ಧೋನಿ ನಾಯಕತ್ವಕ್ಕೆ 14 ವರ್ಷ : ಡರ್ಬನ್ ನಲ್ಲಿ ನಡೆದಿತ್ತು ಅವಿಸ್ಮರಣೀಯ ಪಂದ್ಯ

1 min read
T20 World Cup saaksha tv

ಧೋನಿ ನಾಯಕತ್ವಕ್ಕೆ 14 ವರ್ಷ : ಡರ್ಬನ್ ನಲ್ಲಿ ನಡೆದಿತ್ತು ಅವಿಸ್ಮರಣೀಯ ಪಂದ್ಯ Dhoni saaksha tv

ಸೆಪ್ಟೆಂಬರ್ 14 ಭಾರತೀಯ ಕ್ರಿಕೆಟ್ ಮಾತ್ರವಲ್ಲದೇ ಇಡೀ ಕ್ರಿಕೆಟ್ ಜಗತ್ತು ಎಂದೂ ಮರೆಯದ ದಿನ. ಯಾಕೆಂದ್ರೆ ಇಂದಿಗೆ ಸರಿಯಾಗಿ 14 ವರ್ಷಗಳ ಹಿಂದೆ ದಕ್ಷಿಣ ಆಫ್ರಿಕಾದ ಡರ್ಬನ್ ನ ಕಿಂಗ್ಸ್ ಮೀಡ್ ನಲ್ಲಿ `ಕಿಂಗ್’ ಮೇಡ್ ಆದ ದಿನವಿದು.

ಹೌದು..! ಟೀಂ ಇಂಡಿಯಾ ಪಾಲಿನ ಅತ್ಯುತ್ತಮ ನಾಯಕರಲ್ಲಿ ಒಬ್ಬರಾದ ಎಂಎಸ್ ಧೋನಿಯ ನಾಯಕತ್ವದ ಸವಾರಿ ಆರಂಭವಾಗಿದ್ದು, ಇದೇ ದಿನದಿಂದ. 2007 ಟಿ-20 ವಿಶ್ವಕಪ್ ನಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾವನ್ನು ಧೋನಿ ಮುನ್ನಡೆಸಿದ್ದರು.

Dhoni saaksha tv

ವಿಶ್ವಕಪ್ ನಲ್ಲಿ ಭಾರತ ತಂಡ ಮೊದಲು ಸ್ಕಾಟ್ಲೆಂಡ್ ವಿರುದ್ಧ ಸೆಣಸಾಡಬೇಕಿತ್ತು. ಆದ್ರೆ ಪಂದ್ಯ ರದ್ದಾದ ಹಿನ್ನೆಲೆಯಲ್ಲಿ ಭಾರತವು ಡರ್ಬನ್‍ನ ಕಿಂಗ್ಸ್‍ಮೀಡ್‍ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಿತು. ಈ ಪಂದ್ಯವು ಟೈ ಆಗಿ ಕೊನೆಗೊಂಡಿತ್ತು. ಹೀಗಾಗಿ ಬಾಲೌಟ್ ಆಟಕ್ಕೆ ಉಭಯ ನಾಯಕರು ಒಪ್ಪಿಗೆ ಸೂಚಿಸಿದ್ದರು.

ಈ ರೋಚಕ ಬಾಲೌಟ್ ಹಣಾಹಣಿಯಲ್ಲಿ ಭಾರತದ ಪರವಾಗಿ ಹರ್ಭಜನ್ ಸಿಂಗ್, ವೀರೇಂದ್ರ ಸೆಹ್ವಾಗ್ ಮತ್ತು ರಾಬಿನ್ ಉತ್ತಪ್ಪ ಸ್ಟಂಪ್‍ಗಳ ಮೂಲಕ 3 ವಿಕೆಟ್ ಗಳನ್ನು ಹೊಡೆದುರುಳಿಸಿದ್ದರು. ಆದರೆ, ಪಾಕಿಸ್ತಾನದ ಪರವಾಗಿ ಶಾಹಿದ್ ಅಫ್ರಿದಿ, ಉಮರ್ ಗುಲ್, ಯಾಸಿರ್ ಅರಾಫತ್ ವಿಕೆಟ್ ಉರುಳಿಸಲು ವಿಫಲರಾಗಿ ಅಂತಿಮವಾಗಿ ಸೋಲೊಪ್ಪಿಕೊಂಡರು. ಇದರೊಂದಿಗೆ ಟೂರ್ನಿಯಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡಿ ವಿಶ್ವಕಪ್ ಎತ್ತಿ ಹಿಡಿದಿತ್ತು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd