ಕೊರೋನಾ ವೈರಸ್ ದಾಳಿಗೆ ತುತ್ತಾಗಿ ಸಮುದ್ರದಲ್ಲೇ ದಿಗ್ಬಂಧನಕ್ಕೆ ಒಳಗಾಗಿದ್ದ ಪ್ರವಾಸಿ ಹಡಗಿನಲ್ಲಿ 60ಕ್ಕೂ ಹೊಸ ಪ್ರಕರಣಗಳು ದೃಢಪಟ್ಟಿವೆ ಎಂದು ಜಪಾನ್ ಸರ್ಕಾರ ದೃಡಪಡಿಸಿದೆ. ಇದರೊಂದಿಗೆ ಜಪಾನ್ನಲ್ಲಿ ಸದ್ಯ, ಡೈಮಂಡ್ ಪ್ರಿನ್ಸೆಸ್ ಕ್ರೂಸ್ ಹಡಗಿನಲ್ಲಿನ 130 ಪ್ರಕರಣಗಳು ಸೇರಿದಂತೆ 150 ಕ್ಕೂ ಹೆಚ್ಚು ಜನಕ್ಕೆ ಕೊರೋನವೈರಸ್ ಪತ್ತೆಯಾಗಿದೆ. ಈ ಪೈಕಿ 136 ಮಂದಿ ಭಾರತೀಯರೂ ಕೂಡ ಇದ್ದು ಅಧಿಕೃತವಾಗಿ ಎಷ್ಟು ಜನ ಭಾರತೀಯರಿಗೆ ಸೋಂಕು ತಗುಲಿದೆ ಎಂಬ ಮಾಹಿತಿ ದೊರಕಿಲ್ಲ. ಇತ್ತೀಚೆಗೆ ಹಾಂಕಾಂಗ್ನಲ್ಲಿ ಹಡಗಿನಿಂದ ಇಳಿದ ಪ್ರವಾಸಿಗನಿಗೆ ನ್ಯುಮೋನಿಯಾ ಉಂಟುಮಾಡುವ ವೈರಸ್ ತಗುಲಿರುವುದು ಪತ್ತೆಯಾಗಿತ್ತು. ಕೊರೋನಾ ವೈರಸ್ ನ ಶಂಕೆ ಇದ್ದುದ್ದರಿಂದ ಜಪಾನ್ ಸರ್ಕಾರ ಹಡಗಿಗೆ ಸಮುದ್ರದಲ್ಲೇ ದಿಗ್ಬಂಧನ ವಿಧಿಸಿತ್ತು. ಈ ಸಂಬಂಧ ಹೇಳಿಕೆ ನೀಡಿರೋ ಜಪಾನ್ ವಿದೇಶಾಂಗ ಇಲಾಖೆ, ಕ್ರೂಸ್ ಷಿಪ್ ನಲ್ಲಿ ಪ್ರತ್ಯೇಕ ಕೊರೋನಾ ವೈರಸ್ ವೈದ್ಯಕೀಯ ವಿಭಾಗ ತೆರೆದು, ಚಿಕಿತ್ಸೆ ಕೊಡಲಾಗ್ತಿದೆ. ಈ ವರೆಗೂ ಹಡಗಿನಲ್ಲಿ ಸೋಂಕು ಪೀಡಿತರ ಸಂಖ್ಯೆ 130ಕ್ಕೆ ಏರಿದೆ. ಇನ್ನು ಈ ಐಶಾರಾಮಿ ಕ್ರೂಸ್ ಹಡಗಿನಲ್ಲಿ ಸುಮಾರು ಸಿಬ್ಬಂದಿಗಳೂ, ಪ್ರವಾಸಿಗರು, ಪ್ರಯಾಣಿಕರೂ ಸೇರಿ ಸುಮಾರು 3700 ಜನ ಇದ್ದಾರೆ. ಇನ್ನೂ ಎಷ್ಟು ಜನ ಈ ಮಹಾಮಾರಿ ವೈರಸ್ ಗೆ ಬಲಿಯಾಗಲಿದ್ದಾರೋ ಎಂಬ ಆತಂಕ ಸೃಷ್ಟಿಯಾಗಿದೆ.
ಭಾರತದ ಕೇಂದ್ರ ಭಾಷಾ ಸಂಸ್ಥೆ (CIIL), ಮೈಸೂರು ನೇಮಕಾತಿ 2025
CIIL Recruitment 2025 – ಭಾರತದ ಕೇಂದ್ರ ಭಾಷಾ ಸಂಸ್ಥೆ (CIIL), ಮೈಸೂರು 2025ನೇ ಸಾಲಿಗೆ ವಿವಿಧ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಆಸಕ್ತ ಮತ್ತು...