ನವದೆಹಲಿ : ಭಾರತದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 19,459 ಸೋಂಕಿತರು ಪತ್ತೆಯಾಗಿದ್ದು, 380 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 5,48,318ಕ್ಕೆ ಹಾಗೂ ಮೃತರ ಸಂಖ್ಯೆ 16,475ಕ್ಕೆ ಏರಿಕೆಯಾಗಿದೆ.
ಇನ್ನೊಂದೆಡೆ ಚೇತರಿಕೆಯ ಪ್ರಮಾಣ ಕೂಡ ಶೇ.58.67ರಷ್ಟು ಇರುವುದು ತುಸು ಸಮಾಧಾನಕರ ವಿಷಯವಾಗಿದೆ.
5,48,318 ಸೋಂಕಿತರ ಪೈಕಿ ಶೇ.58.67 ರಷ್ಟು ಅಂದರೆ 3,21,723 ಮಂದಿ ಕೋವಿಡ್ ನಿಂದ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ. ಉಳಿದಂತೆ 2,10,120 ಕೇಸ್ ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.