು ಚಿಕಿತ್ಸೆ ಮಾಡಿದ್ದಕ್ಕಾಗಿ 2 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ (NCDRC) ದೆಹಲಿ ಮೂಲದ ಸಲೂನ್ ಗೆ ಆದೇಶ ನೀಡಿದೆ. ಆಶ್ನಾ ತಮ್ಮ ನೀಳ ಕೇಶದ ಕಾರಣದಿಂದಾಗಿ ಹಲವಾರು ಕಂಪೆನಿಗಳ ಕೇಶ ಉತ್ಪನ್ನಗಳ ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಕಾಣಿಸಿಕೊಳ್ಳುತ್ತಿದ್ದರು. 2018ರಲ್ಲಿ ಐಷಾರಾಮಿ ಹೋಟೆಲ್ ನಲ್ಲಿ ಇರುವ ಸಲೂನ್‍ಗೆ ಅವರು ಕೇಶವಿನ್ಯಾಸಕ್ಕಾಗಿ ಭೇಟಿ ನೀಡಿದ್ದರು. ಈ ವೇಳೆ ಅವರ ಕೂದಲು ಸಂಪೂರ್ಣವಾಗಿ ಹಾಳಾಗಿದೆ.
ಅಸ್ಸಾಂ : ಒತ್ತುವರಿ ತೆರವು ವೇಳೆ ಸ್ಥಳೀಯರ ಮೇಲೆ ಹಲ್ಲೆ : ಮೃಗದಂತೆ ವರ್ತಿಸಿದ ಕ್ಯಾಮರಾಮ್ಯಾನ್ – ವಿಡಿಯೋ ವೈರಲ್
ಇದ್ರಿಂದಾಗಿ ಅವರ ಕೈನಿಂದ ಜಾಹೀರಾತುಗಳು ತಪ್ಪಿಹೋಗುವ ಸಂದರ್ಭ ಎದುರಾಗಿದೆ. ಹೀಗಾಗಿ 2018 ರಲ್ಲಿ ಕಂಪೆನಿಯ ವಿರುದ್ಧ NCDRCಗೆ ಅವರು ದೂರು ನೀಡಿದ್ದರು. ಈ ಕುರಿತಾಗಿ ವಿಚಾರಣೆ ನಡೆಸಿದ ಎನ್‍ಸಿಡಿಆರ್ ಅಧ್ಯಕ್ಷ ಆರ್.ಕೆ ಅಗರ್‍ವಾಲ್ ಮತ್ತು ಡಾ.ಎಂ ಕಂಠೀಕರ್ ಅವರಿದ್ದ ಪೀಠ ತಪ್ಪಾದ ಹೇರ್ ಕಟ್ ನಿಂದಾಗಿ ಅವರ ಮಾಡೆಲ್ ಕನಸು ಹಾಳಾಗಿದ್ದು, ಮಾನಸಿಕವಾಗಿ ಅವರು ನೊಂದಿದ್ದಾರೆ. ಹೀಗಾಗಿ ಪರಿಹಾರ ನೀಡಬೇಕು ಎಂದು ಆದೇಶಿಸಿದ್ದಾರೆ.








