ಪಾಟ್ನಾ ಮೈದಾನ ಸ್ಫೋಟ ಪ್ರಕರಣ ನಾಲ್ವರಿಗೆ ಮರಣದಂಡನೆ.
2013 ರಲ್ಲಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಚುನಾವಣಾ ಭಾಷಣ ಮಾಡುವಾಗ ನಡೆದಿಂದ ಸರಣಿ ಬಾಂಬ್ ಸ್ಪೋಟದಲ್ಲಿ 5 ಮಂದಿ ಸಾವನ್ನಪ್ಪಿದ್ದು 83 ಮಂದಿ ಗಾಯಗೊಂಡಿದ್ದರು. ಈ ಘಟನೆಯ ಅಫರಾಧಿಗಳಿಗೆ 8 ವರ್ಷದ ಬಳಿಕ ಎನ್ ಐ ಎ ಕೋರ್ಟ್ ಶಿಕ್ಷೆ ಪ್ರಕಟಿಸಿದೆ.
ಪಾಟ್ನಾದ ಗಾಂಧಿ ಮೈದಾನದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ನಾಲ್ವರು ಆರೋಪಿಗಳಿಗೆ ಗಲ್ಲು ಶಿಕ್ಷೆಯನ್ನ ಪ್ರಕಟಿಸಿದೆ. ಇಬ್ಬರಿಗೆ ಜೀವಾವಧಿ ಶಿಕ್ಷೆ, ಇಬ್ಬರಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ ಒಬ್ಬ ಆರೋಪಿಗೆ ಏಳು ವರ್ಷಗಳ ಜೈಲು ಶಿಕ್ಷೆಯನ್ನ ಕೋರ್ಟ್ ವಿಧಿಸಿದೆ.
ಹುಂಕಾರ್ ರ್ಯಾಲಿಯಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದಲ್ಲಿ ಒಟ್ಟು 6 ಬಾಂಬ್ ಗಳು ಸ್ಪೋಟಗೊಂಡಿದ್ದವು. ಮೋದಿ ಭಾಷಣ ಮಾಡುತ್ತಿದ್ದ ವೇದಿಕೆಯಿಂದ 150 ಮೀಟರ್ ಅನತಿ ದೂರದಲ್ಲಿಯೇ ಬಾಂಬ್ ಗಳು ಸ್ಪೋಟಗೊಂಡಿದ್ದವು. ನಂತರ 4 ಬಾಂಬ್ ಗಳು ಜೀವಂತವಾಗಿ ಸಿಕ್ಕಿದ್ದವು.