ರಾಜ್ಯದಲ್ಲಿ ಇಂದು ಕಡಿಮೆ ಕೋವಿಡ್ ಕೇಸ್ ಪತ್ತೆ karnataka saaksha tv
ಬೆಂಗಳೂರು : ಅನ್ ಲಾಕ್ ನಲ್ಲಿ ಏರಿಕೆಯತ್ತ ಸಾಗುತ್ತಿದ್ದ ಕೊರೊನಾ ಸೋಂಕು ಕೇಸ್ ಗಳ ಸಂಖ್ಯೆ ಇದೀಗ ಸಂಪೂರ್ಣ ಇಳಿಕೆ ಕಡೆ ಮುಖಮಾಡಿದೆ.
ಕರ್ನಾಟಕದಲ್ಲಿ ಇವತ್ತು 1285 ಕೋವಿಡ್ ಕೇಸ್ ದಾಖಲಾಗಿದ್ದು, 25 ಜನ ಸಾವನ್ನಪ್ಪಿದ್ದಾರೆ. ಪಾಸಿಟಿವಿಟಿ ರೇಟ್ ಶೇ.0.96 ಗೆ ಇಳಿಕೆಯಾಗಿದೆ.
ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 290 ಪಾಸಿಟಿವ್ ಕೇಸ್ ದಾಖಲಾಗಿ, 5 ಸಾವನ್ನಪ್ಪಿದ್ದಾರೆ.
ಕಳೆದ ಕೆಲ ದಿನಗಳಿಂದ ನಗರದಲ್ಲಿ ನಾನೂರಕ್ಕೂ ಹೆಚ್ಚು ಕೊರೊನಾ ಕೇಸ್ ಗಳು ಪತ್ತೆಯಾಗಿದ್ದವು. ಇವತ್ತು ಕಡಿಮೆ ಕೇಸ್ ಗಳು ಪತ್ತೆಯಾಗಿವೆ.
ರಾಜ್ಯದಲ್ಲಿ ಇಂದು 1,383 ಜನ ಡಿಸ್ಚಾರ್ಜ್ ಆಗಿದ್ದು, ಇನ್ನೂ ಸಕ್ರಿಯ ಪ್ರಕರಣಗಳ ಸಂಖ್ಯೆ 24021ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಕೂಡ 168 ಜನ ಡಿಸ್ಚಾರ್ಜ್ ಆಗಿದ್ದಾರೆ.