ಅಸ್ಸಾಂ : ಒತ್ತುವರಿ ತೆರವು ವೇಳೆ ಸ್ಥಳೀಯರ ಮೇಲೆ ಹಲ್ಲೆ : ಮೃಗದಂತೆ ವರ್ತಿಸಿದ ಕ್ಯಾಮರಾಮ್ಯಾನ್ – ವಿಡಿಯೋ ವೈರಲ್

1 min read

ಅಸ್ಸಾಂ : ಒತ್ತುವರಿ ತೆರವು ವೇಳೆ ಸ್ಥಳೀಯರ ಮೇಲೆ ಹಲ್ಲೆ : ಮೃಗದಂತೆ ವರ್ತಿಸಿದ ಕ್ಯಾಮರಾಮ್ಯಾನ್ – ವಿಡಿಯೋ ವೈರಲ್

ಅಸ್ಸಾಂ : ಅಸ್ಸಾಂನ ದರಾಂಗ್ ಜಿಲ್ಲೆಯಲ್ಲಿ ಒತ್ತುವರಿ ತೆರವುಗೊಳಿಸುವ ಕಾರ್ಯಾಚರಣೆ ವೇಳೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆಂದು ಪೊಲೀಸರು ಸ್ಥಳೀಯರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಸುಮಾರು 15 -20 ಜನರು ಒಬ್ಬ ವ್ಯಕ್ತಿಯ ಮೇಲೆ ಲಾಠಿಗಳಿಂದೆಲ್ಲಾ ಹಲ್ಲೆ ನಡೆಸಿದ್ದು,  ಆ ವ್ಯಕ್ತಿ ಬಲಿಯಾಗಿದ್ದಾನೆ.  ಬಂದೂಕು, ಲಾಠಿಗಳಿಂದ ಸಜ್ಜಿತರಾಗಿದ್ದ ಪೊಲೀಸರು ಜನರನ್ನು ಅಟ್ಟಿಸಿಕೊಂಡು ಹೋಗಿ ಥಳಿಸುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದಕ್ಕಿಂತ ಇನ್ನೂ ಕ್ರೂರ ಅಂದ್ರೆಪೊಲೀಸರಿಂದ ಬಲಿಯಾಗಿದ್ದ ವ್ಯಕ್ತಿಯ ಮೇಲೆ ಛಾಯಾಗ್ರಾಹಕನೋರ್ವ  ಎಗರಿ ಎಗರಿ ಕ್ರೂರವಾಗಿ ಆತನ ದೇಹದ ಮೇಲೆ ಮತ್ತೆ ಮತ್ತೆ ದಾಳಿ ಮಾಡಿದ್ದಾನೆ. ಪೊಲೀಸರು ತಡೆದ್ರೂ ಸಹ ಆತ ಇದನ್ನೇ ಮುಂದುವರೆಸಿರುವುದು ವಿಡಿಯೋದಲ್ಲಿ ದಾಖಲಾಗಿದ್ದು, ಪೊಲೀಸರು ಕ್ಯಾಮರಾ ಮ್ಯಾನ್ ನನ್ನ   ಬಂಧಿಸಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದು, ನೆಟ್ಟಿಗರ ಕಣ್ಣು ಕೆಂಪಾಗಿಸಿದೆ. ಜೊತೆಗೆ ಈ ಕುರಿತಾದ ಇನ್ನೂ  ಕೆಲ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಸಂಘರ್ಷದ ಬಗ್ಗೆ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಧೋಲ್​ಪುರದಲ್ಲಿ ಸುಮಾರು 800 ಕುಟುಂಬಗಳನ್ನು ಅಸ್ಸಾಂ ಸರ್ಕಾರ ತೆರವುಗೊಳಿಸಿತ್ತು. ಕೃಷಿ ಯೋಜನೆಗಾಗಿ 4,500 ಬಿಘಾದಷ್ಟು ಜಮೀನನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಸರ್ಕಾರ ಮುಂದಾಗಿದೆ. ಆದ್ರೆ ಇದನ್ನ ವಿರೋಧಿಸಿ ಸ್ಥಳೀಯರು ಕಲ್ಲುತೂರಾಟ ನಡೆಸಿದ್ದರಿಂದ ಅನಿವಾರ್ಯವಾಗಿ ಬಲಪ್ರಯೋಗ ಮಾಡಬೇಕಾಯಿತು ಎಂದು ಪೊಲೀಸರು ಹೇಳಿದ್ದಾರೆ. ಘಟನೆಯಲ್ಲಿ 9 ಪೊಲೀಸ್ ಸಿಬ್ಬಂದಿ, 2 ನಾಗರಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸುಶಾಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಪಾತ್ರದ ಬಗ್ಗೆ ಮೋದಿ – ಕಮಲಾ ಹ್ಯಾರಿಸ್ ಚರ್ಚೆ

ಸ್ಥಳೀಯರು ಸಂಘರ್ಷಕ್ಕೆ ಇಳಿದ ಕಾರಣ ಒತ್ತುವರಿ ತೆರವು ಕಾರ್ಯಾಚರಣೆ ಪೂರ್ಣಗೊಳ್ಳಲಿಲ್ಲ. ಪ್ರಸ್ತುತ ಪೊಲೀಸರು ಅಲ್ಲಿಂದ ವಾಪಸ್ ಬಂದಿದ್ದಾರೆ. ನಂತರದ ದಿನಗಳಲ್ಲಿ ಪರಿಸ್ಥಿತಿಯನ್ನು ಮತ್ತೊಮ್ಮೆ ಅವಲೋಕಿಸುತ್ತೇವೆ ಎಂದು ತಿಳಿಸಿದ್ದಾರೆ. ಈ ನಡುವೆ ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಅಸ್ಸಾಂನ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಅಸ್ಸಾಂ ರಾಜ್ಯವು ಸರ್ಕಾರ ಪ್ರಾಯೋಜಿತ ಬೆಂಕಿಯಲ್ಲಿ ಬೇಯುತ್ತಿದೆ. ರಾಜ್ಯದ ಸೋದರ – ಸೋದರರೊಂದಿಗೆ ನಾನು ನಿಲ್ಲುತ್ತೇನೆ. ಭಾರತಾಂಬೆಯ ಯಾವುದೇ ಮಕ್ಕಳಿಗೆ ಹೀಗಾಗಬಾರದು ಎಂದು ಹೇಳಿದ್ದಾರೆ.

 

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd