ಲಸಿಕೆ ತೆಗೆದುಕೊಳ್ಳಿ ಎಂದರೇ ಮರ ಹತ್ತಿ ನಿರಾಕರಿಸಿದ ಭೂಪ…
ಗ್ರಾಮೀಣ ಭಾರತದ ಹಲವು ಭಾಗಗಳು COVID-19 ಲಸಿಕೆ ಗುರಿಯನ್ನು ಸಾಧಿಸಲು ವಿಫಲಗುತ್ತಿವೆ. ಏಕೆಂದರೆ ಜನರು ಲಸಿಕೆ ತೆಗೆದುಕೊಳ್ಳುವ ಬಗ್ಗೆ ಈಗಲೂ ಆತಂಕದಲ್ಲಿದ್ದಾರೆ ಮತ್ತು ಕಳವಳ ವ್ಯಕ್ತಪಡಿಸುತ್ತಲೆ ಇದ್ದಾರೆ.
ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊವು ಸಾರ್ವಜನಿಕರಲ್ಲಿ ಲಸಿಕೆ ಹಿಂಜರಿಕೆಯ ತೋರಿಸುತ್ತದೆ. ಪುದುಚೇರಿಯ ವಿಲ್ಲನೂರ್‌ನಲ್ಲಿ ಕೋವಿಡ್ -19 ಲಸಿಕೆಯನ್ನು ನೀಡಲು ಬಂದ ಆರೋಗ್ಯ ಕಾರ್ಯಕರ್ತರಿಂದ ತಪ್ಪಿಸಿಕೊಳ್ಳಲು ಮಧ್ಯವಯಸ್ಕ ವ್ಯಕ್ತಿಯೊಬ್ಬರು ಮರವನ್ನು ಹತ್ತುತ್ತಿರುವ ವೀಡಿಯೊ ವೈರಲ್ ಆಗಿದೆ.
ಕೆಳಗೆ ಬಂದು ವ್ಯಾಕ್ಸಿನೇಷನ್ ಪಡೆಯಲು ಆರೋಗ್ಯ ಕಾರ್ಯಕರ್ತರು ಪದೇ ಪದೇ ವಿನಂತಿಸಿದರೂ ಆ ವ್ಯಕ್ತಿ ಕೆಳಗಿಳಿಯದೇ ಮರದ ಮೇಲೆ ಕುಳಿತಿದ್ದಾನೆ. ಆರೋಗ್ಯ ಕಾರ್ಯಕರ್ತರ ಮಾತಿಗೆ ಕಿವಿಗೊಡದೆ “ನಾನು ಲಸಿಕೆ ತೆಗೆದುಕೊಳ್ಳುವುದಿಲ್ಲ. ನೀವು ನನ್ನನ್ನು ಹಿಡಿಯಲು ಸಾಧ್ಯವಿಲ್ಲ ಎಂದು ಹೇಳುತ್ತಾನೆ.
ಆರೋಗ್ಯ ಕಾರ್ಯಕರ್ತರು ಎಷ್ಟೇ ಹರಸಾಹಸ ಪಟ್ಟರು ಆ ವ್ಯಕ್ತಿ ಕೆಳಗೆ ಇಳಿಯಲೇ ಇಲ್ಲ, ಮತ್ತು ನಂತರ ಕಾರ್ಮಿಕರು ಅವನಿಗೆ ಲಸಿಕೆ ಹಾಕದೆ ಹಾಗೆ ಹೊರಟು ಹೊದರು. ಪುದುಚೇರಿ ಸರ್ಕಾರವು 100% ಲಸಿಕೆ ನೀಡುವ ಗುರಿ ಮುಟ್ಟಲು, ಜನರಲ್ಲಿ ಹಿಂಜರಿಕೆಯ ಕಾರಣದಿಂದಾಗಿ ಸಾಧ್ಯವಾಗುತ್ತಿಲ್ಲ.