ಸ್ಮಾರ್ಟ್ ಪೋನ್ ಮೇಲಿನ ಮೋಹಕ್ಕೆ ಹೆಂಡತಿಯನ್ನೆ ಮಾರಿದ ಭೂಪ.
ಸ್ಮಾರ್ಟ್ ಪೋನ್ ಮೇಲಿನ ಆಸೆಯಿಂದ ಕಟ್ಟಿಕೊಂಡ ಹೆಂಡತಿಯನ್ನೆ ಮಾರಿದ ಘಟನೆ ಒಡಿಶಾ ರಾಜ್ಯದ ಬೋಲಾಂಗೀರ್ ಜಿಲ್ಲೆಯಲ್ಲಿ ನಡೆದಿದೆ. ಕಿಶೋರ್ ಎನ್ನುವ 17 ವರ್ಷದ ಬಾಲಕ ತನ್ನ ಪತ್ನಿ 24 ವರ್ಷದ ಯುವತಿಯನ್ನ 55 ವರ್ಷದ ವ್ಯಕ್ತಿಗೆ ಮಾರಾಟ ಮಾಡಿದ್ದಾನೆ..
ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ಯುವತಿಯನ್ನ ಎರಡು ಕುಟುಂಬಗಳನ್ನ ಒಪ್ಪಿಸಿ ಸಾಂಪ್ರದಾಯಿಕ ರೀತಿಯಲ್ಲಿ ಯುವಕ ಮದುವೆಯಾಗಿದ್ದ. ಕೆಲವು ದಿನಗಳ ನಂತರ ಹಣಕಾಸಿನ ಅಡಚಣೆ ಕಾರಣ ನೀಡಿ ಯುವತಿಯನ್ನ ತನ್ನೊಂದಿಗೆ ಇಟ್ಟಿಗೆ ಗೂಡಿನ ಕೆಲಸಕ್ಕೆಂದು ರಾಯಪುರಕ್ಕೆ ಕರೆದುಕೊಂಡು ಹೋಗಿದ್ದ. ನಂತರ ರಾಜಸ್ಥಾನದ ಹಳ್ಳಿಯೊಂದಕ್ಕೆ ಕರೆದುಕೊಂಡು ಹೋಗಿ ಅಲ್ಲಿ 55 ವರ್ಷದ ವ್ಯಕ್ತಿಯೊಬ್ಬನಿಗೆ 1,80,000 ರುಪಾಯಿಗೆ ಮಾರಿದ್ದಾನೆ.
ನಂತರ ತನ್ನ ಊರಿಗೆ ವಾಪಸಾಗಿರುವ ಯುವಕ… ಯುವತಿಯ ಪೊಷಕರಿಗೆ, ಹೆಂಡತಿ ಯಾರೊಂದಿಗೊ ಓಡಿ ಹೋಗಿದ್ದಾಳೆ ಎಂದು ಕಥೆ ಕಟ್ಟಿದ್ದಾನೆ. ಇದನ್ನ ಒಪ್ಪದ ಯುವತಿಯ ಪೋಷಕರು ಅನುಮಾನಗೊಂಡು ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನ ದಾಖಲಿಸದ್ದಾರೆ. ದೂರಿನ ಆಧಾರದ ಮೇಲೆ ಪ್ರಕರಣವನ್ನ ಕೈಗೆತ್ತಿಕೊಂಡ ಪೊಲೀಸರು ಬಾಲಕನ್ನ ವಿಚಾರಣೆ ಮಾಡಿದ ಮೇಲೆ ರಾಜಸ್ಥಾನದ ನಾಗರೀಕರೊಬ್ಬರಿಗೆ ಮಾರಾಟ ಮಾಡಿರುವ ವಿಷಯ ಬೆಳಕಿಗೆ ಬಂದಿದೆ.ಎಸ್ ಪಿ ನೇತೃತ್ವದ ತಂಡ ರಾಜಸ್ಥಾನಕ್ಕೆ ತೆರಳಿ ಯುವತಿನ್ನ ಸುರಕ್ಷಿತವಾಗಿ ಕರೆತಂದು ಪೋಷಕರಿಗೆ ಒಪ್ಪಿಸಿದ್ದಾರೆ.
ಯುವಕ ತನಗೆ ಆರೋಗ್ಯದಲ್ಲಿ ಏರುಪೇರಾಗಿದ್ದು ಹೃದಯ ಸಂಬಂಧಿ ಕಾಯಿಲೆ ಇದ್ದದ್ದರಿಂದ ಕೃತ್ಯ ಮಾಡಿದ್ದಾಗಿ ತಿಳಿಸಿದ್ದಾನೆ. ಆತನ ವಯಸ್ಸು 17 ವರ್ಷವಾಗಿದ್ದರಿಂದ ಬಾಲಾಪರಾಧ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಆರ್ಡರ್ ಮಾಡಿದ್ದು 70,000 ರೂ ಐಪೋನ್ – ಬಂದಿದ್ದು 10 ರುಪಾಯಿಯ ಸೋಪ್.