ಬಸ್ ನಲ್ಲಿ ಹಾಡು ಹಾಕಿದ್ರೆ ಬೀಳುತ್ತೆ ಕೇಸ್

1 min read
special bus

ಬಸ್ ನಲ್ಲಿ ಹಾಡು ಹಾಕಿದ್ರೆ ಬೀಳುತ್ತೆ ಕೇಸ್

ಬಸ್ ಪ್ರಯಾಣದ ವೇಳೆ ಹಾಡು ಕೇಳುವ ಅಭ್ಯಾಸ ಬಹು ಜನಕ್ಕೆ ಇರುತ್ತದೆ. ಇಯರ್ ಫೋನ್ ಅಥವಾ ಹೆಡ್ ಪೋನ್ ಹಾಕಿಕೊಂಡು ಹಾಡಿ ಕೇಳಿದರೆ ಯಾರಿಗೂ ಬೇಜಾರಿಲ್ಲ ಆದರೆ ಕೆಲವರು ಜೋರಗಿ ಕೇಳುವಂತೆ ಲೌಡ್ ಸ್ಪೀಕರ್ ಅಲ್ಲಿ ಹಾಡು ಹಾಕುತ್ತಾರೆ. ಇದು ಬಸ್ ನಲ್ಲಿರುವ ಇತರೆ ಪ್ರಯಾಣಿಕರಿಗೆ ಕಿರಿ ಉಂಟು ಮಾಡುತ್ತದೆ. ಇದನ್ನ ತಪ್ಪಿಸಲು  ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ  ನಿಗಮ ಹೊಸ ನಿಯಮವೊಂದನ್ನ ಜಾರಿಗೆ ತಂದಿದೆ.

ಮೊಬೈಲ್ ನಲ್ಲಿ ಜೋರಾಗಿ ಹಾಡು ಹಾಕಿದ್ರೆ ಬೀಳುತ್ತೆ ಕೇಸ್. ಪ್ರಯಾಣಿಕರು ಅನುಭವಿಸುವ ಕಿರಿಕಿರಿಯನ್ನ ತಪ್ಪಿಸಲು kkrtc ನಿಗಮವು ಹೊಸ ಸುತ್ತೋಲೆಯನ್ನ ಹೊರಡಿಸಿದೆ ಅದರ ಅನ್ವಯ ಬಸ್ ನಲ್ಲಿ ಯಾರಾದ್ರೂ ಜೋರಗಿ ಹಾಡು ಹಾಕಿದ್ರೆ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕೇಸ್ ಬೀಳಲಿದೆ. ಜೊತೆಗೆ ಅರ್ಧದಲ್ಲೆ ಬಸ್ ನಿಲ್ಲಿಸಿ ಪ್ರಯಾಣಿಕನನ್ನ ಇಳಿಸಲಾಗುತ್ತದೆ.

ಕರ್ನಾಟಕ ಮೋಟಾರು ವಾಹನಗಳ ಕಾಯ್ದೆ 1989ರ ನಿಯಮ 94(1)V ಪ್ರಕಾರ, ಬಸ್ ನಲ್ಲಿ ಜೋರಾಗಿ ಹಾಡು ಕೇಳುವುದು ಕಾನೂನು ಬಾಹಿರವಾಗಿದೆ. ಬಸ್ ಗಳಲ್ಲಿ ಜೋರಾಗಿ ಶಬ್ದ ಉಂಟು ಮಾಡಿ ಮೊಬೈಲ್ ಬಳಸುವುದಕ್ಕೆ ಸಂಪೂರ್ಣ ನಿರ್ಬಂಧ ಹಾಕಲಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd