ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದ ವೀರೇಂದ್ರ ಸೆಹ್ವಾಗ್ ಸಹೋದರಿ…
Virender Sehwag’s sister, Smt Anju Sehwag joins AAP
ಭಾರತದ ಮಾಜಿ ಕ್ರಿಕೆಟ್ ಆಟಗಾರ ವೀರೇಂದ್ರ ಸೆಹ್ವಾಗ್ ಅವರ ಸಹೋದರಿ ಅಂಜು ಸೆಹ್ವಾಗ್ ಶುಕ್ರವಾರ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಸೇರ್ಪಡೆಯಾಗಿದ್ದಾರೆ. ಅಂಜು ಮಾಜಿ ಕೌನ್ಸಿಲರ್ ಆಗಿದ್ದು, ಅವರು ಕಾಂಗ್ರೆಸ್ ಪಕ್ಷದ ಟಿಕೆಟ್‌ನಲ್ಲಿ ಗೆದ್ದಿದ್ದರು.
ಅಂಜು ಸೆಹ್ವಾಗ್ ಈ ಹಿಂದೆ 2012ರ ದೆಹಲಿ ಎಂಸಿಡಿ ಚುನಾವಣೆಯಲ್ಲಿ ದಕ್ಷಿಣ ಪುರಿ ವಿಸ್ತರಣೆಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಶುಕ್ರವಾರದ ಎಎಪಿ ಪಕ್ಷದ ಅಧಿಕೃತ ಟ್ವೀಟರ್ ನಲ್ಲಿ “ವೀರೇಂದ್ರ ಸೆಹ್ವಾಗ್ ಅವರ ಸಹೋದರಿ, ಶ್ರೀಮತಿ ಅಂಜು ಸೆಹ್ವಾಗ್ ಎಎಪಿಗೆ ಸೇರಿದ್ದಾರೆ. ಅವರು ದೆಹಲಿಯ ಮಾಜಿ ಕಾಂಗ್ರೆಸ್ ಕೌನ್ಸಿಲರ್ ಮತ್ತು ವೃತ್ತಿಯಲ್ಲಿ ಶಿಕ್ಷಕರಾಗಿದ್ದರು. ಸಿಎಂ ಕೇಜ್ರಿವಾಲ್ ಮಾಡಿದ ಕೆಲಸದಿಂದ ಪ್ರೇರಿತರಾಗಿ, ಅವರು ಎಲ್ಲರೊಂದಿಗೆ ಆಪ್ ಸೇರಿದ್ದಾರೆ. ಎಂದು ಬರೆದುಕೊಂಡಿದ್ದಾರೆ.
Virender Sehwag's sister, Smt Anju Sehwag joins AAP!
She is a former Congress councillor from Delhi and was a Teacher by profession.
Inspired by the work done by CM Kejriwal, she has joined AAP with all her supporters! pic.twitter.com/tdgdj7SYQ1
— AAP (@AamAadmiParty) December 31, 2021