ನವದೆಹಲಿ: ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ತಂಡದ ಅಧಿಕಾರಿಗಳು ನವದೆಹಲಿಯ ಐಜಿಐ ವಿಮಾನ ನಿಲ್ದಾಣದಲ್ಲಿ (Airport) ಕೊಕೇನ್ (Cocaine) ಹೊಂದಿದ್ದ ಕೀನ್ಯಾ (Kenya) ಪ್ರಜೆಯನ್ನು ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೀನ್ಯಾ ಪ್ರಜೆ ನೈರೋಬಿಯಾದಿಂದ ಆಗಮಿಸಿದ್ದು, ಡಿಆರ್‌ಐ ಅಧಿಕಾರಿಗಳು ಅನುಮಾನಗೊಂಡು ಆತನ ಲಗೇಜ್ ಪರಿಶೀಲಿಸಿದಾಗ ಅಂದಾಜು 17 ಕೋಟಿ ರೂ. ಮೌಲ್ಯದ ಸುಮಾರು 1,698 ಗ್ರಾಂ ಕೊಕೇನ್ ಪತ್ತೆಯಾಗಿದೆ.
ಆರೋಪಿಯು ಮುಂಬೈಗೆ (Mumbai) ಪ್ರಯಾಣಿಸಲು ಟಿಕೆಟ್ ಹೊಂದಿದ್ದು, ಮುಂಬೈನಲ್ಲಿ ಈ ಕೊಕೇನ್ ಅನ್ನು ವಿತರಣೆ ಮಾಡಲು ಪ್ಲಾನ್ ಮಾಡಿದ್ದ ಎನ್ನಲಾಗಿದೆ. ಕೊಕೇನ್ ಅನ್ನು ಸ್ವೀಕರಿಸಬೇಕಿದ್ದ ಮಹಿಳೆ ಕೂಡಾ ಕೀನ್ಯಾ ದೇಶದ ಪ್ರಜೆಯಾಗಿದ್ದು, ಆಕೆಯನ್ನು ಮುಂಬೈನ ವಸಾಯಿ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.