ನೇತ್ರಾವತಿ ನದಿ ಸೇರಿದಂತೆ ಕರ್ನಾಟಕದ 17 ನದಿಗಳು ಕಲುಷಿತ – ಕೇಂದ್ರ ಜಲಶಕ್ತಿ ಸಚಿವಾಲಯ
ನೇತ್ರಾವತಿ ನದಿ ಸೇರಿದಂತೆ ಕರ್ನಾಟಕದ 17 ನದಿಗಳು ಕಲುಷಿತಗೊಂಡಿವೆ ಎಂದು ಕೇಂದ್ರ ಜಲಶಕ್ತಿ ಸಚಿವಾಲಯದ ವರದಿಯೊಂದು ಬಹಿರಂಗಪಡಿಸಿದೆ .
ಆಯಾ ನದಿಗಳ ಜಲಾನಯನ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕೈಗಾರಿಕೆಗಳ ತ್ಯಾಜ್ಯವನ್ನು ಹೊರತುಪಡಿಸಿ, ನಗರಗಳು ಮತ್ತು ಪಟ್ಟಣಗಳಲ್ಲಿನ ಒಳಚರಂಡಿಯಿಂದ ಹೊರಸೂಸುವ ತ್ಯಾಜ್ಯಗಳು ನದಿ ಕಲುಷಿತಗೊಳ್ಳಲು ಕಾರಣವಾಗಿದೆ.
ಆಮ್ಲಜನಕದ ಜೀವರಾಸಾಯನಿಕ ಬೇಡಿಕೆಯ ಮೇಲ್ವಿಚಾರಣೆಯ ಮೂಲಕ ಪಡೆದ ಫಲಿತಾಂಶದ ಪ್ರಕಾರ, ದೇಶದ 351 ನದಿಗಳಲ್ಲಿ 323 ಕಲುಷಿತವಾಗಿದೆ ಎಂದು ಜಲಶಕ್ತಿ ಸಚಿವಾಲಯದ ರಾಜ್ಯ ಸಚಿವ ರತನ್ ಲಾಲ್ ಕಟಾರಿಯಾ ಅವರು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ಯೂನಿಯನ್ ಮಾಲಿನ್ಯ ನಿಯಂತ್ರಣ ಮಂಡಳಿಯ ಮೇಲ್ವಿಚಾರಣಾ ಕೇಂದ್ರವು ಆಯಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳ ಸಹಯೋಗದೊಂದಿಗೆ ವಿವಿಧ ನದಿಗಳು ಮತ್ತು ಇತರ ನೀರಿನ ಮೂಲಗಳ ನೀರಿನ ಗುಣಮಟ್ಟವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಕೃಷಿ ತ್ಯಾಜ್ಯ, ತೆರೆದ ಮಲವಿಸರ್ಜನೆ, ಪಟ್ಟಣಗಳು ಮತ್ತು ನಗರಗಳಿಂದ ಬರುವ ಘನತ್ಯಾಜ್ಯ ಇತ್ಯಾದಿಗಳು ನದಿ ಮಾಲಿನ್ಯದ ಮೂಲಗಳಾಗಿವೆ ಎಂದು ಸಚಿವರು ಸ್ಪಷ್ಟಪಡಿಸಿದರು.
ದೇಶದ ನಗರ ಪ್ರದೇಶಗಳು 61,948 ಎಂಎಲ್‌ಡಿ ಭೂಗತ ಒಳಚರಂಡಿ ನೀರನ್ನು ಉತ್ಪಾದಿಸುತ್ತವೆ. ಅದರಲ್ಲಿ ಕೇವಲ 23,277 ಎಮ್‌ಎಲ್‌ಡಿ ನೀರನ್ನು ಸಂಸ್ಕರಿಸಿ ನಂತರ ನದಿಗಳು ಮತ್ತು ತೊರೆಗಳಿಗೆ ತಿರುಗಿಸಲಾಗುತ್ತದೆ. ಕರ್ನಾಟಕದ ನಾಲ್ಕು ಕೈಗಾರಿಕೆಗಳು ಹೆಚ್ಚಿನ ಮಾಲಿನ್ಯಕಾರಕವಾಗಿದ್ದು, ಇವೆಲ್ಲವೂ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಗಳನ್ನು ಅನುಸರಿಸುತ್ತಿವೆ ಎಂದರು.
ಸಕ್ಕರೆ ಕಾರ್ಖಾನೆಗಳು ಹೊರಸೂಸುವ ತ್ಯಾಜ್ಯವನ್ನು ಪ್ರತಿದಿನವೂ ಅಳೆಯಲು ಮೇಲ್ವಿಚಾರಣಾ ವ್ಯವಸ್ಥೆಯನ್ನು ಸ್ಥಾಪಿಸಲು ಮಂಡಳಿ ಪ್ರಯತ್ನಿಸಿದೆ ಎಂದು ಸಚಿವರು ಹೇಳಿದರು.
ಕಲುಷಿತಗೊಂಡಿರುವ ಕರ್ನಾಟಕ ನದಿಗಳು:
ಅರ್ಕಾವತಿ, ಲಕ್ಷ್ಮಣ ತೀರ್ಥ, ಮಲಪ್ರಭ, ತುಂಗಭದ್ರಾ, ಕಾವೇರಿ, ಭದ್ರಾ, ತುಂಗಾ, ಕಬಿನಿ, ಕಾಗಿನಾ, ಅಸಂಗಿ, ಕಾಳಿ, ಕೃಷ್ಣ, ಶಿಮ್ಷಾ, ಭೀಮ, ಕುಮಾರಧಾರ, ನೇತ್ರಾವತಿ ಮತ್ತು ಯಗಚಿ ನದಿಗಳು ಕಲುಷಿತಗೊಂಡಿರುವ ಕರ್ನಾಟಕದ 17 ನದಿಗಳು.
ಗೋಡಂಬಿ ಹಾಲಿನ ಆರೋಗ್ಯ ಪ್ರಯೋಜನಗಳು ಮತ್ತು ತಯಾರಿಸುವ ವಿಧಾನ#healthtips #cashew #health #milk https://t.co/ScQrX4nnSF
— Saaksha TV (@SaakshaTv) March 22, 2021
ಹೈದರಾಬಾದಿ ಮಟನ್ ದಮ್ ಬಿರಿಯಾನಿ#recipes #muttonbiryani #food https://t.co/rdecTf9drv
— Saaksha TV (@SaakshaTv) March 22, 2021
ಎಲ್‌ಟಿಸಿ ನಗದು ಚೀಟಿ ಯೋಜನೆಯನ್ನು ಹೇಗೆ ಪಡೆಯುವುದು ? ಇಲ್ಲಿದೆ ಮಾಹಿತಿ https://t.co/QYkGNiqfNC
— Saaksha TV (@SaakshaTv) March 22, 2021
ಆಲಿಯಾ ಯಾವತ್ತೂ ಮದುವೆಯಾಗಬಾರದು ಎಂದು ಬೆದರಿಕೆ ಹಾಕಿದ ಮಹೇಶ್ ಭಟ್ https://t.co/N0tImKAtRF
— Saaksha TV (@SaakshaTv) March 21, 2021