127 ಎಸೆತ.. 230 ರನ್.. ಟ್ರಾವಿಸ್ ಹೆಡ್ ಆರ್ಭಟ

1 min read

127 ಎಸೆತ.. 230 ರನ್.. ಟ್ರಾವಿಸ್ ಹೆಡ್ ಆರ್ಭಟ

ಸೌತ್ ಆಸ್ಟ್ರೇಲಿಯಾ : 127 ಎಸೆತ.. 28 ಬೌಂಡರಿ.. 8 ಭರ್ಜರಿ ಸಿಕ್ಸರ್.. 230 ರನ್.. ಇದು ಸೌತ್ ಆಸ್ಟ್ರೇಲಿಯಾ ತಂಡದ ನಾಯಕ ಟ್ರಾವಿಸ್ ಹೆಡ್ ಆರ್ಭಟ.

ಹೌದು..! ಗುರುವಾರ ನಡೆದ ಆಸ್ಟ್ರೇಲಿಯಾ ಡೊಮೆಸ್ಟಿಕ್ ಏಕದಿನ ಟೂರ್ನಿಯಲ್ಲಿ ಕ್ವೀನ್ಸ್ ಲ್ಯಾಂಡ್ ವಿರುದ್ಧ ಟ್ರಾವಿಸ್ ಅಬ್ಬರಿಸಿ ಬೊಬ್ಬರಿಸಿದ್ದಾರೆ.

ಕೇವಲ 127 ಎಸೆತಗಳನ್ನು ಎದುರಿಸಿದ ಆಸೀಸ್ ಆಲ್ ರೌಂಡರ್ 230 ರನ್ ಚಚ್ಚಿದರು. ಆ ಮೂಲಕ 50 ಓವರ್ ಗಳ ಪಂದ್ಯದಲ್ಲಿ 2 ದ್ವಿಶತಕ ಸಿಡಿಸಿದ ಆಸೀಸ್ ನ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಕ್ವೀನ್ಸ್ ಲ್ಯಾಂಡ್ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಸೌತ್ ಆಸ್ಟ್ರೇಲಿಯಾ 48 ಓವರ್ ಗಳ ಪಂದ್ಯದಲ್ಲಿ 8 ವಿಕೆಟ್ ಕಳೆದುಕೊಂಡು 391 ರನ್ ಗಳಿಸಿತು.

ನಾಯಕ ಟ್ರಾವಿಸ್ ಹೆಡ್ ಕೇವಲ 127 ಎಸೆತಗಳಲ್ಲಿ 28 ಬೌಂಡರಿ ಮತ್ತು 8 ಭರ್ಜರಿ ಸಿಕ್ಸರ್ ಗಳ ನೆರವಿನಿಂದ 230 ರನ್ ಗಳಿಸಿದ ಬೃಹತ್ ಮೊತ್ತಕ್ಕೆ ಕಾರಣರಾದರು.

ಇನ್ನು ಈ ಹಿಂದೆ 2015ರಲ್ಲಿ ವೆಸ್ಟ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟ್ರಾವಿಸ್ 202 ರನ್ ಗಳಿಸಿದ್ದರು. ಇದೀಗ ಎರಡನೇ ಬಾರಿ ದ್ವಿಶತಕ ಸಾಧನೆ ಮಾಡಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd