ಅಪ್ಪ, ಅಮ್ಮ, ಅಜ್ಜಿ, ತಂಗಿಯನ್ನು ಕೊಂದು – ವಾಟರ್ ಟ್ಯಾಂಕ್ ನಲ್ಲಿ ಮುಚ್ಚಿಟ್ಟಿದ್ದ – 4 ತಿಂಗಳ ನಂತರ ಸಿಕ್ಕಿಬಿದ್ದ
ಪಶ್ಚಿಮ ಬಂಗಾಳ : 19 ವರ್ಷದ ಯುವಕನೋರ್ವ ತನ್ನ ಸ್ವಂತ ಅಪ್ಪ, ಅಮ್ಮ, ಅಜ್ಜಿ , ತಂಗಿಯನ್ನ ಕೊಲೆ ಮಾಡಿ ವಾಟರ್ ಟ್ಯಾಂಕ್ ನಲ್ಲಿ ಮುಚ್ಚಿಟ್ಟಿದ್ದ ಬೆಚ್ಚಿಬೀಳಿಸುವಂತಹ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಬೆಳಕಿಗೆ ಬಂದಿದೆ. ಘಟನೆ ನಡೆದು ಸುಮಾರು 4 ತಿಂಗಳ ನಂತರ ಬೆಳಕಿಗೆ ಬಂದಿದ್ದು, ಆರೋಪಿಯನ್ನ ಇದೀಗ ಪೊಲೀಸರು ಬಂಧಿಸಿದ್ದಾತೆ.
ಕಲಿಯಾಚಕ್ ಗ್ರಾಮದ ಆಸಿಫ್ ಬಂಧಿತ ಆರೋಪಿಯಾಗಿದ್ದಾನೆ.. ಈತ ತನ್ನ ತಂದೆ ಜವಾದ್ ಅಲಿ, ತಾಯಿ ಇರಾ ಬೀಬಿ, ತಂಗಿ ಆರಿಫಾ ಹಾಗೂ ಅಜ್ಜಿ ಅಲೆಕ್ಜಾನ್ರನ್ನು ಕೊಲೆ ಮಾಡಿದ್ದಾನೆ. ನಂತರ ಅವರ ದೇಹಗಳನ್ನು ವಾಟರ್ ಟ್ಯಾಂಕ್ನಲ್ಲಿ ಮುಚ್ಚಿಟ್ಟಿದ್ದಾನೆ. ಕಳೆದ ಫೆಬ್ರವರಿ ತಿಂಗಳಲ್ಲೇ ಈ ಘಟನೆ ನಡೆದಿದೆ. ಆಸಿಫ್ನ ಅಣ್ಣ ತನ್ನ ಕುಟುಂಬದ ನಾಲ್ವರು ಸದಸ್ಯರು ಕಾಣೆಯಾಗಿದ್ದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ತಮ್ಮನ ಮೇಲೆ ಅನುಮಾನ ಇರುವುದಾಗಿಯೂ ಹೇಳಿದ್ದಾನೆ.
ಆಸೀಫ್ ಚಲನವಲನಮೇಲೆ ನಿಗಾ ಇಟ್ಟಿದ್ದ ಪೊಲೀಸರು ಆತನ ಮೇಲೆ ಅನುಮಾನ ಬಂದು, ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತ ಕೊಲೆಯ ವಿಚಾರ ಬಾಯಿ ಬಿಟ್ಟಿದ್ದಾನೆ. ಶವಗಳನ್ನು ಬಚ್ಚಿಟ್ಟಿರುವ ಜಾಗ ತೋರಿಸಿದ್ದಾನೆ. ಆಸಿಫ್ ಜತೆ ಅನೇಕರು ಡಾರ್ಕ್ ವೆಬ್ನಲ್ಲಿ ಸಕ್ರಿಯರಿದ್ದು, ಕೊಲೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಹತ್ಯೆ ಪ್ರಕರಣದಲ್ಲಿ ತಮ್ಮನ ಹತ್ಯೆ ಪ್ರಯತ್ನದಿಂದ ಪಾರಾಗಿದ್ದ 21 ವರ್ಷದ ಆರೀಫ್ ಮೊಹಮದ್ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಮುಂದುವರಿಸಿದ್ದರು. ತಂದೆ-ತಾಯಿ, ಅಜ್ಜಿ ಹಾಗೂ ತಂಗಿಯನ್ನು ನೀರಿನಲ್ಲಿ ಮುಳುಗಿಸಿ ಕೊಂದಿದ್ದ 19 ವರ್ಷದ ಮಗ ಆಸೀಫ್ ಮೊಹಮದ್ ಅಣ್ಣನನ್ನು ಉಸಿರುಗಟ್ಟಿಸಿ ಕೊಲ್ಲಲು ಯತ್ನಿಸಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.








