ಹಾಸನದಲ್ಲಿ ಕೊರೊನಾ ಸ್ಫೋಟ | ಇಂದು 1030 ಕೇಸ್ ಪತ್ತೆ
ಹಾಸನ : ಜಿಲ್ಲೆಯಲ್ಲಿ ಕೊರೊನಾ ಮಹಾಸ್ಫೋಟವಾಗಿದ್ದು, ಇಂದು ಒಂದೇ ದಿನ ಸಾವಿರಗಡಿ ದಾಟಿದೆ.
ಇಂದು ಜಿಲ್ಲೆಯಲ್ಲಿ ಹೊಸದಾಗಿ 1030 ಕೇಸ್ ಗಳು ಪತ್ತೆಯಾಗಿವೆ.
ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಸಕ್ರಿಯ ಕೇಸ್ ಗಳ ಸಂಖ್ಯೆ 3051ಕ್ಕೆ ಏರಿದೆ.
ಇಂದು 141 ಮಂದಿ ಹೆಮ್ಮಾರಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ನಿನ್ನೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 500ರ ಗಡಿದಾಟಿತ್ತು. ಇಂದು ಸಾವಿರದ ಗಡಿದಾಟಿರೋದು ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಿಸಿದೆ.