ಕಿರಾತಕ ಚಿತ್ರ ನಿರ್ದೇಶಕ ಪ್ರದೀಪ್ ರಾಜ್ ನಿಧನ

1 min read

ಕಿರಾತಕ ಚಿತ್ರ ನಿರ್ದೇಶಕ ಪ್ರದೀಪ್ ರಾಜ್ ನಿಧನ

ರಾಕಿಂಗ್ ಸ್ಟಾರ್ ಯಶ್ ಗೆ  ಕಿರಾತಕ ಚಿತ್ರವನ್ನ ನಿರ್ದೇಶನ ಮಾಡಿದ್ದ ಸ್ಯಾಂಡಲ್ ವುಡ್ ನಿರ್ದೇಶಕ  ಪ್ರದೀಪ್ ರಾಜ್  ಕೋವಿಡ್ 19 ನಿಂದಾಗಿ ನಿಧನರಾಗಿದ್ದಾರೆ. 46 ವರ್ಷ ವಯಸ್ಸಿನ ಪ್ರದೀಪ್ ರಾಜ್ ನಿಧನದ ಬಗ್ಗೆ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.  ಹಲವಾರು ವರ್ಷಗಳಿಂದ ಡಯಾಬಿಟಿಸ್ ನಿಂದ ಬಳಲುತಿದ್ದರು. ಇದರೊಂದಿಗೆ ಕರೊನಾ ಸೋಂಕು ತಗುಲಿದ್ದು  ಇಂದು ಮೃತಪಟ್ಟಿದ್ದಾರೆ ಎಂದು  ಕಿರಿಯ ಸಹೋದರ ಪ್ರಶಾಂತ್ ರಾಜ್ ಮಾಹಿತಿ ನೀಡಿದ್ದಾರೆ.

ಕಿರಾತಕ ಚಿತ್ರದ ನಿರ್ದೇಶನದ ನಂತರ  ಇವರ ಖ್ಯಾತಿ ಹೆಚ್ಚಿತ್ತು, ಅವರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.  ಸತೀಶ್ ನೀನಾಸಂ ನಟನೆಯ ಅಂಜದಗಂಡು,  ಗಣೇಶ್ ಅಭಿನಯದ ಮಿಸ್ಟರ್ 420 ಕಾರ್ತೀಕ ಜಯರಾಮ್ ಚಿಕ್ಕಣ್ಣ ಮುಂತಾದವರು ಅಭಿನಯಿಸಿದ್ದ ಬೆಂಗಳೂರು 560023 ಮತ್ತು ದುನಿಯಾ ವಿಜಯ್ ಗೆ ರಜನಿಕಾಂತ್ ಚಿತ್ರವನ್ನ ನಿರ್ದೇಶಿಸಿದ್ದರು.

ಕಳೆದ 6 ತಿಂಗಳಿಂದ ಪ್ರದೀಪ್ ರಾಜ್ ಅವರಿಗೆ ಆರೋಗ್ಯ ಕೈ ಕೊಟ್ಟಿತ್ತು, ಲಿವರ್ ಸಮಸ್ಯೆ ಆಗಿತ್ತು. ಅನೇಕಾ ಆಸ್ಪತ್ರೆಗಳಿಗೆ ತೋರಿಸಿದ್ದರು ಕರೋನಾ ಇನ್ಫೆಕ್ಷನ್ ನಿಂದಾಗಿ ಕೊನೆಯುಸಿರೆಳೆದಿದ್ದಾರೆ.

ಪ್ರದೀಪ್ ರಾಜ್ ಪತ್ನಿ ಮತ್ತು ಇಬ್ಬರು ಮಕ್ಕಳನ್ನಅಗಲಿದ್ದಾರೆ, ಗುರುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಪಾಂಡಿಚೇರಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮಾಹಿತಿ ನೀಡಿದೆ. ಚಿತ್ರರಂಗದ ಅನೇಕರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd