ಐಪಿಎಲ್ 2021 : ಕ್ವಾಲಿಫೈಯರ್ನಲ್ಲಿ ಡೆಲ್ಲಿ VS ಚೆನ್ನೈ, ಎಲಿಮಿನೇಟರ್ನಲ್ಲಿ ಕೆಕೆಆರ್-ಆರ್ಸಿಬಿ ಮುಖಾಮುಖಿ
ಐಪಿಎಲ್ 14ನೇ ಆವೃತ್ತಿಯ ಲೀಗ್ ಲೆಕ್ಕಾಚಾರಗಳೆಲ್ಲವೂ ಶುಕ್ರವಾರಕ್ಕೆ ಮುಗಿದು ಹೋಗಿದೆ. ಅಂತಿಮ ಪಂದ್ಯದಲ್ಲಿ ಬೆಂಗಳೂರು ಮತ್ತು ಮುಂಬೈ ಜಯ ಸಾಧಿಸಿದರೂ ಅಂಕಪಟ್ಟಿಯಲ್ಲಿ ದೊಡ್ಡ ಬದಲಾವಣೆ ಏನೂ ಆಗಲಿಲ್ಲ. 20 ಅಂಕಗಳಿಸಿದ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಸ್ಥಾನವನ್ನು ಪಡೆದುಕೊಂಡರೆ. ಚೆನ್ನೈ ಮತ್ತು ರಾಯಲ್ ಚಾಲೆಂಜರ್ಸ್ ಖಾತೆಯಲ್ಲಿ ತಲಾ 18 ಅಂಕಗಳಿದ್ದವೆ. ಆದರೆ ರನ್ರೇಟ್ ಆಧಾರದಲ್ಲಿ ಚೆನ್ನೈ 2ನೇ ಸ್ಥಾನ ಪಡೆದು ಕ್ವಾಲಿಫೈಯರ್ ಆಡಲು ಅರ್ಹತೆ ಪಡೆದುಕೊಂಡಿತು. 3ನೇ ಸ್ಥಾನದಲ್ಲಿ ಆರ್ಸಿಬಿ ಇದ್ದರೆ, ರನ್ರೇಟ್ ಆಧಾರದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ 4ನೇ ಸ್ಥಾನ ಪಡೆದುಕೊಂಡಿತು. ಎಲಿಮಿನೇಟರ್ನಲ್ಲಿ ಆರ್ಸಿಬಿ ಮತ್ತು ಕೊಲ್ಕತ್ತಾ ಮುಖಾಮುಖಿ ಆಗಲಿವೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರೋಚಕ ಗೆಲುವುದು ಸಾಧಿಸಿದ RCB
ಕ್ವಾಲಿಫೈಯರ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿ ಆಗಲಿದೆ. ಇಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ಗೆ ಎಂಟ್ರಿ ಪಡೆಯಲಿದೆ. ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ಮತ್ತು ಕೆಕೆಆರ್ ಸೆಣೆಸಾಟ ನಡೆಸಲಿವೆ. ಇಲ್ಲಿ ಸೋತ ತಂಡ ಟೂರ್ನಿಯಿಂದ ಹೊರಬಿದ್ದರೆ, ಗೆದ್ದವರು ಮೊದಲ ಕ್ವಾಲಿಫೈಯರ್ನಲ್ಲಿ ಸೋತ ತಂಡದೊಂದಿಗೆ ಆಡಬೇಕು. ಇಲ್ಲಿ ಗೆದ್ದವರು ಫೈನಲ್ನಲ್ಲಿ ಮೊದಲ ಕ್ವಾಲಿಫೈಯರ್ ಗೆದ್ದವರ ಜೊತೆ ಕಪ್ಗಾಗಿ ಸೆಣಸಾಟ ನಡೆಸಲಿದ್ದಾರೆ.
ಮೊದಲ ಕ್ವಾಲಿಫೈಯರ್ ಅಕ್ಟೋಬರ್ 10ರಂದು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಆರ್ಸಿಬಿ ಮತ್ತು ಕೆಕೆಆರ್ ಪಂದ್ಯ ಅಕ್ಟೋಬರ್ 11 ರಂದು ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೆಣೆಸಾಟ ನಡೆಸಲಿದೆ. ಕ್ವಾಲಿಫೈಯರ್ 2 ಪಂದ್ಯ ಅಕ್ಟೋಬರ್ 13 ರಂದು ನಡೆದರೆ, ಫೈನಲ್ ಅಕ್ಟೋಬರ್ 15 ರಂದು ನಡೆಯಲಿದೆ.