ಫಿನ್ಲ್ಯಾಂಡ್ ನಲ್ಲಿ 16 ರ ಬಾಲಕಿ ‘ಪಿಎಂ ಫಾರ್ ಎ ಡೇ’
( Finland )
ಫಿನ್ಲ್ಯಾಂಡ್, ಅಕ್ಟೋಬರ್08: ಅನಿಲ್ ಕಪೂರ್ ಅಭಿನಯದ ಬಾಲಿವುಡ್ ಚಿತ್ರ ‘ನಾಯಕ್’ ವೀಕ್ಷಿಸಿದವರಿಗೆ ‘ಒಂದು ದಿನದ ಸಿಎಂ’ ಕಲ್ಪನೆ ಹೇಗಿರುತ್ತದೆ ಎಂದು ಚೆನ್ನಾಗಿ ತಿಳಿದಿರುತ್ತದೆ.( Finland )
ಚಿತ್ರದಲ್ಲಿ, ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ನಟಿಸಿರುವ ಅಮ್ರಿಶ್ ಪುರಿ, ತಮ್ಮ ಅಧಿಕಾರದ ಸ್ಥಾನವನ್ನು ಅನಿಲ್ ಕಪೂರ್ಗೆ 24 ಗಂಟೆಗಳ ಕಾಲ ಸ್ವಯಂಪ್ರೇರಣೆಯಿಂದ ಬಿಟ್ಟುಕೊಡುತ್ತಾರೆ.
ಅನಿಲ್ ಕಪೂರ್ ಮುಖ್ಯ ಮಂತ್ರಿಯಾದ ಬಳಿಕ ಮುಂಬೈ ನಗರದಲ್ಲಿ ಕೆಲವು ತ್ವರಿತ ಮತ್ತು ಸಕಾರಾತ್ಮಕ ಬದಲಾವಣೆಗಳನ್ನು ಮಾಡುತ್ತಾರೆ.
ಆದರೆ ಇಂತಹ ವಿಷಯಗಳನ್ನು ಸಿನಿಮಾದಲ್ಲಿ ನೋಡಿ ಆನಂದಿಸಬಹುದೇ ಹೊರತು ನಿಜ ಜೀವನದಲ್ಲಿ ಸಾಧ್ಯವಿಲ್ಲ. ಏಕೆಂದರೆ ವಾಸ್ತವವು ವಿಭಿನ್ನವಾಗಿರುತ್ತದೆ.
ಆದರೆ ನಮ್ಮೆಲ್ಲರ ಕಲ್ಪನೆಗೂ ಮೀರಿ ಇಂತಹ ಘಟನೆಗೆ ಫಿನ್ಲ್ಯಾಂಡ್ ಸಾಕ್ಷಿಯಾಗಿದೆ.
ದೇಶದಲ್ಲಿ ಬಾಲಕಿಯರ ಹಕ್ಕುಗಳನ್ನು ಉತ್ತೇಜಿಸುವ ಅಭಿಯಾನದ ಸಲುವಾಗಿ ಫಿನ್ಲ್ಯಾಂಡ್ ಪ್ರಧಾನ ಮಂತ್ರಿ 16 ವರ್ಷದ ಬಾಲಕಿಗೆ ತಮ್ಮ ಅಧಿಕಾರವನ್ನು ಹಸ್ತಾಂತರಿಸಿದರು.
ಬ್ಯಾಂಕ್ ಖಾತೆಯಿಂದ ಸದ್ದಿಲ್ಲದೆ ಹಣ ಕದಿಯುವ 34 ಮಾಲ್ವೇರ್ ಸೋಂಕಿತ ಆ್ಯಪ್ ಗಳ ಪಟ್ಟಿ ಇಲ್ಲಿದೆ
ಅಂದರೆ ಫಿನ್ಲ್ಯಾಂಡ್ ಪ್ರಧಾನ ಮಂತ್ರಿ ಮರಿನ್ 16 ವರ್ಷದ ಆವಾ ಮುರ್ಟೊ ಅವರನ್ನು ಒಂದು ದಿನಕ್ಕೆ ದೇಶದ ಪ್ರಧಾನ ಮಂತ್ರಿಯನ್ನಾಗಿ ಮಾಡಿದರು.
ಒಂದು ದಿನದ ದೇಶದ ಪ್ರಧಾನ ಮಂತ್ರಿಯಾದ ದಕ್ಷಿಣ ಫಿನ್ಲ್ಯಾಂಡ್ನ ವಾಸ್ಕಿಯ ಆವಾ ಮುರ್ಟೊ ನ್ಯಾಯದ ಕುಲಪತಿಯೊಂದಿಗಿನ ಸಭೆಯ ನಂತರ ಮಾಧ್ಯಮಗಳಿಗೆ ಇದು ರೋಮಾಂಚಕಾರಿ ದಿನವೆಂದು ವರ್ಣಿಸಿದರು.
ಆವಾ ಹವಾಮಾನ ಬದಲಾವಣೆಗಳು ಮತ್ತು ಮಾನವ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಕ್ರಿಯ ಪ್ರಚಾರಕರಾಗಿದ್ದಾರೆ. ಬುಧವಾರ ಅವರು ಅಭಿವೃದ್ಧಿ ಮತ್ತು ವಿದೇಶಿ ವ್ಯಾಪಾರಕ್ಕಾಗಿ ಹಲವಾರು ಸಂಸದರು ಮತ್ತು ಸಚಿವರೊಂದಿಗೆ ಮಾತನಾಡಿದರು.
ಅವರು ಹೆಣ್ಣು ಮಕ್ಕಳು ಎಷ್ಟು ಪ್ರಾಮುಖ್ಯತೆ ಹೊಂದಿದ್ದಾರೆ ಮತ್ತು ಹುಡುಗರಂತೆ ತಂತ್ರಜ್ಞಾನದಲ್ಲಿ ಹೇಗೆ ಉತ್ತಮರಾಗಿದ್ದಾರೆ ಎಂಬುದನ್ನು ಹೆಚ್ಚು ಅರಿತುಕೊಳ್ಳಬೇಕು.
ಯುವ ಜನಾಂಗ ವಯಸ್ಕರಿಗೆ ಹೆಚ್ಚು ನವೀನತೆಯನ್ನು ಕಲಿಸಬಹುದು ಮತ್ತು ಭವಿಷ್ಯದ ಬಗ್ಗೆ ಹೆಚ್ಚು ಯೋಚಿಸಬಹುದು ಎಂದು ಅವರು ತಿಳಿಸಿದರು.
2021 ರಲ್ಲಿ ಈ ಸ್ಮಾರ್ಟ್ಫೋನ್ಗಳಲ್ಲಿ ವಾಟ್ಸಾಪ್ ಕಾರ್ಯನಿರ್ವಹಿಸುವುದಿಲ್ಲ
ಮಕ್ಕಳ ಹಕ್ಕುಗಳ ಚಾರಿಟಿ ಪ್ಲಾನ್ ಇಂಟರ್ನ್ಯಾಷನಲ್ನ ಜಾಗತಿಕ ‘ಗರ್ಲ್ಸ್ ಟೇಕೋವರ್’ ಅಭಿಯಾನದ ಒಂದು ಭಾಗ ‘ಪಿಎಂ ಫಾರ್ ಎ ಡೇ’ ನ ಸಲುವಾಗಿ ಈ ಕಾರ್ಯಕ್ರಮ ನಡೆಯಿತು.
ತಾಂತ್ರಿಕ ಕೈಗಾರಿಕೆಗಳಲ್ಲಿ ಬಾಲಕಿಯರ ಡಿಜಿಟಲ್ ಕೌಶಲ್ಯಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಮಹಿಳೆಯರ ಆನ್ಲೈನ್ ಕಿರುಕುಳದ ಸಮಸ್ಯೆಯನ್ನು ಎತ್ತಿ ತೋರಿಸುವುದು ಈ ಸಂಸ್ಥೆಯ ಗುರಿ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ