ADVERTISEMENT
Sunday, August 23, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cooking

5 ಸಿಂಪಲ್ ಮತ್ತು ಬಹಲ ಟೇಸ್ಟಿ ಅಡುಗೆ ರೆಸಿಪಿಗಳು ನಿಮಗಾಗಿ..!

Namratha Rao by Namratha Rao
September 26, 2021
in Cooking, Newsbeat, ಅಡುಗೆ
food
Share on FacebookShare on TwitterShare on WhatsappShare on Telegram

5 ಸಿಂಪಲ್ ಮತ್ತು ಬಹಲ ಟೇಸ್ಟಿ ಅಡುಗೆ ರೆಸಿಪಿಗಳು ನಿಮಗಾಗಿ..!

1. ರುಚಿಕರವಾದ ಎಗ್ ಬುರ್ಜಿ

Related posts

ವಂದೇ ಮಾತರಂ ಗೀತೆಯ ಸಾಲುಗಳು ಏಕದೇವೋಪಾಸನೆಯನ್ನು ನಂಬುವವರ ಧಾರ್ಮಿಕ ಭಾವನೆಗೆ ವಿರುದ್ಧವಾಗಿರಬಹುದು ಎಂದ ಶರ್ಮಿಳಾ ಟ್ಯಾಗೋರ್ ವಾದಕ್ಕೆ ಕಂಗನಾ ರನೌತ್ ಖಡಕ್ ಉತ್ತರ

ವಂದೇ ಮಾತರಂ ಗೀತೆಯ ಸಾಲುಗಳು ಏಕದೇವೋಪಾಸನೆಯನ್ನು ನಂಬುವವರ ಧಾರ್ಮಿಕ ಭಾವನೆಗೆ ವಿರುದ್ಧವಾಗಿರಬಹುದು ಎಂದ ಶರ್ಮಿಳಾ ಟ್ಯಾಗೋರ್ ವಾದಕ್ಕೆ ಕಂಗನಾ ರನೌತ್ ಖಡಕ್ ಉತ್ತರ

August 23, 2026
ಮೋದಿ ಸರ್ಕಾರದ ಇ20 ನೀತಿಯಿಂದ ಸಕ್ಕರೆ ಮತ್ತು ಬೆಲ್ಲದ ಬೆಲೆ ಏರಿಕೆ: ನಿಮ್ಮ ಎಥೆನಾಲ್ ನೀತಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ ಎಂದ ಕಾಂಗ್ರೆಸ್ ನಾಯಕ ಜೈರಾಂ ರಮೇಶ್

ಮೋದಿ ಸರ್ಕಾರದ ಇ20 ನೀತಿಯಿಂದ ಸಕ್ಕರೆ ಮತ್ತು ಬೆಲ್ಲದ ಬೆಲೆ ಏರಿಕೆ: ನಿಮ್ಮ ಎಥೆನಾಲ್ ನೀತಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ ಎಂದ ಕಾಂಗ್ರೆಸ್ ನಾಯಕ ಜೈರಾಂ ರಮೇಶ್

August 23, 2026

ಬೇಕಾಗುವ ಸಾಮಾಗ್ರಿಗಳು
ಮೊಟ್ಟೆ – 5
ಎಣ್ಣೆ – 3 ಚಮಚ
ಲವಂಗ – 2
ಜೀರಿಗೆ – 1/2 ಚಮಚ
ಕೊತ್ತಂಬರಿ ಹುಡಿ -1 ಚಮಚ
ಮೆಣಸಿನ ಪುಡಿ – 1 ಚಮಚ
ಮೆಂತೆಕಾಳು-4
ತೆಂಗಿನಕಾಯಿ ತುರಿ -1/2 ಕಪ್
ಸಾಸಿವೆ-1 ಚಮಚ
ಬೆಳ್ಳುಳ್ಳಿ-5 ಎಸಳು
ಈರುಳ್ಳಿ -1,
ಟೊಮೆಟೊ-1
ರುಚಿಗೆ ತಕ್ಕಷ್ಟು ಉಪ್ಪು
ಅರಿಶಿನ-ಚಿಟಿಕೆ
Saakshatv cooking tips how to prepare egg bhurji
ಮಾಡುವ ವಿಧಾನ

ಮೊದಲಿಗೆ ‌ಬಾಣಲೆಯಲ್ಲಿ 1 ಚಮಚ ಎಣ್ಣೆ ಬಿಸಿ ಮಾಡಿ ಜೀರಿಗೆ, ಮೆಂತೆ, ಲವಂಗ ಹಾಕಿ. ನಂತರ ತೆಂಗಿನಕಾಯಿ ತುರಿ ಸೇರಿಸಿ ‌ಮಧ್ಯಮ ಉರಿಯಲ್ಲಿ ಹುರಿಯಿರಿ. ತಣ್ಣಗಾದ ಬಳಿಕ ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ನೀರು ಸೇರಿಸಿ ತರಿತರಿಯಾಗಿ ರುಬ್ಬಿಕೊಳ್ಳಿ
ಈಗ ಪ್ಯಾನ್ ಗೆ 2 ಟೇಬಲ್ ಸ್ಪೂನ್ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಇದಕ್ಕೆ ಸಾಸಿವೆ ಹಾಕಿ ಸಿಡಿದ ನಂತರ ಜಜ್ಜಿದ ಬೆಳ್ಳುಳ್ಳಿ ಸೇರಿಸಿ. ನಂತರ ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ ಸೇರಿಸಿ 3 ನಿಮಿಷಗಳ ಕಾಲ ಹುರಿಯಿರಿ. ಆಮೇಲೆ ಸಣ್ಣಗೆ ಹೆಚ್ಚಿದ ಟೊಮೆಟೊ, ಉಪ್ಪು, ಅರಿಶಿನ ಸೇರಿಸಿ ಟೊಮೆಟೊ ಮೆತ್ತಗಾಗುವವರೆಗೆ ಬೇಯಿಸಿ. ಬಳಿಕ ‌ ಮಿಕ್ಸಿಯಲ್ಲಿ ಪುಡಿ ಮಾಡಿದ ಪೌಡರ್ ಸೇರಿಸಿ 5 ನಿಮಿಷಗಳ ಕಾಲ ಕೈಯಾಡಿಸಿ. ಆಮೇಲೆ ಮೊಟ್ಟೆ ಒಡೆದು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸಣ್ಣ ಉರಿಯಲ್ಲಿ 5 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ರುಚಿಕರವಾದ ಎಗ್ ಬುರ್ಜಿ ಸವಿಯಲು ಸಿದ್ಧವಾಗಿದೆ.

ಮಕ್ಕಳಿಗೆ ಬಲು ಇಷ್ಟವಾಗುವ 5 ಸ್ನಾಕ್ಸ್/ ತಿಂಡಿಗಳ ರೆಸಿಪಿಗಳು ನಿಮಗಾಗಿ..!

2. ವೆಜಿಟೆಬಲ್ ದೋಸೆ

ಬೇಕಾಗುವ ಪದಾರ್ಥ:

ಅಕ್ಕಿ – 1 ಕಪ್
ಉದ್ದಿನ ಬೇಳೆ – 1/2 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಕರಿಬೇವಿನ ಸೊಪ್ಪು – ಸ್ವಲ್ಪ
ಇಂಗು – ಚಿಟಿಕೆಯಷ್ಟು
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಚಿಕ್ಕದಾಗಿ ‌ಕತ್ತರಿಸಿದ ತರಕಾರಿ – 1ಕಪ್
ಟೊಮೆಟೊ – 1
ಈರುಳ್ಳಿ ‌- 1
Saakshatv cooking recipe prepare vegetable dosa
ಮಾಡುವ ವಿಧಾನ
ಮೊದಲಿಗೆ ಅಕ್ಕಿ ಹಾಗೂ ಉದ್ದಿನ ಬೇಳೆಯನ್ನು 4 ಗಂಟೆಗಳ ಕಾಲ ನೆನೆ ಹಾಕಿ. ನಂತರ ಮಿಕ್ಸಿ ಜಾರಿಗೆ ಹಾಕಿ ರುಬ್ಬಿ. ಬಳಿಕ ಅದಕ್ಕೆ ಉಪ್ಪು, ಕರಿಬೇವು, ಇಂಗು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ, ಟೊಮೋಟೋ, ತರಕಾರಿ ಹಾಕಿ ಚೆನ್ನಾಗಿ ಮಿಶ್ರ ಮಾಡಿ. ಕೆಲವು ಸಮಯದ ವರೆಗೆ ಇದನ್ನು ಹಾಗೆ ಬಿಡಿ. ನಂತರ ದೋಸೆ ತವೆಯನ್ನು ಬಿಸಿ ಮಾಡಿ ಅದರ ಮೇಲೆ ಎಣ್ಣೆಯನ್ನು ಸವರಿ. ಮಿಶ್ರಣವನ್ನು ಹಾಕಿ ವೃತ್ತಾಕಾರವಾಗಿ ಹರಡಿ. ಸ್ವಲ್ಪ ಎಣ್ಣೆ ಹಾಕಿ ಎರಡೂ ಬದಿಯನ್ನು ಹೊಂಬಣ್ಣಕ್ಕೆ ತಿರುಗುವವರೆಗೆ ಬೇಯಿಸಿ. ಈಗ ಚಟ್ನಿ ಜೊತೆ ಬಿಸಿ ಬಿಸಿ ವೆಜಿಟೆಬಲ್ ದೋಸೆಯನ್ನು ಸವಿಯಿರಿ.

10 ಸಿಂಪಲ್ ಮತ್ತು ರುಚಿಕರ ವೆಜ್ ಬಿರಿಯಾನಿ / ಬಾತ್ ಗಳ ರೆಸಿಪಿಗಳು ನಿಮಗಾಗಿ..!

3. ಫ್ರೆಂಚ್ ಪ್ರೈ

ಬೇಕಾಗುವ ಸಾಮಗ್ರಿಗಳು

ಆಲೂಗಡ್ಡೆ – 3
ಕಾರ್ನ್ ಫ್ಲೋರ್ – 3 ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಚಾಟ್ ಮಸಾಲಾ – 1/2 ಚಮಚ
ಕೆಂಪು ಮೆಣಸಿನ ಪುಡಿ – 1/2 ಚಮಚ
ಎಣ್ಣೆ

Saakshatv cooking recipe how to prepare French fries

ಮಾಡುವ ವಿಧಾನ

ಮೊದಲು ಆಲೂಗಡ್ಡೆಯನ್ನು ತೆಳ್ಳಗೆ ಉದ್ದಕ್ಕೆ ಕತ್ತರಿಸಿ ಇಟ್ಟುಕೊಳ್ಳಿ. ನಂತರ 30 ನಿಮಿಷ ನೀರಿನಲ್ಲಿ ನೆನೆಯಲು ಬಿಡಿ.
ಬಳಿಕ ಅಗಲವಾದ ಪಾತ್ರೆಗೆ ಆಲೂಗಡ್ಡೆ ಚೂರು, ಕಾರ್ನ್ ಫ್ಲೋರ್, ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ. ನಂತರ ಬಾಣಲೆಯಲ್ಲಿ ಮಧ್ಯಮ ಉರಿಯಲ್ಲಿ ಎಣ್ಣೆ ಬಿಸಿ ಮಾಡಿ ಆಲೂಗಡ್ಡೆ ಚೂರುಗಳನ್ನು ಹೊಂಬಣ್ಣ ಬರುವವರೆಗೆ ಕರಿದು ತೆಗೆಯಿರಿ. ಕರಿದ ಆಲೂಗಡ್ಡೆ ಚೂರುಗಳನ್ನು ಟಿಶ್ಯೂ ಪೇಪರ್ ಮೇಲೆ ಇಟ್ಟು 1 ನಿಮಿಷ ಬಿಟ್ಟು ನಂತರ ಅವುಗಳಿಗೆ ಚಾಟ್ ಮಸಾಲಾ ಮತ್ತು ಮೆಣಸಿನ ಪುಡಿ ಉದುರಿಸಿ ಮಿಶ್ರ ಮಾಡಿ . ಈಗ ಫ್ರೆಂಚ್ ಪ್ರೈ ಸವಿಯಲು ಸಿದ್ಧವಾಗಿದೆ.

4. ನುಚ್ಚಿನ ಉಂಡೆ

ಬೇಕಾಗುವ ಸಾಮಗ್ರಿಗಳು

ಕಡಲೆ ಬೇಳೆ- 1 ಕಪ್
ತೊಗರಿಬೇಳೆ- 1/2 ಕಪ್
ತೆಂಗಿನಕಾಯಿತುರಿ- 3/4 ಕಪ್
ಈರುಳ್ಳಿ- 1
ತುರಿದ ಹಸಿ ಶುಂಠಿ- ಸ್ವಲ್ಪ
ಹಸಿ ಮೆಣಸು – ಅಗತ್ಯಕ್ಕೆ ತಕ್ಕಂತೆ
ಕೊತ್ತಂಬರಿ ಸೊಪ್ಪು- ಸ್ವಲ್ಪ
ಕರಿಬೇವು- ಸ್ವಲ್ಪ
ಜೀರಿಗೆ- ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು
Saakshatv cooking recipe nuchhina unde

ಮಾಡುವ ವಿಧಾನ

ಕಡಲೆ ಬೇಳೆ, ತೊಗರಿಬೇಳೆಯನ್ನು ಚೆನ್ನಾಗಿ ತೊಳೆದು 2 ಗಂಟೆ ಕಾಲ ನೆನೆಯಲು ಬಿಡಿ.ನಂತರ ಬೇಳೆ ಮತ್ತು ಹಸಿ ಮೆಣಸಿನಕಾಯಿಗಳನ್ನು ತರಿ-ತರಿಯಾಗಿ ರುಬ್ಬಿ. ಇದಕ್ಕೆ ತೆಂಗಿನಕಾಯಿತುರಿ, ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ, ಹಸಿಶುಂಠಿ, ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಬೆರೆಸಿ. ನಂತರ ಎಣ್ಣೆ ಹಚ್ಚಿದ ಪಾತ್ರೆಯಲ್ಲಿ ಇಟ್ಟು ಹಬೆಯಲ್ಲಿ ಬೇಯಿಸಿದರೆ, ನುಚ್ಚಿನ ಉಂಡೆ ಸಿದ್ಧ.

5. ಆರೋಗ್ಯಕರವಾದ ಮೆಂತೆ ಸಿಹಿ ದೋಸೆ

ಬೇಕಾಗುವ ಸಾಮಗ್ರಿಗಳು

ದೋಸೆ ಅಕ್ಕಿ – 11/2 ಕಪ್ ಅಕ್ಕಿ
ಕುಚ್ಚಲಕ್ಕಿ – 1/2 ಕಪ್
ಮೆಂತೆ – 4 ಚಮಚ
ಅವಲಕ್ಕಿ – 1/2 ಕಪ್
ತೆಂಗಿನತುರಿ – 4 ಚಮಚ
ಬೆಲ್ಲದ ಹುಡಿ – 1/2 ಕಪ್
ಮೊಸರು – 1/4 ಕಪ್

Saakshatv cookingrecipe how to prepare menthe dose

ಮಾಡುವ ವಿಧಾನ

ಮೊದಲಿಗೆ ದೋಸೆ ಅಕ್ಕಿ, ಕುಚ್ಚಲಕ್ಕಿ, ಮೆಂತೆಯನ್ನು ಎರಡರಿಂದ ಮೂರು ಗಂಟೆಗಳ ಕಾಲ ನೆನೆಸಿಡಿ. ನಂತರ ಅರ್ಧ ಕಪ್ ಅವಲಕ್ಕಿಯನ್ನು ತೊಳೆದು ಐದು ನಿಮಿಷ ನೆನೆಸಿಡಿ.
ಮಿಕ್ಸಿ ಜಾರಿಗೆ ನೆನೆಸಿದ ಅಕ್ಕಿ, ಮೆಂತೆ, ಅವಲಕ್ಕಿ, ತೆಂಗಿನತುರಿ, ಬೆಲ್ಲದ ಹುಡಿ, ಮೊಸರು, ಚಿಟಿಕೆ ಉಪ್ಪು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
ರುಬ್ಬಿದ ಹಿಟ್ಟನ್ನು ರಾತ್ರಿಯಿಡೀ ಹುದುಗಲು ಬಿಟ್ಟು ಬೆಳಿಗ್ಗೆ ಹಿಟ್ಟನ್ನು ಚೆನ್ನಾಗಿ ಕಲಸಿ. ನಂತರ ಕಾವಲಿಯನ್ನು ಬಿಸಿ ಮಾಡಿ ಹಿಟ್ಟನ್ನು ದೋಸೆಯಂತೆ ಹರಡಿ. ಎರಡೂ ಬದಿಗಳನ್ನು ತುಪ್ಪ ಹಾಕಿ ಕಡಿಮೆ ಉರಿಯಲ್ಲಿ ಚೆನ್ನಾಗಿ ಬೇಯಿಸಿ ತೆಗೆಯಿರಿ.
ರುಚಿಯಾದ ಮತ್ತು ಆರೋಗ್ಯಕರವಾದ ಮೆಂತೆ ಸಿಹಿ ದೋಸೆ ಸವಿಯಲು ರೆಡಿಯಾಗಿದೆ.ಮೊದಲಿಗೆ ದೋಸೆ ಅಕ್ಕಿ, ಕುಚ್ಚಲಕ್ಕಿ, ಮೆಂತೆಯನ್ನು ಎರಡರಿಂದ ಮೂರು ಗಂಟೆಗಳ ಕಾಲ ನೆನೆಸಿಡಿ. ನಂತರ ಅರ್ಧ ಕಪ್ ಅವಲಕ್ಕಿಯನ್ನು ತೊಳೆದು ಐದು ನಿಮಿಷ ನೆನೆಸಿಡಿ.
ಮಿಕ್ಸಿ ಜಾರಿಗೆ ನೆನೆಸಿದ ಅಕ್ಕಿ, ಮೆಂತೆ, ಅವಲಕ್ಕಿ, ತೆಂಗಿನತುರಿ, ಬೆಲ್ಲದ ಹುಡಿ, ಮೊಸರು, ಚಿಟಿಕೆ ಉಪ್ಪು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
ರುಬ್ಬಿದ ಹಿಟ್ಟನ್ನು ರಾತ್ರಿಯಿಡೀ ಹುದುಗಲು ಬಿಟ್ಟು ಬೆಳಿಗ್ಗೆ ಹಿಟ್ಟನ್ನು ಚೆನ್ನಾಗಿ ಕಲಸಿ. ನಂತರ ಕಾವಲಿಯನ್ನು ಬಿಸಿ ಮಾಡಿ ಹಿಟ್ಟನ್ನು ದೋಸೆಯಂತೆ ಹರಡಿ. ಎರಡೂ ಬದಿಗಳನ್ನು ತುಪ್ಪ ಹಾಕಿ ಕಡಿಮೆ ಉರಿಯಲ್ಲಿ ಚೆನ್ನಾಗಿ ಬೇಯಿಸಿ ತೆಗೆಯಿರಿ.
ರುಚಿಯಾದ ಮತ್ತು ಆರೋಗ್ಯಕರವಾದ ಮೆಂತೆ ಸಿಹಿ ದೋಸೆ ಸವಿಯಲು ರೆಡಿಯಾಗಿದೆ.

ರುಚಿ ಜೊತೆ ಆರೋಗ್ಯಕ್ಕಾಗಿ 5 ಜ್ಯೂಸ್ ಗಳ ರೆಸಿಪಿಗಳು ನಿಮಗಾಗಿ..!

5 ರುಚಿಕರ , ಸುಲಭ, ಆರೋಗ್ಯಕರ ಸಿಹಿ ತಿಂಡಿಗಳು ರೆಸಿಪಿಗಳು ನಿಮಗಾಗಿ..!

Tags: #saakshatvcoockingfood recipies
ShareTweetSendShare
Join us on:

Related Posts

ವಂದೇ ಮಾತರಂ ಗೀತೆಯ ಸಾಲುಗಳು ಏಕದೇವೋಪಾಸನೆಯನ್ನು ನಂಬುವವರ ಧಾರ್ಮಿಕ ಭಾವನೆಗೆ ವಿರುದ್ಧವಾಗಿರಬಹುದು ಎಂದ ಶರ್ಮಿಳಾ ಟ್ಯಾಗೋರ್ ವಾದಕ್ಕೆ ಕಂಗನಾ ರನೌತ್ ಖಡಕ್ ಉತ್ತರ

ವಂದೇ ಮಾತರಂ ಗೀತೆಯ ಸಾಲುಗಳು ಏಕದೇವೋಪಾಸನೆಯನ್ನು ನಂಬುವವರ ಧಾರ್ಮಿಕ ಭಾವನೆಗೆ ವಿರುದ್ಧವಾಗಿರಬಹುದು ಎಂದ ಶರ್ಮಿಳಾ ಟ್ಯಾಗೋರ್ ವಾದಕ್ಕೆ ಕಂಗನಾ ರನೌತ್ ಖಡಕ್ ಉತ್ತರ

by Shwetha
August 23, 2026
0

ನವದೆಹಲಿ: ಭಾರತದ ಸಾಂಸ್ಕೃತಿಕ ಪರಂಪರೆಯ ಅವಿಭಾಜ್ಯ ಅಂಗವಾಗಿರುವ ವಂದೇ ಮಾತರಂ ಗೀತೆಯ ಕುರಿತು ಹಿರಿಯ ನಟಿ ಶರ್ಮಿಳಾ ಟ್ಯಾಗೋರ್ ನೀಡಿರುವ ಹೇಳಿಕೆ ಈಗ ಬಾಲಿವುಡ್ ಮತ್ತು ರಾಜಕೀಯ...

ಮೋದಿ ಸರ್ಕಾರದ ಇ20 ನೀತಿಯಿಂದ ಸಕ್ಕರೆ ಮತ್ತು ಬೆಲ್ಲದ ಬೆಲೆ ಏರಿಕೆ: ನಿಮ್ಮ ಎಥೆನಾಲ್ ನೀತಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ ಎಂದ ಕಾಂಗ್ರೆಸ್ ನಾಯಕ ಜೈರಾಂ ರಮೇಶ್

ಮೋದಿ ಸರ್ಕಾರದ ಇ20 ನೀತಿಯಿಂದ ಸಕ್ಕರೆ ಮತ್ತು ಬೆಲ್ಲದ ಬೆಲೆ ಏರಿಕೆ: ನಿಮ್ಮ ಎಥೆನಾಲ್ ನೀತಿ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ ಎಂದ ಕಾಂಗ್ರೆಸ್ ನಾಯಕ ಜೈರಾಂ ರಮೇಶ್

by Shwetha
August 23, 2026
0

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಇ20 (ಶೇ. 20ರಷ್ಟು ಎಥೆನಾಲ್ ಮಿಶ್ರಿತ ಇಂಧನ) ನೀತಿಯು ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ನೇರ ಕಾರಣವಾಗಿದೆ ಎಂದು ಕಾಂಗ್ರೆಸ್...

ಎಫ್‌ಐಆರ್ ಹಾಕಿದ್ರೂ ಬೆದರಬೇಡಿ, ನೈಸ್ ಟೋಲ್ ಕಟ್ಟಬೇಡಿ: ಡಿ.ಕೆ. ಶಿವಕುಮಾರ್ ಸರ್ಕಾರ ನಡೆಸುತ್ತಿದ್ದಾರೋ ಅಥವಾ ನೈಸ್ ಕಂಪನಿಯನ್ನೋ-ಹೆಚ್.ಡಿ. ಕುಮಾರಸ್ವಾಮಿ

ಎಫ್‌ಐಆರ್ ಹಾಕಿದ್ರೂ ಬೆದರಬೇಡಿ, ನೈಸ್ ಟೋಲ್ ಕಟ್ಟಬೇಡಿ: ಡಿ.ಕೆ. ಶಿವಕುಮಾರ್ ಸರ್ಕಾರ ನಡೆಸುತ್ತಿದ್ದಾರೋ ಅಥವಾ ನೈಸ್ ಕಂಪನಿಯನ್ನೋ-ಹೆಚ್.ಡಿ. ಕುಮಾರಸ್ವಾಮಿ

by Shwetha
August 23, 2026
0

ಬೆಂಗಳೂರು: ನೈಸ್ ರಸ್ತೆಯ ಅಕ್ರಮ ಟೋಲ್ ವಸೂಲಾತಿ ವಿರುದ್ಧ ಸಮರ ಸಾರಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಇದೀಗ ಮತ್ತಷ್ಟು ಆಕ್ರಮಣಕಾರಿ ನಿಲುವು ತಳೆದಿದ್ದಾರೆ. ಎಫ್‌ಐಆರ್ ದಾಖಲಾದರೂ...

ಇನ್ಮುಂದೆ ಮಂಗಳೂರು ರೈಲ್ವೆ ಕರ್ನಾಟಕದ ಪಾಲು: ಪಾಲಕ್ಕಾಡ್ ಲಾಬಿಗೆ ಬ್ರೇಕ್, ಕೇರಳ ವಿರೋಧದ ನಡುವೆಯೂ ಕರಾವಳಿಗರ ದಶಕಗಳ ಕನಸು ನನಸು -ನಮಗೆ ಆದಾಯ ನಷ್ಟವಾಗುತ್ತೆ ಎಂದು ಮೋದಿ ಮೊರೆ ಹೋದ ಕೇರಳ CM

ಇನ್ಮುಂದೆ ಮಂಗಳೂರು ರೈಲ್ವೆ ಕರ್ನಾಟಕದ ಪಾಲು: ಪಾಲಕ್ಕಾಡ್ ಲಾಬಿಗೆ ಬ್ರೇಕ್, ಕೇರಳ ವಿರೋಧದ ನಡುವೆಯೂ ಕರಾವಳಿಗರ ದಶಕಗಳ ಕನಸು ನನಸು -ನಮಗೆ ಆದಾಯ ನಷ್ಟವಾಗುತ್ತೆ ಎಂದು ಮೋದಿ ಮೊರೆ ಹೋದ ಕೇರಳ CM

by Shwetha
August 23, 2026
0

ತಿರುವನಂತಪುರಂ: ದಕ್ಷಿಣ ರೈಲ್ವೆ ವ್ಯಾಪ್ತಿಯಲ್ಲಿದ್ದ ಮಂಗಳೂರು ಪ್ರದೇಶವನ್ನು ನೈರುತ್ಯ ರೈಲ್ವೆಗೆ ವರ್ಗಾವಣೆ ಮಾಡಿ ರೈಲ್ವೆ ಮಂಡಳಿ ತೆಗೆದುಕೊಂಡಿರುವ ನಿರ್ಧಾರಕ್ಕೆ ಕೇರಳ ಮುಖ್ಯಮಂತ್ರಿ ವಿಡಿ ಸತೀಶನ್ ತೀವ್ರ ಆಕ್ಷೇಪ...

ವಾಲ್ಮೀಕಿ ಹಗರಣ- ಸದನದಲ್ಲಿ ಸಾಕ್ಷಿ ನೀಡಲು ಯೋಗ್ಯತೆ ಇಲ್ಲದವರು ಈಗ ಪಾದಯಾತ್ರೆ ಮಾಡ್ತಿದ್ದಾರೆ: ಕುರ್ಚಿ ಉಳಿಸಿಕೊಳ್ಳಲು ಬಿಜೆಪಿ ನಾಯಕರ ಪಾದಯಾತ್ರೆ ನಾಟಕ- ಸಚಿವ ನಾಗೇಂದ್ರ ಪರ ಪ್ರಿಯಾಂಕ್ ಖರ್ಗೆ ಬ್ಯಾಟಿಂಗ್

ವಾಲ್ಮೀಕಿ ಹಗರಣ- ಸದನದಲ್ಲಿ ಸಾಕ್ಷಿ ನೀಡಲು ಯೋಗ್ಯತೆ ಇಲ್ಲದವರು ಈಗ ಪಾದಯಾತ್ರೆ ಮಾಡ್ತಿದ್ದಾರೆ: ಕುರ್ಚಿ ಉಳಿಸಿಕೊಳ್ಳಲು ಬಿಜೆಪಿ ನಾಯಕರ ಪಾದಯಾತ್ರೆ ನಾಟಕ- ಸಚಿವ ನಾಗೇಂದ್ರ ಪರ ಪ್ರಿಯಾಂಕ್ ಖರ್ಗೆ ಬ್ಯಾಟಿಂಗ್

by Shwetha
August 23, 2026
0

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸಿಬಿಐ ರಾಜ್ಯಪಾಲರಿಗೆ ಪತ್ರ ಬರೆದಿರುವುದು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.