ಸಮಂತಾ ಸಂಸಾರ ಮುರಿದುಬೀಳೋಕೆ ಬೋಲ್ಡ್ ಪಾತ್ರಗಳೇ ಕಾರಣವಾಯ್ತಾ..?
ಹೈದ್ರಾಬಾದ್ : ಟಾಲಿವುಡ್ ನ ಕ್ಯೂಟ್ ಕಪಲ್ ಎನಿಸಿಕೊಂಡಿದ್ದ ಸಮಂತಾ ನಾಗಚೈತನ್ಯ ಸದ್ಯ 10 ವರ್ಷಗಳ ತಮ್ಮ ಸಂಬಂಧಕ್ಕೆ ಎಳ್ಳು ನೀರು ಬಿಟ್ಟು ದೂರ ದೂರ ಎರೆಡು ತೀರ ಅನ್ನೋಹಾಗೆ ಇದ್ದಾರೆ.. ಮದುವೆಯಾಗಿ ನಾಲ್ಕು ವರ್ಷಗಳ ಬಳಿಕ ಡಿವೋರ್ಸ್ ಪಡೆದು ಸದ್ಯ ಇಬ್ರೂ ಕೂಡ ವೃತ್ತಿ ಜೀವನದಲ್ಲಿ ಬ್ಯುಸಿಯಿದ್ದಾರೆ.. ಸಮಂತಾ ಹಾಗೂ ನಾಗಚೈತನ್ಯ ಇಬ್ರೂ ಕೂಡ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಸಿಯಾಗಿದ್ದಾರೆ..
ಆದ್ರೆ ಡಿವೋರ್ಸ್ ಬಳಿಕ ಇವರ ಅಭಿಮಾನಿಗಳು ಶಾಕ್ ಗೆ ಒಳಗಾಗಿದ್ರು.. ಜೊತೆಗೆ ಇಬ್ಬರೂ ಕೂಡ ನೆಟ್ಟಿಗರಿಂದ ತೀವ್ರ ಟ್ರೋಲ್ ಗಳು ಟೀಕೆಗಳಿಗೂ ಗುರಿಯಾಗಬೇಕಾಯ್ತು.. ಆದ್ರೂ ಇಬ್ರೂ ಕೂಡ ಸೈಲೆಂಟಾಗಿಯೇ ಇದ್ರು.. ಆದ್ರೆ ಇತ್ತೀಚೆಗೆ ಸಮಂತಾ ಡಿವೋರ್ಸ್ ನಂತರ ಮನಸ್ಸು ಬಿಚ್ಚಿ ಮಾತನಾಡಿದ್ದರು.. ಅವರ ಹೇಳಿಕೆಯಿಂದ ಅವರು ನಾಗಚೈತನ್ಯ ಅವರನ್ನ ಗುರಿಯಾಗಿಸಿಕೊಂಡು ಮಾತನಾಡಿರುವಂತೆ ಅನ್ನಿಸಿತ್ತು.. ಈಗ ಇವರ ಗೆ ಏನು ಕಾರಣ ಎಂಬ ಟಾಕ್ ಟಾಲಿವುಡ್ ಅಂಗಳದಿಂದ ಕೊಂಚ ಜೋರಾಗಿಯೇ ಸೌಂಡ್ ಮಾಡಲು ಶುರುವಾಗಿದೆ..
ನಟಿ ಸಮಂತಾ ಮದುವೆ ಬಳಿಕ ಸಿನಿಮಾಗಳಲ್ಲಿ ಅಭಿನಯಿಸುವುದು ನಾಗಚೈತನ್ಯ ಕುಟುಂಬಕ್ಕೆ ಇಷ್ಟ ಇರಲಿಲ್ಲ ಎನ್ನುವ ಸುದ್ದಿ ಇದೀಗ ಹೊಸದಾಗಿ ಸುದ್ದಿ ಮಾಡ್ತಿದೆ.. ಆದ್ರೇ ಸೌತ್ ಸಿನಿಮಾ ಇಂಡಸ್ಟ್ರಿಯ ಟಾಪ್ ನಟಿಯರ ಪೈಕಿ ಸಮಂತಾ ಕೂಡ ಒಬ್ಬರು.. ಅವರಿಗೆ ದೊಡ್ಡ ಫ್ಯಾಂಡಮ್ ಇದೆ,. ಬೇಡಿಕೆಯೂ ಅಷ್ಟೇ ಇದೆ.. ಈ ನಡುವೆ ಸಮಂತಾಗೆ ಸಿನಿಮಾಗಳಿಂದ ದೂರ ಉಳಿಯಲು ಇಷ್ಟವಿರಲಿಲ್ಲ ಎನ್ನಲಾಗಿದೆ. ಹೀಗೆ ಸಿನಿಮಾಗಳಲ್ಲಿ ನಟಿಸಲು ಮುಂದುವರೆಸಿದ್ದರು..
ಅದ್ರಲ್ಲೂ ಸಮಂತಾ ಆಯ್ಕೆ ಮಾಡುತ್ತಿದ್ದ ಪಾತ್ರಗಳು ಕುಟುಂಬದವರಿಗೆ ಕಿರಿಕಿರಿ ಉಂಟು ಮಾಡುತ್ತಿತ್ತು ಎನ್ನಲಾಗಿದೆ. ಅದ್ರಲ್ಲೂ ಸೂಪರ್ ಡೀಲಕ್ಸ್ ಮತ್ತು ಫ್ಯಾಮಿಲಿ ಮ್ಯಾನ್ ವೆಬ್ ಸರಣಿಯಲ್ಲಿ ಸಮಂತಾಸಿಕ್ಕಾಪಟ್ಟೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಇದಾದ ನಂತರವೇ ಸಮಂತಾ ನಾಗಚೈತನ್ಯ ನಡುವೆ ಭಿನ್ನಾಭಿಪ್ರಾಯಗಳು ಮೂಡಿ ಅದು ಡಿವೋರ್ಸ್ ಹಂತದ ವರೆಗೂ ತಲುಪಿತು ಎನ್ನಲಾಗ್ತಿದೆ..
ಸದ್ಯ ಡಿವೋರ್ಸ್ ಆದ್ಮೇಲಂತೂ ಸಮಂತಾ ಹಾಗೂ ನಾಗಚೈತನ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿದ್ದಾರೆ.. ಅದ್ರಲ್ಲೂ ಸಮಂತಾ ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿರುವಂತೆ ಕಾಣ್ತಿದೆ.. ಪುಷ್ಪ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಆಗಿ ಐಟಂ ಸಾಂಗ್ ಗೆ ಸಮಂತಾ ಹೆಜ್ಜೆ ಹಾಕಿದ್ದಾರೆ.. ಇದಕ್ಕೆ ಕೆಲವರ ವಿರೋಧವಿದ್ರೂ , ಸಮಂತಾ ಫ್ಯಾನ್ಸ್ ಫಿದಾ ಆಗಿದ್ದಾರೆ.. ಇದಲ್ಲದೇ ಸಮಂತಾ ಫಾರ್ ದ ಫಸ್ಟ್ ಟೈಮ್ ಹಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿದ್ದು ಮೂಲಗಳ ಪ್ರಕಾರ ಈ ಸಿನಿಮಾದಲ್ಲಿ ಅವರ ಪಾತ್ರ ತುಂಬಾ ಬೋಲ್ಡ್ ಆಗಿರಲಿದೆ ಎನ್ನಲಾಗ್ತಿದೆ..