ಕನ್ನಡ ತಾಯಿ ಭುವನೇಶ್ವರಿ ದೇವಾಲಯ ಎಲ್ಲಿದೆ ಗೊತ್ತಾ ?

1 min read

ಕನ್ನಡ ತಾಯಿ ಭುವನೇಶ್ವರಿ ದೇವಾಲಯ ಎಲ್ಲಿದೆ ಗೊತ್ತಾ ?

ಕನ್ನಡ ತಾಯಿ, ಕನ್ನಡಮ್ಮ ಎಂದು  ನಾವು ಪೂಜಿಸುವ ಮಾತೆ ಶ್ರೀ ಭುವನೇಶ್ವರಿ ದೇವಿ ಕಾಲ್ಪನಿಕ ದೇವತೆಯಲ್ಲ. ಅದಕ್ಕೆಂದೆ  ಸ್ವಂತ ದೇವಾಲಯ ಕರ್ನಾಟಕದಲ್ಲಿದೆ.

ಇದು ಕನ್ನಡ ತಾಯಿಯ ದೇವಾಲಯ. ಮಲೆನಾಡಿನ ಎತ್ತರದ ಗಿರಿಯ ಮೇಲೆ, ಸಾಲು ಸಾಲು ಗುಡ್ಡಗಳ ಶಾಂತ ಪರಿಸರದ ಮಧ್ಯೆ ನೆಲೆ ನಿಂತಿರುವ ಭುವನೇಶ್ವರಿ ಅಮ್ಮನವರ ವಾಸಸ್ಥಳ. ಕರ್ನಾಟಕದ ಕನ್ನಡಾಂಬೆಯ ಏಕೈಕ ದೇವಾಲಯ ಇದಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಭುವನಗಿರಿ ಕ್ಷೇತ್ರ ಸಿದ್ದಾಪುರದಿಂದ ಕುಮಟಾಗೆ ತೆರಳುವ ರಸ್ತೆಯ ಪಕ್ಕದಲ್ಲಿಯೇ ಇದೆ. ವಿಶಾಲ ಪುಷ್ಕರಣಿಯ ಸಮೀಪದಲ್ಲಿಯೇ ಗುಡ್ಡ ಏರಲು ಮೆಟ್ಟಿಲುಗಳಿವೆ. ಈ ಸ್ಥಳಕ್ಕಿಂತ ಕೊಂಚ ಹಿಂದೆ ದೇವಾಲಯ ತಲುಪಲು ರಸ್ತೆಯೂ ಕಾಣಿಸುತ್ತದೆ.

ಭುವನಗಿರಿ ಅಮ್ಮನವರು ಎಂದೇ ಪ್ರಸಿದ್ಧವಾಗಿರುವ ಭುವನೇಶ್ವರಿ ತಾಯಿಯ ದೇವಾಲಯವನ್ನು ಬಿಳಗಿ ಅರಸರ ಕೊನೆಯ ದೊರೆ ಬಸವೇಂದ್ರ 1692ರಲ್ಲಿ ನಿರ್ಮಿಸಿದ ಎನ್ನುತ್ತದೆ ಇತಿಹಾಸ. ಶಿಲಾಮಯವಾದ ಗರ್ಭಗುಡಿ ಮತ್ತು ಅಮ್ಮನವರ ಉದ್ಭವ ಮೂರ್ತಿ ಈ ದೇವಾಲಯ ಪುರಾತನ ಕಾಲದ್ದು ಎಂಬುದನ್ನು ಸಾರಿ ಹೇಳುತ್ತವೆ.

ಬಿಳಗಿಯ ಅರಸರು ವಿಜಯನಗರ ಅರಸರ ಕಟ್ಟಾ ಅಭಿಮಾನಿಗಳಾಗಿದ್ದರು. ಅದರೊಂದಿಗೆ ಭಟ್ಟಾಕಳಂಕರ ಶಿಷ್ಯರಾಗ್ದ್ದಿದು ತೀವ್ರವಾದ ಕನ್ನಡ ಅಭಿಮಾನ ಹೊಂದಿದ್ದರು. ಆದ್ದರಿಂದಲೇ ಇಲ್ಲಿ  ಭುವನೇಶ್ವರಿ ದೇವಾಲಯವನ್ನು ನಿರ್ಮಿಸಿರಬಹುದು ಎಂದು ಹೇಳಲಾಗುತ್ತಿದೆ.

ಭುವನಾಸುರನೆಂಬ ರಾಕ್ಷಸನನ್ನು ಸಂಹಾರ ಮಾಡಿದ ನಂತರ ಭುವನೇಶ್ವರಿ ದೇವಿ ಇಲ್ಲಿ ನೆಲೆ ನಿಂತಿದ್ದರಿಂದ ಈ ಕ್ಷೇತ್ರಕ್ಕೆ ಭುವನಗಿರಿ ಎಂಬ ಹೆಸರು ಬಂದಿದೆ. ಈ ದೇವಾಲಯದ ಶಿಲಾಮಯ ಗರ್ಭಗುಡಿಯನ್ನು ಉಳಿಸಿಕೊಂಡು ಸುತ್ತಲಿನ ಕಟ್ಟಡವನ್ನು ಅತ್ಯಂತ ಸುಂದರವಾಗಿ ನವೀಕರಿಸಲಾಗಿದೆ.

ನಾವೆಲ್ಲರೂ ದೇವಾಲಯಕ್ಕೆ ಬೇಟಿ ಮಾಡಿ ಕನ್ನಡ ತಾಯಿಯ ಕೃಪೆಗೆ ಪಾತ್ರರಾಗೋಣ

ಆರು ರಾಜ್ಯಗಳು ರಚನೆಯಾದ ದಿನವಿದು ಯಾವವು ಗೊತ್ತಾ ?

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd