ಲಸಿಕೆ ಪಡೆಯದಿದ್ರೂ ಮೊಬೈಲ್ ಕೋವಿಡ್ ಮೆಸೆಜ್…

1 min read

 

ಲಸಿಕೆ ಪಡೆಯದಿದ್ರೂ ಮೊಬೈಲ್ ಕೋವಿಡ್ ಮೆಸೆಜ್.

ಮೂರು ಸಾವಿರ ಕೋವಿಡ್ ವ್ಯಾಕ್ಸಿನ್ ಗಳನ್ನ ಅಕ್ರಮವಾಗಿ ದಾಸ್ತಾನು ಮಾಡಿರುವ ಘಟನೆ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ನಡೆದಿದೆ.

ಕರೋನಾ ಲಸಿಕೆಯನ್ನ ಬಡವರಿಗೋಸ್ಕರ ಸರ್ಕಾರ ಉಚಿತವಾಗಿ ವಿತರಣೆ ಮಾಡುತ್ತಿದೆ. ದರೆ ಕೆಲವು ಅಧಿಕಾರಿಗಳು ಮತ್ತು ಆಸ್ಪತ್ರೆಯ ನಿರ್ಲಕ್ಷ್ಯದಿಂದ ಸಾವಿರಾರು ಡೋಸ್ ಗಳು ವ್ಯರ್ಥವಾಗುತ್ತಿವೆ.

ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಮಿಯಾಗಂಜ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ  ಸುಮಾರು 3000 ಕೋವಿಡ್ ಲಸಿಕಗಳನ್ನ ಕೋಲ್ಡ್ ಸ್ಟೋರೇಜ್  ಹೊರಗಡೆ ಸಂಗ್ರಹಿಸಲಾಗಿದೆ.

ಅಷ್ಟೆ ಅಲ್ಲದೆ ನೀವು ಯಶಸ್ವಿಯಾಗಿ ಎರಡನೆ ಕೋವಿಡ್ ಲಸಿಕೆಗಳನ್ನ ಪಡೆದಿದ್ದೀರಿ ಎಂದು ಆ ಪ್ರದೇಶದಲ್ಲಿ ನಕಲಿ ಸಂದೇಶಗಳು ಮೆಸೆಜ್ ಬರುತ್ತಿವೆ ಎಂದು ವರದಿಯಾಗಿದೆ.

ಈ ಘಟನೆಯು ಸ್ಥಳೀಯರು ಮತ್ತು ಜಿಲ್ಲಾಡಳಿತದಲ್ಲಿ ಸಂಚಲನ ಮೂಡಿಸಿದ ಸ್ಥಳಕ್ಕಾಗಮಿಸಿದ ಸಫಿಪುರದ ಬಿಜೆಪಿ ಶಾಸಕ ಬಂಬಾಲಾಲ್ ದಿವಾಕರ್, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಉನ್ನತ ಮಟ್ಟದ ಅಧಿಕಾರಿಗಳು ಮತ್ತು ಮುಖ್ಯಮಂತ್ರಿ ಕಚೇರಿಗೆ ದೂರು ನೀಡಿದ್ದಾರೆ.

ಮಿಯಾಗಂಜ್ ಸಿಎಚ್‌ಸಿಯ ಸೂಪರಿಂಟೆಂಡೆಂಟ್ ಅವರ ಎರಡೂ ಮೊಬೈಲ್ ಸಂಖ್ಯೆಗಳು ಸ್ವಿಚ್ ಆಫ್ ಆಗಿದ್ದು ಸ್ಥಳದಿಂದ ಪರಾರಿಯಾಗಿದ್ದಾರೆ.

 

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd