ಕೆಜಿಎಫ್ ಜೊತೆ ರೇಸ್ ಗೆ ನಿಂತ ಬೀಸ್ಟ್…..

1 min read

ಕೆಜಿಎಫ್ ಜೊತೆ ರೇಸ್ ಗೆ ನಿಂತ ಬೀಸ್ಟ್…..

ಇಡೀ ಭಾರತ ಕಾತರದಿಂದ ಕಾಯುತ್ತಿರುವ 2022  ರ ಬಹು ನಿರಿಕ್ಷಿತ ಚಿತ್ರ ಕೆ ಜಿ ಎಫ್.  2022ರ ಎಪ್ರಿಲ್ ಗೆ ತೆರೆಗೆ ಬರಲು ಚಿತ್ರ ತಂಡ ಸಜ್ಜಾಗುತ್ತಿದೆ… ದಿನಗಳು ಕಳೆದಂತೆ ಚಿತ್ರ ತಂಡದ ಮೇಲೆ ನಿರೀಕ್ಷೆ ಸಹ ಜಾಸ್ತಿಯಾಗುತ್ತಿದೆ. ಈಗ ರಿಲೀಸ್ ಆಗಿರುವ ಪೋಸ್ಟರ್ ಮತ್ತು ಟೀಸರ್ ನಿಂದಲೆ  ಬೆಟ್ಟದಷ್ಟು ಹೈಪ್  ಕ್ರಿಯೇಟ್ ಮಾಡಿದೆ…

ಇತ್ತೀಚಿಗೆ  ಕೆ ಜಿ ಎಫ್ ಎದುರು ಹಲವು ಚಿತ್ರಗಳು ಸ್ಪರ್ದೆಗೆ ಇಳಿಯುವ ಧೈರ್ಯವನ್ನ ತೋರಿಸುತ್ತಿವೆ.  ಈಗಾಗಲೆ ಕೆ ಜಿ ಎಫ್ ಎದುರು ಸ್ಪರ್ಧಿಸೋಕೆ  ಅಮಿರ್ ಖಾನ್ ಅಭಿನಯದ ಲಾಲ್ ಸಿಂಗ್ ಛಡ್ಡಾ ರೆಡಿಯಾಗಿದೆ.  ಚಿತ್ರತಂಡ ಏಪ್ರಿಲ್ 14 ಬರುವುದಾಗಿ ದಿನಾಂಕ ಘೋಷಣೆಯನ್ನೂ ಸಹ ಮಾಡಿದೆ. ಈಗ  ಇನ್ನೊಂದು ಸಿನಿಮಾ ಕೆಜಿಎಫ್ ಜೊತೆ ರೇಸ್ ಗೆ ಇಳಿಯುವ ಮುನ್ಸೂಚನೆ ಕೊಟ್ಟಿದೆ. ಅದು ದಳಪತಿ ವಿಜಯ್ ಅಭಿನಯದ ಬೀಸ್ಟ್ . ಕಾಲಿವುಡ್ ಸೂಪರ್ ಸ್ಟಾರ್ ವಿಜಯ್ ಅಭಿನಯದ ಬೀಸ್ಟ್ ಚಿತ್ರದ ಪೊಸ್ಟರ ಹೊಸ ವರ್ಷದ ಉಡುಗೊರೆಯಾಗೆ ಡಿಸೆಂಬರ್ 31 ರಂದು ಬಿಡುಗಡೆಯಾಗಿದೆ.  ಪೋಸ್ಟರ್ ನಲ್ಲಿ ಏಪ್ರಿಲ್ ನಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿದೆ.  ಬೀಸ್ಟ್ ಕೂಡ ಏಪ್ರಿಲ್ ನಲ್ಲಿ ಕಣಕ್ಕಿಳಿದರೆ  ಕೆಜಿಎಫ್ ಎರಡು ದೊಡ್ಡ ಇಂಡಸ್ಟ್ರಿಗಳಿಂದ  ಪೈಪೊಟಿ  ಬೀಳಲಿದೆ.

ಇದಲ್ಲದೆ ಟಾಲಿವುಡ್ ನಿಂದ ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ಸರ್ಕಾರು ವಾರಿ ಪಾಟ ಸಹ ಏಪ್ರಿಲ್ ನಲ್ಲಿ ಬರುವ ನಿರೀಕ್ಷೆ ಇದೆ. ಈ ಚಿತ್ರತಂಡ ಆರ್ ಆರ್ ಆರ್ ಸಿನಿಮಗಾಗಿ ತ್ಯಾಗ ಮಾಡಿ ಸಂಕ್ರಾತಿಯಿಂದ ಮುಂದಕ್ಕೋಗಿದೆ.

ಯಾರೇ ಬರಲಿ ಯಾರೇ ಇರಲಿ ಕೆಜಿಎಫ್ ಗೆ ಅಡ್ಡಿ ಇಲ್ಲ ಎನ್ನುವುದು ಕೆಜಿಎಫ್ ಅಭಿಮಾನಿಗಳ ಮಾತು. ಈ ಹಿಂದೆ ಕೆಜಿ ಎಫ್  ಚಿತ್ರದ ಎದುರು ಬಾಲಿವುಡ್ ಬಾದ್ ಶಾ  ಶಾರುಕ್ ಅಭಿನಯದ ಜೀರೋ ಚಿತ್ರ ಬಿಡುಗಡೆಯಾಗಿ  ಮಕಾಡೆ ಮಲಗಿತ್ತು.. ಅಂತದೇ ಹಿಸ್ಟರಿಯನ್ನ  ಕೆ ಜಿ ಎಫ್ 2 ಚಿತ್ರ ಸಹ ಮತ್ತೆ ನಿರ್ಮಿಸಲಿದೆ ಎನ್ನುವುದು  ಕೆಜಿಎಫ್ ಅಭಿಮಾನಿಗಳ ವಲಯದಲ್ಲಿ ಕೇಳಿ ಬರುತ್ತಿರುವ ಮಾತು….

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd