ಇಂದಿನಿಂದ ಶಬರಿಮಲೆ ದೇಗುಲ ಓಪನ್
ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಸ್ಥಳ, ಕೇರಳದ ಶಬರಿಮಲೆ ದೇವಸ್ಥಾನದ ಬಾಗಿಲು ಇಂದಿನಿಂದ ತೆರಯಲಿದೆ. ಚಿತಿರಾ ಅಟ್ಟವಿಶೇಷ ಪೂಜೆಗಾಗಿ ಶಬರಿಮಲೆ ದೇಗುಲವನ್ನು ತೆರೆಯಲಾಗಿದ್ದು ರಾತ್ರಿ 9 ನಂತರ ಗಂಟೆಗೆ ಮತ್ತೆ ಮುಚ್ಚಲಾಗುತ್ತದೆ.
ಮಾಲೆ ಹಾಕಿ ಬರುವ ಭಕ್ತರಿಗೆ ನವೆಂಬರ್ 15 ರಿಂದ 2 ತಿಂಗಳ ವರೆಗೆ ಅವಕಾಶ ಕಲ್ಪಿಸಲಾಗಿದೆ. ದರ್ಶನಕ್ಕೆ ಬರುವ ಭಕ್ತರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆಯನ್ ಹಾಕಿಸಿಕೊಂಡಿರಬೇಕು ಮತ್ತು 72 ಗಂಟೆಗಳ ಒಳಗಾಗಿ RTPCR ಪರೀಕ್ಷೆಯಲ್ಲಿ ನೆಗೆಟೀವ್ ವರದಿ ಪ್ರಮಾಣ ಪತ್ರವನ್ನ ತೋರಿಸಬೇಕು.
ಟಿಕೆಟ್ಗಳನ್ನ ಆನ್ ಲೈನ್ ಮೂಲಕ ಮೊದಲೇ ಬುಕ್ಕಿಂಗ್ ಮಾಡಬೇಕಿದೆ ಎಂದು ದೇವಸ್ಥಾನದ ದೈನಂದಿನ ಕಾರ್ಯಚಟುವಟಿಕೆಯನ್ನು ನೋಡಿಕೊಳ್ಳುವ ತಿರುವಾಂಕೂರು ದೇವಸಂ ಮಂಡಳಿ (TDB) ತಿಳಿಸಿದೆ
Kerala: Sabarimala Temple opens for devotees,for Chithira Attavishesha puja. It'll close at 9 pm after the puja. Devotees allowed by virtual queue booking system.They've to produce vaccination certificate, showing they're fully vaccinated or RTPCR -ve report not older than 72 hrs pic.twitter.com/x080lyPVU3
— ANI (@ANI) November 3, 2021