ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಕನ್ನಡದ ಕಿರುತೆರೆ ನಟಿ

1 min read

ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಕನ್ನಡದ ಕಿರುತೆರೆ ನಟಿ

“ಅಪ್ಪ – ಅಮ್ಮ… ನನ್ನನ್ನು ಕ್ಷಮಿಸಿ. ನಾನು ನಿಮ್ಮಿಬ್ಬರನ್ನೂ ತುಂಬಾ ಪ್ರೀತಿಸುತ್ತೇನೆ.. ನಾನು ಮಾನಸಿಕ ಖಿನ್ನತೆಗೆ ಒಳಗಾಗಿದ್ದೇನೆ.. ನನ್ನ ಮನಸ್ಥಿತಿ ಸರಿ ಇಲ್ಲ..  ಅನಾರೋಗ್ಯ ನನ್ನನ್ನು ತೀವ್ರವಾಗಿ ಕಾಡುತ್ತಿದೆ. ನಾನು ಸಾವಿನ ಮನೆಗೆ ಹೋಗುತ್ತಿದ್ದೇನೆ, ಕ್ಷಮಿಸಿ’. ಇದು ಕಿರುತೆರೆ ನಟಿ 25 ವರ್ಷದ ಸವಿ ಮಾದಪ್ಪ ( ಸೌಜನ್ಯ) ತಾವು ಆತ್ಮಹತ್ಯೆ ಮಾಡಿಕೊಳ್ಳುವ ಎರೆಡು ದಿನಗಳ ಹಿಂದೆ ಬರೆದಿಟ್ಟಿರುವ ಡೆತ್ ನೋಟ್.

ಇಂಗ್ಲಿಷ್​ನಲ್ಲಿ ಡೆತ್ ನೋಟ್ ಬರೆಯಲಾಗಿದೆ.

ತಮ್ಮ ನೋವನ್ನ ಅಕ್ಷರಗಳಲ್ಲಿ ಕಾಗದದ ಮೇಲೆ ಇಳಿಸಿ ನೇಣಿಗೆ ಶರಣಾಗಿದ್ದಾರೆ ಸವಿ ಮಾದಪ್ಪ.   ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯ ಸನ್ ವರ್ತ್​ ಅಪಾರ್ಟ್​ಮೆಂಟ್​ನಲ್ಲಿ ಸವಿ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ನಟಿ ಬರೆದಿಟ್ಟಿದ್ದ ಡೆತ್​ ನೋಟ್​  ಅವರ ಕೈಸೇರಿದೆ. ಸಾವಿಗೂ ಎರಡು ದಿನ ಮೊದಲೇ  ಡೆತ್ ನೋಟ್ ಬರೆದಿಟ್ಟಿದ್ದಾರೆ.  ಡೆತ್ ನೋಟ್ ನಲ್ಲಿ  ಸ್ನೇಹಿತರು ಮತ್ತು ಸಹೋದರರ ಹೆಸರನ್ನೂ ಬರೆದಿದ್ದಾರೆ.

 

ಸವಿ ಮಾದಪ್ಪ ಕೊಡಗು ಜಿಲ್ಲೆ ಕುಶಾಲನಗರ ಮೂಲದವರಾಗಿದ್ದು, ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಚೌಕಟ್ಟು ಹಾಗೂ ಫನ್​ ಚಿತ್ರಗಳಲ್ಲೂ ಕಿರು ಪಾತ್ರಗಳಲ್ಲಿ ನಟಿಸಿದ್ದಾರೆ.

 

 

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd