ತಿರುಪತಿ ತಿರುಮಲ ಬೆಟ್ಟದಲ್ಲಿ ಭಾರಿ ಮಳೆ – ಭಕ್ತರು ಹೈರಾಣ

1 min read

ತಿರುಪತಿ ತಿರುಮಲ ಬೆಟ್ಟದಲ್ಲಿ ಭಾರಿ ಮಳೆ – ಭಕ್ತರು ಹೈರಾಣ

ದಕ್ಷಿಣ ಭಾರತದ ಪ್ರಸಿದ್ದ ತೀರ್ಥ ಕ್ಷೇತ್ರ ಯಾತ್ರಾ ಸ್ಥಳ  ತಿರುಪತಿ ತಿರುಮಲ ಬೆಟ್ಟದಲ್ಲಿ ಭಾರಿ ವರ್ಷ ಧಾರೆ ಸುರಿಯುತ್ತಿದೆ. ಬೆಟ್ಟಕ್ಕೆ ಬಂದ ಭಕ್ತರು ಮೆಳೆಯಲ್ಲಿ ಸಿಲುಕಿ ಹೈರಾಣಾಗಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ವಾಯಭಾರ ಕುಸಿತಗೊಂಡಿರುವ ಕಾರಣದಿಂದಾಗಿ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಭಾರಿ ಮಳೆ ಸುರಿಯುತ್ತಿದೆ.ಈಗಾಗಲೆ ಚೆನ್ನೈ ಬೆಂಗಳೂರಿನಂತಹ ಸಿಟಿಗಳು ಮಳೆಗೆ ತತ್ತರಿಸಿ ಹೋಗಿವೆ. ಆಂದ್ರ ಪ್ರದೇಶದ  ತಿರುಪತಿಯಲ್ಲೂ ಮಳೆ ಆರ್ಭಟ ಜೋರಾಗಿ ನಡೆಯುತ್ತಿದೆ.  ತಿರುಪತಿ ಬೆಟ್ಟದಲ್ಲಿ ಭಾರಿ ಮಳೆಯಿಂದಾಗಿ ಅಲ್ಲಿಲ್ಲಿ ಚಿಕ್ಕ ಚಿಕ್ಕ ಜಲಪಾತಗಳು ಸೃಷ್ಟಿಯಾಗಿವೆ. ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಸಾಕಷ್ಟು ಮರಗಳು ಧರೆಗುಳಿದಿವೆ. ಅಲ್ಲಲ್ಲಿ ಭೂ ಕುಸಿತ ಸಹ ಉಂಟಾಗಿದೆ. ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ಕೆಲವೇ ಗಂಟೆಗಳ ಅವಧಿಯಲ್ಲಿ 10 ಸೆ.ಮೀ ಮಳೆ ಸುರಿದಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd