ಮಕ್ಕಳಿಂದ ಪಟಾಕಿ ಹೊಡೆಯುವ ಆನಂದ ಕಿತ್ತುಕೊಳ್ಳಬೇಡಿ – ಸದ್ಗುರು.
ಪಟಾಕಿಯನ್ನ ಬ್ಯಾನ್ ಮಾಡಬೇಡಿ, ಮಕ್ಕಳಿಗೆ ಪಟಾಕಿ ಹೊಡೆಯಲು ಅವಕಾಶ ಕೊಡಿ. ಪಟಾಕಿ ಹೊಡೆಯುವ ಆನಂದವನ್ನ ಮಕ್ಕಳಿಂದ ಕಿತ್ತುಕೊಳ್ಳಬೇಡಿ ನಿಮ್ಮ ವಾಯುಮಾಲಿನ್ಯದ ಕಾಳಜಿಗೆ ಅದು ದಾರಿಯಲ್ಲ. ನಿಮಗೆ ವಾಯು ಮಾಲಿನ್ಯದ ಕಾಳಜಿ ಇದ್ದರೆ ಮೂರು ದಿನ ಕಾರನ್ನ ಬಿಟ್ಟು ಕಚೇರಿಗೆ ಹೋಗಿ. ಮಕ್ಕಳಿಗಾಗಿ ತ್ಯಾಗ ಮಾಡಿ ಎಂದು ಸದ್ಗುರು ಹೇಳಿದ್ದಾರೆ.
Concern about air pollution is not a reason to prevent kids from experiencing the joy of firecrackers. As your sacrifice for them, walk to your office for 3 days. Let them have the fun of bursting crackers. -Sg #Diwali #DontBanCrackers pic.twitter.com/isrSZCQAec
— Sadhguru (@SadhguruJV) November 3, 2021
ದೀಪಾವಳಿ ಹಬ್ಬಕ್ಕೆ ಕೋವಿಡ್ 19 ಮತ್ತು ಪರಿಸರ ಮಾಲಿನ್ಯದ ಕಾರಣಗಳನ್ನ ನೀಡಿ ದೇಶದ ಹಲವು ಕಡೆಗಳಲ್ಲಿ ಪಟಾಕಿಯನ್ನ ಬ್ಯಾನ್ ಮಾಡಲಾಗಿದೆ. ಹಲವು ಕಡೆಗಳಲ್ಲಿ ಕೇವಲ ಹಸಿರು ಪಟಾಕಿಗಳನ್ನ ಮಾತ್ರ ಹೊಡೆಯಲು ಅವಕಾಶ ನೀಡಲಾಗಿದೆ.








