KGF Chapter 2 : ಕೆಜಿಎಫ್ – 2 ಎಡಿಟರ್ 19ರ ಯುವಕ
ಕೆಜಿಎಫ್ ಚಾಪ್ಟರ್ 2 ಸಿನಿಮಾ ಗುರುವಾರ ವಿಶ್ವದಾದ್ಯಂತ ಭರ್ಜರಿಯಾಗಿ ರಿಲೀಸ್ ಆಗಿದೆ. ರಾಕಿಂಗ್ ಸ್ಟಾರ್ ಯಶ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ತುಫಾನ್ ಎಬ್ಬಿಸಿದೆ.
ಔಟ್ ಅಂಡ್ ಔಟ್ ಮಾಸ್ ಆಕ್ಷನ್ ಎಂಟರ್ ಟೈನರ್ ಆಗಿ ರಿಲೀಸ್ ಆದ ಎಲ್ಲಾ ಭಾಷೆಗಳಲ್ಲಿಯೂ ಅದ್ಭುತ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಇದು ಹೀಗಿದ್ದರೇ ಈ ಸಿನಿಮಾದ ಬಗ್ಗೆ ಇಂಟ್ರಸ್ಟಿಂಗ್ ನ್ಯೂಸ್ ವೊಂದು ಸಿನಿಮಾ ಇಂಡಸ್ಟ್ರೀಯಲ್ಲಿ ಗಿರಕಿ ಹೊಡೆಯುತ್ತಿದೆ.
ಕೆಜಿಎಫ್ ಸಿನಿಮಾ ನೋಡಿದ ಪ್ರತಿಯೊಬ್ಬರು ಸಿನಿಮಾದ ಮೇಕಿಂಗ್, ಸಂಗೀತ, ಕ್ಯಾಮೆರಾ ಸೇರಿದಂತೆ ಎಡಿಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಮುಖ್ಯವಾಗಿ ಸಿನಿಮಾ ಎಡಿಟಿಂಗ್ ಬೇರೆ ರೇಂಜ್ ನಲ್ಲಿದೆ ಅಂತಾ ಎಲ್ಲರೂ ಹೇಳುತ್ತಿದ್ದಾರೆ. ಅಂದಹಾಗೆ ಈ ಸಿನಿಮಾದ ಎಡಿಟರ್ ಆಗಿ ಕೆಲಸ ಮಾಡಿದ್ದು ಕೇವಲ 19 ವರ್ಷದ ಯುವಕ.
ಹೌದು..! ಉಜ್ವಲ್ ಕುಲಕರ್ಣಿ ಎಂಬ ಯುವಕ ಈ ಸಿನಿಮಾದ ಎಡಿಟಿಂಗ್ ಮಾಡಿದ್ದಾರೆ. ಕುಲಕರ್ಣಿ ಶಾರ್ಟ್ ಫಿಲಂ, ಫ್ಯಾನ್ ಎಡಿಟ್ಸ್ ಮಾಡುತ್ತಿದ್ದರು. ಆದರೇ ಕೆಜಿಎಫ್ ಸಿನಿಮಾಗೆ ಆತ ಮಾಡಿದ ಕೆಲವು ಫ್ಯಾನ್ ಎಡಿಟ್ಸ್ ಪ್ರಶಾಂತ್ ನೀಲ್ ಅವರಿಗೆ ತುಂಬಾ ಇಷ್ಟವಾಗಿದೆ.
ಇದರಿಂದ ಕೆಜಿಎಫ್ ಚಾಪ್ಟರ್ 2 ಸಿನಿಮಾಗೆ ಎಡಿಟಿಂಗ್ ಜವಾಬ್ದಾರಿಯನ್ನು ಉಜ್ವಲ್ ಗೆ ನೀಡಿದ್ದಾರೆ. ಅದಕ್ಕೆ ತಕ್ಕಂತೆ ಉಜ್ವಲ್ ಕೂಡ ಹಾಲಿವುಡ್ ರೇಂಜ್ ನಲ್ಲಿ ತನ್ನ ಕೆಲಸವನ್ನು ಮಾಡಿ ತೋರಿಸಿದ್ದಾರೆ.
ಸಿನಿಮಾ ಸಕ್ಸಸ್ ನಲ್ಲಿ ಉಜ್ವಲ್ ಪಾತ್ರ ಕೂಡ ಪ್ರಮುಖವಾಗಿದೆ. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಉಜ್ವಲ್ ಹೆಸರು ಸದ್ದು ಮಾಡುತ್ತಿದೆ. 19-year-old-ujwal-kulkarni-edited-the-pan-india-kgf-2









