ಕರುನಾಡಲ್ಲಿ ಕರಿ ಮಾರಿಯ ಆರ್ಭಟ : ಈವರೆಗೂ 12 ಮಂದಿ ಬಲಿ
ಬೆಂಗಳೂರು : ಕೊರೊನಾ ಸೋಂಕು ಕಾಟದ ನಡುವೆಯೇ ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಆತಂಕ ಕೂಡ ಹೆಚ್ಚಾಗಿದೆ.
ಕೊರೊನಾದಿಂದ ಚೇತರಿಸಿಕೊಂಡವರಲ್ಲಿ ಹೆಚ್ಚಾಗಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಳ್ಳುತ್ತಿದ್ದು, ಈ ವರೆಗೂ ರಾಜ್ಯದಲ್ಲಿ 12 ಮಂದಿ ಬಲಿಯಾಗಿದ್ದಾರೆ.
ಮಧುಮೇಹ ಇರುವ ಅಥವಾ ಸ್ಟಿರಾಯ್ಡ್ ತೆಗೆದುಕೊಂಡವರಲ್ಲಿ ಶೇ. 90ರಿಂದ ಶೇ. 95ರಷ್ಟು ಬ್ಲ್ಯಾಕ್ ಫಂಗಸ್ ಪತ್ತೆಯಾಗುತ್ತಿದೆ.
ರಾಜ್ಯದಲ್ಲಿ ಇದುವರೆಗೂ 446 ಜನರಲ್ಲಿ ಈ ಕರಿ ಮಾರಿ ಕಾಣಿಸಿಕೊಂಡಿದೆ.
ಇದರಲ್ಲಿ 433 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇಲ್ಲಿಯವರೆಗೆ ಒಟ್ಟು 12 ಮಂದಿ ಬಲಿಯಾಗಿದ್ದಾರೆ.
ಬೆಂಗಳೂರಿನಲ್ಲಿ 86 ಕೇಸ್ಗಳು ಪತ್ತೆಯಾಗಿವೆ. ಬೆಂಗಳೂರು ಗ್ರಾಮಾಂತರ – 4, ಬೆಂಗಳೂರು ನಗರ – 17, ಬೊಮ್ಮನಹಳ್ಳಿ ಝೋನ್ – 28,
ಪೂರ್ವ ವಲಯ – 5, ದಕ್ಷಿಣ ವಲಯ – 3, ಪಶ್ಚಿಮ ವಲಯ – 3, ಯಲಹಂಕ ಝೋನ್ – 26 ಜನರಲ್ಲಿ ಕಪ್ಪು ಶಿಲೀಂಧ್ರ ಪ್ರಕರಣಗಳು ವರದಿಯಾಗಿವೆ.










