ಕೇರಳದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು, ರೈಲ್ವೆ ಸೇವೆಗಳಲ್ಲಿ ವ್ಯತ್ಯಯ…
ಗುರುವಾರ ರಾತ್ರಿ ಕೇರಳದ ಕೊಲ್ಲಂ ಕಡೆಗೆ ಹೋಗುತ್ತಿದ್ದ ಗೂಡ್ಸ್ ರೈಲಿನ ನಾಲ್ಕು ವ್ಯಾಗನ್ಗಳು ರೈಲು ನಿಲ್ದಾಣದ ಬಳಿ ಹಳಿತಪ್ಪಿವೆ. ಈ ಮಾರ್ಗದಲ್ಲಿ ಸಂಚರಿಸುವ ಹಲವು ರೈಲು ಸೇವೆಗಳ ಮೇಲೆ ಪರಿಣಾಮ ಬೀರಿದೆ. ಯಾವುದೇ ಅವಘಡಗಳಾದ ಬಗ್ಗೆ ವರದಿಯಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಆಂಧ್ರಪ್ರದೇಶದಿಂದ ಸಿಮೆಂಟ್ ಸಾಗಿಸುತ್ತಿದ್ದ ಸರಕು ಸಾಗಾಣಿಕೆ ರೈಲು ರಾತ್ರಿ 10.30ರ ಸುಮಾರಿಗೆ ಆಲುವಾ ನಿಲ್ದಾಣದ ಮೂರನೇ ಪ್ಲಾಟ್ಫಾರ್ಮ್ಗೆ ಪ್ರವೇಶಿಸುವಾಗ ರೈಲಿನ ಎರಡನೇ, ಮೂರನೇ, ನಾಲ್ಕನೇ ಮತ್ತು ಐದನೇ ಬೋಗಿಗಳು ಹಳಿತಪ್ಪಿವೆ.
ಘಟನೆಯ ನಂತರ, ಹಲವು ರೈಲುಗಳು ವಿವಿಧ ನಿಲ್ದಾಣಗಳಲ್ಲಿ ಗಂಟೆಗಟ್ಟಲೆ ಸಿಕ್ಕಿಹಾಕಿಕೊಂಡಿವೆ. ರೈಲು ಸೇವೆಗಳಲ್ಲಿ ವ್ಯತ್ಯಯಕ್ಕೆ ಕಾರಣವಾಗಿದೆ.
“ಶೀಘ್ರದಲ್ಲೇ ಸೇವೆಗಳನ್ನು ಮರುಸ್ಥಾಪಿಸಲು ಪ್ರಯತ್ನಿಸುತ್ತಿದ್ದೇವೆ, ಈಗಾಗಲೇ ಕೆಲವು ಸೇವೆಗಳು ಜಾರಿಯಲ್ಲಿವೆ. ಈಗಾಗಲೇ ಒಂದು ಮಾರ್ಗವು ಕಾರ್ಯನಿರ್ವಹಿಸುತ್ತಿದೆ. ಎರಡನೇ ಮಾರ್ಗವು 9 ಗಂಟೆಗೆ ಸೇವೆಗಳನ್ನು ಪುನಃಸ್ಥಾಪಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ತಿರುವನಂತಪುರಂ ವಿಭಾಗದ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಆರ್ ಮುಕುಂದ್ ಹೇಳಿದರು.