ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರೋಚಕ ಗೆಲುವುದು ಸಾಧಿಸಿದ RCB
ದುಬೈನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ರೋಚಕ ಮ್ಯಾಚ್ ನಡೆದಿತ್ತು. ಒಮ್ಮೆ ಗೆಲುವು ಡೆಲ್ಲಿ ಕಡೆಗೆ ವಾಲಿದರೆ ಮತ್ತೊಮ್ಮೆ ಬೆಂಗಳೂರು ಕಡೆ ಮುಖ ಮಾಡಿ ನಸುನಗುತ್ತಿತ್ತು. ಕೊನೆಯಲ್ಲಿ ಪಂದ್ಯದ ಅಂತಿಮ ಎಸೆತವನ್ನು ಸಿಕ್ಸರ್ಗೆ ಅಟ್ಟಿ ಆರ್ಸಿಬಿಗೆ ಶ್ರೀಕರ್ ಭರತ್ 7 ವಿಕೆಟ್ಗಳ ಅಮೋಘ ಗೆಲುವು ತಂದುಕೊಟ್ಟರು. ರನ್ರೇಟ್ ಮತ್ತು ಪ್ಲೇ-ಆಫ್ಗೆ 2ನೇ ಸ್ಥಾನದಲ್ಲಿ ಕ್ವಾಲಿಫೈ ಅಗುವ ಎಲ್ಲಾ ಯೋಚನೆ ಬಿಟ್ಟು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯ ಗೆಲ್ಲುವ ಕಡೆ ಗಮನ ಕೊಟ್ಟಿತ್ತು. ಹೀಗಾಗಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆರಿಸಿಕೊಂಡಿತು. ಡೆಲ್ಲಿ ಕ್ಯಾಪಿಟಲ್ಸ್ಗೆ ಪೃಥ್ವಿ ಷಾ ಮತ್ತು ಶಿಖರ್ ಧವನ್ ಬಿರುಸಿನ 88 ರನ್ಗಳ ಜೊತೆಯಾಟ ತಂದುಕೊಟ್ಟರು. ಆರ್ಸಿಬಿ ಬೌಲರ್ಗಳನ್ನು ಈ ಜೋಡಿ ಮೂಲೆ ಮೂಲೆಗೆ ಅಟ್ಟಿತ್ತು. 35 ಎಸೆತಗಳಲ್ಲಿ 43 ರನ್ಗಳಿಸಿದ್ದ ಧವನ್ ಹರ್ಷಲ್ ಪಟೇಲ್ ಎಸೆತದಲ್ಲಿ ಕ್ರಿಶ್ಚಿಯನ್ಗೆ ಕ್ಯಾಚ್ ನೀಡಿದಾಗ ಆರ್ಸಿಬಿ ಮೊದಲ ಯಶಸ್ಸಿನ ಖುಷಿಯಲ್ಲಿ ತೇಲಾಡಿತು. ಇನ್ನೊಂದು ಕಡೆಯಲ್ಲಿ ಪೃಥ್ವಿ ಷಾ ಸಿಕ್ಸರ್, ಬೌಂಡರಿಗಳ ಮೂಲಕ ಅಬ್ಬರಿಸುತ್ತಿದ್ದರು. ತಂಡದ ಮೊತ್ತ 100 ಕೂಡ ದಾಟಿ ಬಿಟ್ಟಿತ್ತು. 31 ಎಸೆತಗಳಲ್ಲಿ 48 ರನ್ಗಳಿಸಿದ್ದ ಷಾ ಚಹಲ್ ಎಸೆತದಲ್ಲಿ ಲೆಕ್ಕಾಚಾರ ತಪ್ಪಿದರು.
ನಾಯಕ ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್ರಿಂದ ಚುರುಕಿನ ಆಟ ಬರಲಿಲ್ಲ. ಪಂತ್ 10 ರನ್ಗಳಿಸಿದರೆ, ಶ್ರೇಯಸ್ 18 ರನ್ಗಳಿಸಿದರು. ಶಿಮ್ರನ್ ಹೆಟ್ಮಯರ್ ಕೊನೆಯ ಎಸೆತದಲ್ಲಿ ಔಟಾಗುವ ಮುನ್ನ 29 ರನ್ಗಳಿಸಿದರು. 20 ಓವರುಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 5 ವಿಕೆಟ್ ಕಳೆದುಕೊಂಡು 164 ರನ್ಗಳಿಸಿತ್ತು. ಚೇಸಿಂಗ್ ಆರಂಭಿಸಿದ ಆರ್ಸಿಬಿಗೆ ಮೊದಲ ಓವರ್ನಲ್ಲೇ ಹೊಡೆತ ಬಿತ್ತು. ದೇವದತ್ ಪಡಿಕಲ್ ಖಾತೆ ತೆರೆಯದೆ ಡಗ್ ಔಟ್ ಸೇರಿಕೊಂಡರು. ವಿರಾಟ್ ಕೊಹ್ಲಿ ಕೂಡ ಲೆಕ್ಕಾಚಾರ ತಪ್ಪಿ 4 ರನ್ಗಳಿಗೆ ಆಟ ಮುಗಿಸಿದರು. ಶ್ರೀಕರ್ ಭರತ್ ಮತ್ತು ಎಬಿಡಿ ವಿಲಿಯರ್ಸ್ ನಡುವೆ 49ರನ್ಗಳ ಜೊತೆಯಾಟ ಬಂದಿತ್ತು. ಆದರೆ ಎಬಿಡಿ ವಿಲಿಯರ್ಸ್ 26 ರನ್ಗಳಿಗೆ ವಿಕೆಟ್ ಒಪ್ಪಿಸಿದರು.
ಭರತ್ ಜೊತೆ ಸೇರಿದ ಮ್ಯಾಕ್ಸ್ವೆಲ್ ಅಬ್ಬರದ ಆಟಕ್ಕೆ ಕೈ ಹಾಕಿದರು. ಆದರೆ ರನ್ ರೇಟ್ ಆಗಲೇ ಸಾಕಷ್ಟು ಮೇಲಕ್ಕೇರಿತ್ತು. ಈ ಮಧ್ಯೆ ಮ್ಯಾಕ್ಸ್ವೆಲ್ಗೆ ಶ್ರೇಯಸ್ ಅಯ್ಯರ್ ಮತ್ತು ಅಶ್ವಿನ್ ಅಕ್ಸರ್ ಪಟೇಲ್ ಒಂದೇ ಓವರ್ನಲ್ಲಿ 2 ಜೀವದಾನ ನೀಡಿದರು. ಹಲವು ರನೌಟ್ ಅವಕಾಶಗಳನ್ನು ಕೂಡ ಡೆಲ್ಲಿ ಕೈ ಚೆಲ್ಲಿತು. ಹೀಗಾಗಿ ಮ್ಯಾಕ್ಸ್ವೆಲ್ ಕೂಡ ಅಬ್ಬರಿಸಲು ಆರಂಭಿಸಿದರು. ಶ್ರೀಕರ್ ಭರ್ ಅರ್ಧಶತಕದ ಗಡಿ ಕೂಡ ದಾಟಿದರು. ಮ್ಯಾಕ್ಸ್ವೆಲ್ ಕೊನೆಯ ಓವರ್ನಲ್ಲಿ ಅರ್ಧಶಕತ ಸಂಭ್ರಮ ಆಚರಿಸಿಕೊಂಡರು. ಪಂದ್ಯದ ಕೊನೆಯ ಎಸೆತದಲ್ಲಿ ಆರ್ಸಿಬಿ ಗೆಲುವಿಗೆ 5 ರನ್ ಬೇಕಾಗಿತ್ತು. ಆದರೆ ಆವೇಶ್ ಖಾನ್ ಎಸೆತವನ್ನು ಸಿಕ್ಸರ್ಗೆ ಅಟ್ಟಿದ ಭರತ್ ಆರ್ಸಿಬಿಗೆ 7 ವಿಕೆಟ್ಗಳ ರೋಚಕ ಜಯ ತಂದುಕೊಟ್ಟರು. ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆದ ಆರ್ಸಿಬಿ ಎಲಿಮಿನೇಟರ್ ಆಡಬೇಕಿದೆ.