ಹಾಸನದಲ್ಲಿ ಕಳೆದ 7 ದಿನಗಳಲ್ಲಿ 1630 ಕೊರೊನಾ ಕೇಸ್ ಪತ್ತೆ
ಹಾಸನ : ಜಿಲ್ಲೆಯಲ್ಲಿ ಕಳೆದ ಏಳು ದಿನದಲ್ಲಿ 1630 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳೆದ ಏಳು ದಿನದಲ್ಲಿ 1630 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಜಿಲ್ಲೆಯಲ್ಲಿ ಕಳೆದ ಏಳು ದಿನಗಳಲ್ಲಿ ಶೇ.5.45 ಪಾಸಿಟಿವಿಟಿ ದರ ಇದೆ.
ಕೊರೊನ ಹೆಚ್ಚುತ್ತಿರುವ ಜಿಲ್ಲೆಗಳಲ್ಲಿ ಹಾಸನ ಜಿಲ್ಲೆ ರಾಜ್ಯದಲ್ಲಿ 8 ಸ್ಥಾನದಲ್ಲಿದೆ. ಶೇ.5 ಕ್ಕಿಂತ ಪಾಸಿಟಿವಿಟಿ ದರ ಇದ್ದರೆ ಮಾತ್ರ ಕ್ರಮ ಕೈಗೊಳ್ಳಿ ಎಂದಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 3070 ಶಾಲೆಗಳಿವೆ, ಅದರಲ್ಲಿ 22 ಶಾಲೆಗಳಲ್ಲಿ ಕೊರೊನ ಪಾಸಿಟಿವ್ ಬಂದಿದೆ.
ಜಿಲ್ಲೆಯಲ್ಲಿ 173 ಕಾಲೇಜುಗಳಿದ್ದು, 4 ಕಾಲೇಜಿನ ವಿದ್ಯಾರ್ಥಿಗಳಲ್ಲಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಒಂದು ಸರ್ಕಾರಿ ಕಾಲೇಜಿನಲ್ಲಿ 35 ಪ್ರಕರಣಗಳು ವರದಿಯಾಗಿದ್ದು, ಆ ಕಾಲೇಜಿಗೆ ಐದು ದಿನಗಳ ಕಾಲ ರಜೆ ನೀಡಲಾಗಿದೆ.
ಶಿಕ್ಷಣ ಸಚಿವರು ಇಂದು ವಿಡಿಯೋ ಕಾನ್ಫರೆನ್ಸ್ ಮಾಡಿದ್ದಾರೆ. 15 ದಿನಕ್ಕೆ ಒಂದು ಬಾರಿ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ರ್ಯಾಂಡಮ್ ಟೆಸ್ಟ್ ಮಾಡಲು ತಿಳಿಸಿದ್ದಾರೆ.
ಅತ್ಯಂತ ಜರುರಾದ ಸಂದರ್ಭದಲ್ಲಿ ಮಾತ್ರ ಶಾಲಾ-ಕಾಲೇಜಿಗೆ ರಜೆ ನೀಡಲು ಸಚಿವರು ಸೂಚಿಸಿದ್ದಾರೆ. ಸದ್ಯಕ್ಕೆ ಯಾವುದೇ ಶಾಲಾ-ಕಾಲೇಜಗಳನ್ನು ಬಂದ್ ಮಾಡಲ್ಲ.
ಹೆಚ್ಚು ಪಾಸಿಟಿವ್ ಇರುವ ಸರ್ಕಾರಿ-ಖಾಸಗಿ ಇಂಜಿನಿಯರಿಂಗ್ ಕಾಲೇಜಿಗೆ ಆಯಾ ಪ್ರಾಂಶುಪಾಲರು ರಜೆ ನೀಡಿದ್ದಾರೆ ಎಂದು ತಿಳಿಸಿದರು.