“ನಾವು ಬಂದೇವಾ” ಅಂದೇ ಬಂದೇ ಬಿಡ್ತು ಅಮೃತ್ ಅಪಾರ್ಟ್ಮೆಂಟ್ಸ್ ನ ಹೊಸ ಹಾಡು..!

1 min read

“ನಾವು ಬಂದೇವಾ” ಅಂದೇ ಬಂದೇ ಬಿಡ್ತು ಅಮೃತ್ ಅಪಾರ್ಟ್ಮೆಂಟ್ಸ್ ನ ಹೊಸ ಹಾಡು..!

ಸ್ಯಾಂಡಲ್ ವುಡ್ ಹೊಸದೊಂದು ಸಿನಿಮಾ ಬೆಳ್ಳಿ ಪರದೆ ಮೇಲೆ ಅಬ್ಬರಿಸಲು ಸಜ್ಜಾಗಿದೆ. ಸಸ್ಪೆನ್ಸ್ , ಥ್ರಿಲ್ಲರ್ ಭರಿತ ಸಿನಿಮಾವಾಗಿರುವ ಅಮೃತ್ ಅಪಾರ್ಟ್ಮೆಂಟ್ಸ್ ಸಿನಿಮಾ  G9 Communications Media and Entertainments ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದೆ.  ಇದೀಗ ಈ ಸಿನಿಮಾದ ನಾವು ಬಂದೇವ ಹಾಡು ಯೂಟ್ಯೂಬ್ ನಲ್ಲಿ ದಸರಾ ಹಬ್ಬದ ಪ್ರಯುಕ್ತ ರಿಲೀಸ್ ಆಗಿದೆ.

ಹಾಡಿಗೆ ಸಖತ್ ಒಳ್ಲೆ ರೆಸ್ಪಾನ್ಸ್ ಸಿಗ್ತಿದೆ.  ಚಿತ್ರದ ಬಿಡುಗಡೆಯ  ಸಿದ್ಢತೆಯಲ್ಲಿರುವ”ಅಮೄತ ಅಪಾರ್ಟ್ಮಮೆಂಟ್ಸ್”  ತಂಡ, ಮೊದಲ ಹೆಜ್ಜೆಯಾಗಿ “ನಾವು ಬಂದೇವ್ ” ಎನ್ನುವ ಹಾಡನ್ನು ರಿಲೀಸ್ ಮಾಡಿದೆ. ಉತ್ತರ ಕರ್ನಾಟಕದ ಬನಹಟ್ಟಿ ಮೂಲದವರಾದ ಪ್ರೊ. ಬಿ.ಆರ್. ಪೋಲಿಸಪಾಟೀಲರವರು “ನಾವು ಬಂದೇವ್” ಹಾಡಿಗೆ ಸಾಹಿತ್ಯ ರಚನೆ ಮಾಡಿದ್ದಾರೆ. ತಮ್ಮ ತಮ್ಮ ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬರುವ ವಲಸಿಗರ ಕುರಿತು,  ನಿರ್ದೇಶಕ ಗುರುರಾಜ ಕುಲಕರ್ಣಿ ಅವರ ಕಲ್ಪನೆಗೆ ತಕ್ಕಂತೆ ದೇಶಿ ಸೊಗಡಿನ ಪದಗಳನ್ನು ಬಳಸಿಕೊಂಡು ಈ ಹಾಡಿನ ಸಾಹಿತ್ಯವನ್ನು ರಚಿಸಲಾಗಿದೆ.

 

ಈ ಹಾಡಿಗೆ ರಾಜ್ಯ ಪ್ರಶಸ್ತಿ ವಿಜೇತ  ತೇಜಸ್ವಿ ಹರಿದಾಸ ಅವರು ಧ್ವನಿ ನೀಡಿದ್ದಾರೆ.  ಉತ್ತರ ಕರ್ನಾಟಕದ ಬನಹಟ್ಟಿ ಮೂಲದವರಾದ ಪ್ರೊ. ಬಿ.ಆರ್. ಪೋಲಿಸಪಾಟೀಲ ಅವರು ಈ ಹಾಡಿಗೆ ಸಾಹಿತ್ಯ ರಚನೆ ಮಾಡಿದ್ದಾರೆ. ಎಸ್.ಡಿ. ಅರವಿಂದ ಅವರು ಸಂಗೀತ ಸಂಯೋಜನೆ ಮಾಡಿದ್ದು, ಹಾಡು ಅದ್ಭುತವಾಗಿ ಮೂಡಿಬಂದಿದೆ.

ಸಿನಿಮಾಗೆ ಗುರುರಾಜ ಕುಲಕರ್ಣಿ ಅವರು ಬಂಡವಾಳ ಹೂಡಿದ್ದು, ಅವರೇ ಆಕ್ಷನ್ ಕಟ್ ಹೇಳಿದ್ದಾರೆ. ಮಲಾಯಳಂ ಚಿತ್ರರಂಗದಲ್ಲಿ ಕೆಲಸ ಮಾಡಿ ಅನುಭವ ಇರುವ, ಅರ್ಜುನ್ ಅಜಿತ್ DoP ಆಗಿ ಕೆಲಸ ಮಾಡಿದ್ದಾರೆ, ಕನ್ನಡದ ನೂರಾರು ಚಿತ್ರಗಳಿಗೆ ಕೆಲಸ ಮಾಡಿದ ಕೆಂಪರಾಜ್ ಅರಸ್ ಸಂಕಲನದ ಮ್ಯಾಜಿಕ್ ಟಚ್ ಇಲ್ಲಿದೆ. ಎಸ್ ಡಿ ಅರವಿಂದ್ ಮೂರು ಹಾಡುಗಳನ್ನು ಸಂಯೋಜಿಸಿದ್ದಾರೆ. ಚೆನ್ನೈ ವಾಸಿ ಎ. ಎಮ್ ಶಾ, ಹಿನ್ನೆಲೆ ಸಂಗೀತ ನೀಡಿದ್ದಾರೆ. ಕನ್ನಡ ಚಲನಚಿತ್ರರಂಗದ ಅಧ್ಬುತ ಸೌಂಡ್ ಡಿಸೈನರ್ ವಿ ರಾಜನ್ ತಮ್ಮ ಅನುಭವವನ್ನು ಧಾರೆಯರಿದಿದ್ದಾರೆ. ಕೆ ಕಲ್ಯಾಣ, ಮತ್ತು ಬಿ ಆರ್ ಪೋಲಿಸ್ ಪಾಟೀಲ್ ಹಾಡುಗಳನ್ನ ಬರೆದಿದ್ದಾರೆ.

KGF 1 , KGF 2 , ಯುವರತ್ನ , ಕೋಟಿಗೊಬ್ಬ 3 ರಲ್ಲಿ ಕೆಲಸ ಮಾಡಿರುವ ತಾರಕ ಪೊನ್ನಪ್ಪ ಅಮೃತ್ ಅಪಾರ್ಟ್ಮೆಂಟ್ಸ್  ನಲ್ಲಿ ನಾಯಕನಾಗಿ ಮಿಂಚುತ್ತಿದ್ದಾರೆ. ಊರ್ವಶಿ ಗೋವರ್ಧನ ಮೊದಲ ಬಾರಿಗೆ ನಾಯಕಿ ಆಗಿ ಇಂಡಸ್ಟ್ರಿಗೆ ಪರಿಚಯವಾಗ್ತಿದ್ದಾರೆ. ಅವನೇ ಶ್ರೀಮನ್ನಾರಾಯಣ ಖ್ಯಾತಿಯ ಬಾಲಾಜಿ ಮನೋಹರ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸೀತಾ ಕೋಟೆ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾನಸ ಜೋಷಿ ಪೋಲಿಸ್ ಕಮೀಷನರ್ ಪಾತ್ರಗಳನ್ನು ನಿರ್ವಹಿಸಿದ್ದಾರೆ.  ಸಂಪತಕುಮಾರ್ ಒಂದು ಪ್ರಮುಖ ಪಾತ್ರದಲ್ಲಿ ಇದ್ದಾರೆ. ಉಳಿದಂತೆ, ಮಾಲತೇಶ್,  ಸಿತಾರ, ಜಗದೀಶ ಜಾಲಾ, ಅರುಣ ಮೂರ್ತಿ, ರಾಜು ನೀನಾಸಂ, ಶಂಕರ್ ಮೊದಲಾದವರು ಪಾತ್ರ ನಿರ್ವಹಿಸಿದ್ದಾರೆ. ಇನ್ನೂ ಸಿನಿಮಾದಲ್ಲಿ ಸಹ ನಿರ್ದೇಶಕರಾಗಿ ಮಹೇಶ್ ಎಸ್ ಪಿ ಕಾರ್ಯ ನಿರ್ಹಿಸಿದ್ರೆ,  ಹರೀಶ ಮೂರ್ತಿ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಸುನೀಲ ಆರ್ ಡಿ ಮತ್ತು ನರಸಿಂಹ ಕುಲಕರ್ಣಿ ಸಹ ನಿರ್ಮಾಪಕರಾಗಿದ್ದಾರೆ.

ಕೋಟಿಗೊಬ್ಬ-3 ಸಿನಿಮಾ ರಿಲೀಸ್ ಗೆ ಅಡೆತಡೆ : ಕಿಚ್ಚ ಹೇಳಿದ್ದೇನು..?

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd