ಸಮಂತಾ – ನಾಗಚೈತನ್ಯ ಡಿವೋರ್ಸ್ ಪಡೆಯೋದಂತೂ ಪಕ್ಕಾನಾ..?
ಟಾಲಿವುಡ್ ಅಷ್ಟೇ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯ ಕ್ಯೂಟ್ ಅಂಡ್ ಪಾಪ್ಯುಲರ್ ಜೋಡಿ ಅಂತಲೇ ಅನಿಸಿಕೊಂಡಿದ್ದ ಸಮಂತಾ ನಾಗಚೈತನ್ಯ ದಂಪತಿ ಹಲವಾರು ವರ್ಷಗಳ ಕಾಲ ಪ್ರೀತಿಸಿ ವಿವಾಹವಾಗಿದ್ದರು. ಆದ್ರೆ ಕೆಲ ದಿನಗಳಿಂದ ಸಮಂತಾ ಅಕ್ಕಿನೇನಿ ಕುಟುಂಬ ಹಾಗೂ ನಾಗಚೈತನ್ಯರಿಂದ ಅಂತರ ಕಾಯ್ದುಕೊಂಡಿದ್ದು, ಇವರಿಬ್ಬರೂ ಡಿವೋರ್ಸ್ ಪಡೆಯುತ್ತಾರಾ ಅನ್ನುವ ಮಾತುಗಳು ಕೇಳಿಬರುತ್ತಿವೆ. ಈ ನಡುವೆ ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹೆಸರನ್ನ ಕೂಡ ಬದಲಾಯಿಸಿ ಕೇವಲ @S ಎಂದು ಹಾಕುವ ಮೂಲಕ ವದಂತಿಗಳ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ಇನ್ನೂ ಈ ಜೋಡಿ ತಮ್ಮ ಕ್ಯೂಟ್ ಮೂಮೆಂಟ್ ಗಳ ಫೋಟೋಸ್ ವಿಡಿಯೋಗಳನ್ನ ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಾ ನೆಟ್ಟಿಗರ ಗಮನ ಸೆಳೆಯುತ್ತಿತ್ತು. ಆದ್ರೆ ಇತ್ತೀಚೆಗಿನ ದಿನಗಳಲ್ಲಿ ಇದು ಕೂಡ ಮಾಯವಾಗಿದೆ. ಅಲ್ಲದೇ ಈ ಜೋಡಿ ಒಟ್ಟಾಗಿ ಕಾಣಿಸಿಕೊಳ್ತಿರೋದು ತೀರ ಕಡಿಮೆಯೇ ಅನ್ನುವಂತಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಈ ಬಗ್ಗೆ ಪ್ರಶ್ನೆಗಳನ್ನ ಕೇಳುದ್ರೂ ನಾಗಚೈತನ್ಉಯ ಹಾಗೂ ಸಮಂತಾ ಸ್ಪಷ್ಟವಾಗಿ ಉತ್ತರ ಕೊಡದೇ ನುಣುಚಿಕೊಳ್ತಿದ್ದಾರೆ. ವದಂತಿಗಳು ಸುಳ್ಳು ಅಂದ್ರೂ ಸ್ಪಷ್ಟವಾಗಿ ಉತ್ತರ ನೀಡದೇ ಅನುಮಾನಗಳನ್ನ ಬಲಗೊಳಿಸುತ್ತಿದ್ದಾರೆ.
ಇದೀಗ ಈ ದಂಪತಿ ಡಿವೋರ್ಸ್ ಪಡೆಯೋದು ಪಕ್ಕಾ ಅನ್ನುವ ಮಾತುಗಳು ಕೇಳಿಬರುತ್ತಿದೆ. ಅದು ಅಲ್ಲದೇ ಇವರ ವಾರ್ಷಿಕೋತ್ಸವ ದಿನದಂದೇ ( ಅಕ್ಟೋಬರ್ 7 ) ಡಿವೋರ್ಸ್ ಬಗ್ಗೆ ಹಬ್ಬಿರೋ ವದಂತಿ ಬಗ್ಗೆ ತೆರೆ ಎಳೆಯಲಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಇವರು ಡಿವೋರ್ಸ್ ಪಡೆದಿದ್ದೇ ಆದ್ರೆ ಈ ಜೋಡಿಯ ಅಭಿಮಾನಿಗಳಿಗೆ ತೀವ್ರ ನಿರಾಸೆ ಉಂಟಾಗಲಿದೆ. ಸದ್ಯ ನಾಗಚೈತನ್ಯ ಹಾಗೂ ಸಮಂತಾ ಇಬ್ಬರೂ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ. ಸಮಂತಾ ವೆಬ್ ಸೀರಿಸ್ ಜೊತೆಗೆ ನಿರೂಪಣೆಯಲ್ಲೂ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ.