ಟೆಸ್ಟ್ ಕ್ರಿಕೆಟ್ ಗೆ ದಿಢೀರ್ ವಿದಾಯ ಹೇಳಿದ ಕ್ವಿಂಟನ್ ಡಿ ಕಾಕ್….

1 min read

ಟೆಸ್ಟ್ ಕ್ರಿಕೆಟ್ ಗೆ ದಿಢೀರ್ ವಿದಾಯ ಹೇಳಿದ ಕ್ವಿಂಟನ್ ಡಿ ಕಾಕ್….

ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, ಎಲ್ಲರಿಗೂ ಶಾಕ್ ನೀಡಿದ್ದಾರೆ. ಈ ಬಗ್ಗೆ ಕ್ರಿಕೆಟ್ ಸೌತ್ ಆಫ್ರಿಕಾ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ. ಗುರುವಾರದಂದು ಅವರ ತಂಡ ಸೆಂಚುರಿಯನ್ ಮೈದಾನದಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾ ವಿರುದ್ಧ 113 ರನ್‌ಗಳ ಹೀನಾಯ ಸೋಲನುಭವಿಸಿತ್ತು.

ಕೇವಲ 29ನೇ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ ಡಿ ಕಾಕ್ ಅವರ ನಿರ್ಧಾರ ಅಚ್ಚರಿ ಮೂಡಿಸಿದೆ. ಆದರೆ, ಅವರು ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರಿಸಲಿದ್ದಾರೆ.

ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಟ್ವೀಟ್ ಮಾಡಿ  – ಪ್ರೋಟಿಯಸ್ ವಿಕೆಟ್-ಕೀಪರ್ ಬ್ಯಾಟ್ಸ್‌ಮನ್, ಕ್ವಿಂಟನ್ ಡಿ ಕಾಕ್ ಅವರು ತಮ್ಮ  ಕುಟುಂಬದೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವ ಉದ್ದೇಶದಿಂದ ತಕ್ಷಣವೇ ಜಾರಿಗೆ ಬರುವಂತೆ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ.

 ಈ ನಿರ್ಧಾರವನ್ನು ತೆಗೆದುಕೊಳ್ಳುವುದು ನನಗೆ ಸುಲಭವಲ್ಲ. ಸಶಾ ಮತ್ತು ನಾನು ನಮ್ಮ ಮೊದಲ ಮಗುವನ್ನು ಈ ಜಗತ್ತಿಗೆ ಸ್ವಾಗತಿಸಲಿದ್ದೇವೆ ಮತ್ತು ಅದಕ್ಕೂ ಮೀರಿ ನಮ್ಮ ಕುಟುಂಬವನ್ನು ಬೆಳೆಸಲು ನೋಡುತ್ತಿರುವ ಕಾರಣ, ನನ್ನ ಭವಿಷ್ಯ ಹೇಗಿರುತ್ತದೆ ಜೀವನದಲ್ಲಿ ನನ್ನ ಆದ್ಯತೆ ಏನಾಗಿರಬೇಕು ಎಂದು ಯೋಚಿಸಲು ನಾನು ಸಾಕಷ್ಟು ಸಮಯವನ್ನು ತೆಗೆದುಕೊಂಡಿದ್ದೇನೆ. ಎಂದು ಕ್ವಿಂಟನ್ ಡಿ ಕಾಕ್ ಆಫ್ರಿಕನ್ ಬೋರ್ಡ್‌ಗೆ ನೀಡಿದ ಹೇಳಿಕೆಯಲ್ಲಿ ಹೇಳಿದ್ದಾರೆ.

29 ವರ್ಷದ ಡಿ ಕಾಕ್ 2014ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು. ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ 54 ಟೆಸ್ಟ್ ಪಂದ್ಯಗಳನ್ನು ಆಡಿ 38.82 ಸರಾಸರಿಯಲ್ಲಿ ಒಟ್ಟು 3300 ರನ್ ಗಳಿಸಿದ್ದಾರೆ. 91 ಇನ್ನಿಂಗ್ಸ್‌ ಗಳಲ್ಲಿ, ಅವರ ಬ್ಯಾಟ್ನಿಂದ 6 ಶತಕ ಮತ್ತು 22 ಅರ್ಧ ಶತಕಗಳು ಸಿಡಿದಿವೆ.

ಸೆಂಚುರಿಯನ್‌ನಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ, ಕ್ವಿಂಟನ್ ಡಿ ಕಾಕ್ ಬ್ಯಾಟ್‌ನೊಂದಿಗೆ ಅಷ್ಟೇನು ಅಬ್ಬರಿಸಲು ಸಾಧ್ಯವಾಗಲಿಲ್ಲ.  ಮೊದಲ ಇನ್ನಿಂಗ್ಸ್‌ನಲ್ಲಿ 63 ಎಸೆತಗಳಲ್ಲಿ 34 ರನ್ ಗಳಿಸಿ, ಎರಡನೇ ಇನ್ನಿಂಗ್ಸ್‌ನಲ್ಲಿ 28 ಎಸೆತಗಳಲ್ಲಿ ಕೇವಲ 21 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd