7 ರೂ ಕ್ಯಾರಿಬ್ಯಾಗ್ ಗಾಗಿ 11,000 ದಂಡ ತೆತ್ತ ಪಿಜ್ಜಾ ಅಂಗಡಿ
ತಮ್ಮ ಶಾಪ್ ನ ಲೋಗೋ ಇರುವ ಕ್ಯಾರಿಬ್ಯಾಗ್ ಕೊಂಡುಕೊಳ್ಲುವುದಕ್ಕೆ ಗ್ರಾಹಕರಿಗೆ ಒತ್ತಾಯ ಮಾಡುವಂತಿಲ್ಲ…ಒತ್ತಾಯಿಸದರೆ ಏನ್ ಆಗುತ್ತೆ ಅನ್ನೋದಕ್ಕೆ ಈ ಪ್ರಕರಣ ಉದಾಹರಣೆ.
ಹೈದರಾಬಾದಿನ ಗ್ರಾಹಕ ರಕ್ಷಣಾ ವೇದಿಕೆಯು ಪಿಜ್ಜಾ ಔಟ್ಲೆಟ್ಗೆ 7.62 ರೂ.ಗೆ ಸಂಸ್ಥೆಯ ಲಾಂಛನವಿರುವ ಕ್ಯಾರಿ ಬ್ಯಾಗ್ ಖರೀದಿಸುವಂತೆ ಒತ್ತಾಯಿಸಿದ್ದಕ್ಕಾಗಿ ಗ್ರಾಹಕರಿಗೆ 11,000 ರೂ. ನೀಡುವಂತೆ ಪಿಜ್ಜಾ ಶಾಪ್ ಗೆ ದಂಡ ವಿಧಿಸಿದೆ.
ದೂರುದಾರರು ಸೆಪ್ಟೆಂಬರ್ 16, 2019 ರಂದು ಪಿಜ್ಜಾ ಟೇಕ್ಅವೇಗೆ ಆರ್ಡರ್ ಮಾಡಿದ್ದರು. ಅವರಿಗೆ ಬ್ರಾಂಡೆಡ್ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ಗೆ ಹೆಚ್ಚುವರಿಯಾಗಿ 7.62 ರೂ.ಗಳನ್ನು ವಿಧಿಸಲಾಯಿತು. ಕೆ ಮುರಳಿ ಕುಮಾರ್ ಎಂಬ ವಿದ್ಯಾರ್ಥಿಯು ಪಿಜ್ಜಾ ಔಟ್ಲೆಟ್ ಬಗ್ಗೆ ದೂರು ನೀಡಿ ಗ್ರಾಹಕರ ವೇದಿಕೆಯನ್ನು ಸಂಪರ್ಕಿಸಿದರು
ವಿದ್ಯಾರ್ಥಿಯು ಪಿಜ್ಜಾ ಔಟ್ಲೆಟ್ನಿಂದ “ಕಿರುಕುಳ” ಎಂದು ಆರೋಪಿಸಿದರು, ಪಿಜ್ಜಾ ಔಟ್ಲೆಟ್ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿತ್ತು. ಎರಡು ವರ್ಷಗಳ ಸುದೀರ್ಘ ವಿಚಾರಣೆಯ ನಂತರ, ವೇದಿಕೆಯು ಗ್ರಾಹಕರಿಗೆ ರೂ 11,000 ಪಾವತಿಸಲು ಔಟ್ಲೆಟ್ಗೆ ಆದೇಶಿಸಿತು.