ಭಾರತದ ಕೋವ್ಯಾಕ್ಸಿನ್ ಲಸಿಕೆಗೆ ಮಾನ್ಯತೆ ನೀಡಿದ ಆಸ್ಟ್ರೇಲಿಯಾ
ಕರೋನ ವೈರಸ್ ವಿರುದ್ಧದ ಲಸಿಕೆಯಾದ ಭಾರತದ ಕೋವಾಕ್ಸಿನ್ ಗೆ ಆಸ್ಟ್ರೇಲಿಯಾ ಸರ್ಕಾರ ಸೋಮವಾರ ಮಾನ್ಯತೆ ನೀಡಿದೆ. ಭಾರತ್ ಬಯೋಟೆಕ್ನ ಕೋವಾಕ್ಸಿನ್ ಮತ್ತು ಅಸ್ಟ್ರಾಜೆನೆಕಾ ಮತ್ತು ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಕೋವಿಶೀಲ್ಡ್ ಭಾರತದಲ್ಲಿ ಹೆಚ್ಚು ವ್ಯಾಪಕವಾಗಿ ಬಳಸಲಾಗುವ ಎರಡು ಲಸಿಕೆಗಳಾಗಿವೆ.
ಆಸ್ಟ್ರೇಲಿಯಾ ಈಗಾಗಲೇ ಕೋವಿಶೀಲ್ಡ್ ಗೆ ಮಾನ್ಯತೆ ನೀಡಲಾಗಿತ್ತು. ಆಸ್ಟ್ರೇಲೀಯದಲ್ಲಿ ಚಿಕಿತ್ಸಕ ಸರಕುಗಳನ್ನ ಅಂಗೀಕರಿಸುವ TGA (Therapeutic Goods Administration) ಆಡಳಿತವು ಕೋವಾಕ್ಸಿನ್ (ಭಾರತ್ ಬಯೋಟೆಕ್, ಭಾರತದಿಂದ ತಯಾರಿಸಲ್ಪಟ್ಟಿದೆ) ಮತ್ತು BBIBP-CorV (ಸಿನೋಫಾರ್ಮ್, ಚೀನಾದಿಂದ ತಯಾರಿಸಲ್ಪಟ್ಟಿದೆ) ಲಸಿಕೆಗಳನ್ನು ಮಾನ್ಯತೆ ನೀಡಿದೆ. ಈ ಲಸಿಕೆಗಳನ್ನ ಪಡೆದವರು ಆಸ್ಟ್ರೇಲಿಯಾ ಜನತೆಗೆ ಕೋವಿಡ್ ಸೋಂಕು ಹರಡಿಸುವ ಸಾಧ್ಯತೆ ಕಡಿಮೆ ಇದೆ ಎಂದು ಅಲ್ಲಿನ ಸರ್ಕಾರ ಅಭಿಪ್ರಾಯ ಪಟ್ಟಿದೆ.
ಭಾರತದ ದೇಸಿ ಲಸಿಕೆಗೆ ಆಸ್ಟ್ರೇಲಿಯಾ ಮಾನ್ಯತೆ ನೀಡಿರುವುದರಿಂದ ಆ ದೇಶಕ್ಕೆ ಪ್ರಯಾಣ ಬೆಳೆಸುವ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರಿಗೆ ಅನುಕೂಲವಾಗಲಿದೆ.