ADVERTISEMENT
Tuesday, September 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

1997 ಮಾಡೆಲ್… ಇಂಜಿನ್ ನಂ- 17…ಸರ್ವಿಸ್ ಅಥವಾ ರೀಬೋರ್ ಆಗ್ಲೇಬೇಕಿದೆ..! ಕುಸಿದೋಗಿದೆ ಬ್ರ್ಯಾಂಡ್ ವ್ಯಾಲ್ಯೂ.. ಹುಷಾರು..!

1997 model... Engine number 17... It definitely needs servicing or a re-bore

Shwetha by Shwetha
May 20, 2025
in Newsbeat, Sports, ಕ್ರಿಕೆಟ್, ಕ್ರೀಡೆ
Share on FacebookShare on TwitterShare on WhatsappShare on Telegram

1997 ಮಾಡೆಲ್… ಇಂಜಿನ್ ನಂ- 17…ಸರ್ವಿಸ್ ಅಥವಾ ರೀಬೋರ್ ಆಗ್ಲೇಬೇಕಿದೆ..! ಕುಸಿದೋಗಿದೆ ಬ್ರ್ಯಾಂಡ್ ವ್ಯಾಲ್ಯೂ.. ಹುಷಾರು..!

ಕೋಟಿ ಕೋಟಿ ಲೆಕ್ಕದಲ್ಲಿ ನಿನಗೆ ದುಡ್ಡು ಕೊಡುತ್ತಿದ್ದೇನೆ..! ನಿನ್ನ ಮೇಲೆ ವಿಶ್ವಾಸವಿಟ್ಟು ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದ್ದೇನೆ..! ನೀನೊಬ್ಬ ಸೂಪರ್ ಪ್ಲೇಯರ್ ಅಂತ ನಂಬಿ ಬಂಡವಾಳ ಹಾಕುತ್ತಿದೇನೆ..! ಒಬ್ಬ ಲೀಡರ್ ಆಗಿ, ಪ್ಲೇಯರ್ ಆಗಿ ನೀನು ನನಗೆ ಏನು ಕೊಟ್ಟೆ..? 27 ಕೋಟಿ ಕೊಟ್ಟು ನೀನು ಗಳಿಸಿದ್ದು 12 ಮ್ಯಾಚ್‍ಗಳಲ್ಲಿ ಬರೀ 128 ರನ್. ಆಯ್ತು ರನ್ ಗಳಿಸಿಲ್ಲ ಓಕೆ.. ಕೈಯಾರೆ ನಿನ್ನ ವಿಕೆಟ್‍ಗಳನ್ನು ಕೈಚೆಲ್ಲಿಕೊಂಡಿದ್ದು ನಿನಗೆ ಸರಿ ಅನ್ನಿಸುತ್ತಿದೆಯಾ..? ಕಳಪೆ ಫಾರ್ಮ್..ಬ್ಯಾಡ್ ಲಕ್.. ಒಂದು ಕೆಟ್ಟ ಸೀಸನ್ ಎಂದು ಅಂದುಕೊಳ್ಳೋಣ.. ಆದ್ರೆ ನಿನಗೆ ಅಷ್ಟು ದುಡ್ಡು ಕೊಟ್ಟು ನಾಯಕತ್ವದ ಪಟ್ಟವನ್ನು ಕೊಟ್ಟು ಬಿಟ್ಟೆ ಅಲ್ವಾ..? ನೀನು ಏನು ಮಾಡಿದೆ..? ಎಷ್ಟು ಮ್ಯಾಚ್ ಗೆಲ್ಲಿಸಿಕೊಟ್ಟೆ.. ? ತಂಡದಿಂದ ಸಂಘಟಿತ ಆಟವನ್ನು ಯಾಕೆ ದಕ್ಕಿಸಿಕೊಡಲಿಲ್ಲ..? ಟೀಮ್ ಯಾವುದರಲ್ಲಿ ಕಮ್ಮಿ ಇತ್ತು ಹೇಳು..? ಎಂಥಾ ಟೀಮ್..? ಸಿಡಿಲಬ್ಬರದ ಬ್ಯಾಟರ್‍ಗಳು, ಮ್ಯಾಚ್ ವಿನ್ನರ್‍ಗಳು, ಅನುಭವಿ ಬೌಲರ್‍ಗಳು..ಆದ್ರೂ ಯಾಕೆ ತಂಡದಿಂದ ಅತ್ಯುತ್ತಮ ಪ್ರದರ್ಶನ ಬರಲಿಲ್ಲ. ?.ನಿನ್ನನ್ನು ನಂಬಿದ್ದಕ್ಕೆ ನೀನೇನು ನನಗೆ ಕೊಟ್ಟೆ..? ಉತ್ತರ ಕೊಡು ರಿಷಬ್ ಪಂತ್.. ಎಂದು ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೋಯೆಂಕಾ ಕೇಳಿಯೇ ಕೇಳಿರುತ್ತಾರೆ.
saakshatv.com
ಆದ್ರೆ ಲಕ್ನೋ ಸೂಪರ್ ಜೈಂಟ್ಸ್ ತಂಡ ಐಪಿಎಲ್‍ನಲ್ಲೂ ಕೆಟ್ಟ ಪ್ರದರ್ಶನ ನೀಡಲು ಮುಖ್ಯ ಕಾರಣ ಆಟಗಾರರು ಅಲ್ಲ.. ಬದಲಾಗಿ ಮ್ಯಾನೇಜ್‍ಮೆಂಟ್. ಅದರಲ್ಲೂ ಮಾಲೀಕ ಸಂಜೀವ್ ಗೋಯೆಂಕಾ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ…!
ದುಡ್ಡು ಹಾಕಿದ ತಕ್ಷಣ ಎಲ್ಲಾ ಪಂದ್ಯಗಳನ್ನು ಗೆಲ್ಲಲು ಸಾಧ್ಯವಿಲ್ಲ.. ದುಡ್ಡು ಕೊಟ್ಟಿದ್ದೇನೆ ಅಂತ ಆಟಗಾರರ ಮೇಲೆ ಹೆಚ್ಚು ನೀರಿಕ್ಷೆ ಕೂಡ ಮಾಡೋಕೆ ಆಗಲ್ಲ. ಆಯಾ ದಿನ ಹೇಗೆ ಇರುತ್ತೆ ಎಂಬುದು ಯಾರಿಗೂ ಗೊತ್ತಿಲ್ಲ.. ಕೆಟ್ಟ ಫಾರ್ಮ್ ಕೆಲವೊಂದು ಸಲ ಉತ್ತುಂಗದಲ್ಲಿದ್ದ ಆಟಗಾರರನ್ನು ಪಾತಾಳಕ್ಕೆ ಬೀಳಿಸುತ್ತದೆ. ಪ್ರತಿ ಪಂದ್ಯದಲ್ಲಿ ನೀನು ಆಡಲೇಬೇಕು ಎಂದು ಅವರ ತಲೆ ಮೇಲೆ ಗನ್ ಇಟ್ಟು ಆಡಿಸಿದ್ರೆ ಖಂಡಿತವಾಗಿಯೂ ಉತ್ತಮ ಫಲಿತಾಂಶ ಬರಲ್ಲ. ಹಾಗಂತ ಎಲ್‍ಎಸ್‍ಜಿಯ ಬೇರೆ ಬ್ಯಾಟರ್‍ಗಳು ಚೆನ್ನಾಗಿ ಆಡ್ತಾರೆ.. ರಿಷಬ್ ಪಂತ್ ಯಾಕೆ ಆಡ್ತಿಲ್ಲ ಎಂಬ ಪ್ರಶ್ನೆಯನ್ನು ಈ ಗೋಯೆಂಕಾ ಮಾಡಬಹುದು. ಆದ್ರೆ ಅದಕ್ಕೆ ಉತ್ತರ ತುಂಬಾನೇ ಸಿಂಪಲ್.. ಯಾಕಂದ್ರೆ ಮಿಸ್ಟರ್ ಗೋಯೆಂಕಾ ಪ್ರಶ್ನೆ ಮಾಡೋದು ಕೇವಲ ರಿಷಬ್ ಪಂತ್‍ನನ್ನು ಮಾತ್ರ. ಬೇರೆ ಆಟಗಾರರ ಬಗ್ಗೆ ಯಾವುದೇ ಪ್ರಶ್ನೆ ಇರಲ್ಲ. ಯಾಕಂದ್ರೆ ರಿಷಬ್ ಪಂತ್‍ಗೆ 27 ಕೋಟಿ ಕೊಟ್ಟಿದ್ದೇವೆ. ಸುಮ್ಮನೆ ನೀರಿನಲ್ಲಿ ಹೋಮ ಮಾಡಿದ ಹಾಗೇ ಆಯ್ತಲ್ಲ ಎಂಬ ವೇದನೆ ಗೋಯೆಂಕಾ ಅವರನ್ನು ಕಾಡುತ್ತಿರುತ್ತದೆ. ಇದು ತಪ್ಪು ಅಂತನೂ ಹೇಳೋಕೆ ಆಗಲ್ಲ. ಯಾಕಂದ್ರೆ ಹಾಕಿರೋ ದುಡ್ಡು ವಾಪಾಸ್ ಬರಬೇಕು ಎಂಬುದು ಪ್ರತಿಯೊಬ್ಬ ಬ್ಯುಸಿನೆಸ್‍ಮೆನ್‍ನ ಲೆಕ್ಕಚಾರ ಆಗಿರುತ್ತದೆ. ಆದ್ರೆ 27 ಕೋಟಿ ಕೊಟ್ಟು ನನ್ನನ್ನೇ ಖರೀದಿ ಮಾಡಬೇಕು ಎಂದು ರಿಷಬ್ ಪಂತ್ ಏನು ಹೇಳಿಲ್ಲ. ಆದ್ರೂ ಪಂತ್ ಆಡಲಿ.. ಆಡದೇ ಇರಲಿ.. ತಂಡದಲ್ಲಿ ಇದ್ರೆ ಆ ತಂಡದ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಾಗುತ್ತದೆ ಎಂಬುದನ್ನು ಮಿಸ್ಟರ್ ಗೋಯೆಂಕಾ ಮರೆಯಬಾರದು.
saakshatv.com
ನೆನಪಿರಲಿ.. ಈ ಬಾರಿಯ ಐಪಿಎಲ್ ರಿಷಬ್ ಪಂತ್‍ಗೆ ಕೆಟ್ಟ ಐಪಿಎಲ್ ಟೂರ್ನಿ. ಆದ್ರೆ ರಿಷಬ್ ಪಂತ್ ಅನ್ನೋದೇ ಒಂದು ಬ್ರ್ಯಾಂಡ್ ಎಂಬುದು ನೆನಪಿನಲ್ಲಿಟ್ಟುಕೊಳ್ಳಲೇಬೇಕು. ದುರಾದೃಷ್ಟಕ್ಕೆ ಈ ಬಾರಿಯ ಐಪಿಎಲ್ ಮಾರ್ಕೆಟ್‍ನಲ್ಲಿ ಅದು ಕ್ಲಿಕ್ ಆಗಿಲ್ಲ ಅಷ್ಟೇ.. 1997 ಮಾಡೆಲ್, ಆಕ್ಸಿಂಟೆಂಡ್ ಆದ ನಂತರ ಇಂಜಿನ್ ನಂಬರ್ 17 ಸರಿಯಾಗಿ ಓಡುತ್ತಿಲ್ಲ.. ಆಗಾಗ ಕೈಕೊಡುತ್ತಿದೆ. ಅದರಲ್ಲೂ ವೇಗದೂತ ಕ್ರಿಕೆಟ್‍ನಲ್ಲಿ ಪಂತ್ ಇಂಜಿನ್ ಫ್ಲಾಫ್ ಆಗುತ್ತಿದೆ. ಎಲ್ಲವೂ ಪರ್ಫೆಕ್ಟ್ ಆಗಿದ್ರೂ ಮೈಲೇಜ್ ಕೊಡ್ತಿಲ್ಲ. ಇಂಜಿನ್ ಸರಿಯಾಗಿದ್ರೆ ಟೈಯರ್ ಪಂಚರ್ ಆಗ್ತಿದೆ.. ಟಯರ್ ಸರಿಯಾಗಿದ್ರೆ ಇಂಜಿನ್ ಆಫ್ ಆಗ್ತಿದೆ. ಹೀಗಾಗಿ ಈ ಬಾರಿಯ ಐಪಿಎಲ್‍ನಲ್ಲಿ ರಿಷಬ್ ಪಂತ್ ಡಕೋಟಾ ಇಂಜಿನ್ ಥರಾ ಆಗಿಬಿಟ್ಟಿದ್ದಾರೆ. ಆದಷ್ಟು ಬೇಗ ಸರ್ವಿಸ್ ಅಥವಾ ರಿಬೋರ್ ಮಾಡಿಸಿಕೊಳ್ಳಲೇ ಬೇಕು. ಇಲ್ಲ ಅಂದ್ರೆ ಸ್ಕ್ರ್ಯಾಚ್‍ಗೆ ಹೋಗುವಂತಹ ಅಪಾಯವೂ ಇದೆ.
ನಿಜ, ಎಲ್‍ಎಸ್‍ಜಿಯ ದಿ ಬೆಸ್ಟ್ ಇಂಜಿನ್ ರಿಷಬ್ ಪಂತ್. ಅದರಲ್ಲಿ ಎರಡು ಮಾತಿಲ್ಲ. ಆದ್ರೆ ಎಲ್‍ಎಸ್‍ಜಿ ಗಾಡಿಯ ಪವರ್ ಸ್ಟೇರಿಂಗ್ ಮಾಲೀಕ ಸಂಜೀವ್ ಗೋಯೆಂಕಾ ಕೈಯಲ್ಲಿದೆ. ಕಾಲಲ್ಲಿ ಕ್ಲಚ್. ಬ್ರೇಕ್, ಎಕ್ಸ್‍ಲೇಟರ್ ಅನ್ನು ಎರ್ರಾಬಿರಿಯಾಗಿ ತುಳಿಯುತ್ತಾ.. ಅಡ್ಡಾದಿಡ್ಡಿಯಾಗಿ ಸ್ಟ್ರೇರಿಂಗ್ ಅನ್ನು ತಿರುಗಿಸುತ್ತಾ.. ಕರ್ಕಶವಾಗಿ ಹೋರ್ನ್ ಮಾಡುತ್ತಾ ಎಲ್‍ಎಸ್‍ಜಿ ತಂಡವನ್ನು ಓಡಿಸಿದ್ರೆ ಉತ್ತಮ ಮೈಲೇಜ್ ಸಿಗಲು ಹೇಗೆ ಸಾಧ್ಯ.?
ಹೌದು..ನಿಜವಾಗಿಯೂ ಎಲ್‍ಎಸ್‍ಜಿ ತಂಡಕ್ಕೆ ಆಗಿದ್ದು ಕೂಡ ಇದೇನೆ,, ನೋಡೋಕೆ ಎಲ್‍ಎಸ್‍ಜಿ ಕೂಡ ಬ್ರ್ಯಾಂಡೆಡ್ ಗಾಡಿ. ಆದ್ರೆ ದುಡ್ಡು ಕೊಟ್ಟಿದ್ದೇನೆ ಅಂತ ಮನ ಬಂದಂತೆ ಓಡಿಸಿದ್ರೆ ಉತ್ತಮ ಫಲಿತಾಂಶ ಸಿಗಲು ಹೇಗೆ ಸಾಧ್ಯ..? ಇವತ್ತು ಎಲ್‍ಎಸ್‍ಜಿ ಅಥಾವ ಸಂಜೀವ್ ಗೋಯೆಂಕಾನ ತಂಡ ಕಳಪೆ ಪ್ರದರ್ಶನ ನೀಡಲು ಆಟಗಾರರು ಕಾರಣರಲ್ಲ. ಬದಲಾಗಿ ಅದಕ್ಕೆ ಮುಖ್ಯ ಕಾರಣ ಮಾಲೀಕ ಸಂಜೀವ್ ಗೋಯೆಂಕಾ ಅವರ ಮನಸ್ಥಿತಿ.
saakshatv.com
ಸಂಜೀವ್ ಗೋಯೆಂಕಾ ತನ್ನ ಆಟಗಾರರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ. ಈ ಹಿಂದೆ ಅಂದ್ರೆ 2017ರಲ್ಲಿ ಟೀಮ್ ಇಂಡಿಯಾದ ಯಶಸ್ವಿ ನಾಯಕ ಮಹೇಂದ್ರ ಸಿಂಗ್ ಧೋನಿಗೂ ಅವಮಾನ ಮಾಡಿಬಿಟ್ಟಿದ್ದರು. ಕಳೆದ ಬಾರಿ ಕೆ.ಎಲ್. ರಾಹುಲ್‍ಗೂ ಅಪಮಾನ ಮಾಡಿದ್ದರು. ಈ ಬಾರಿ ರಿಷಬ್ ಪಂತ್‍ಗೂ ಅಪಮಾನ.. ಅವಮಾನ ಮಾಡಿದ್ದಾರೆ. ಗೆದ್ದಾಗ ಬೀಗುವ ಹಾಗೂ ಸೋತಾಗ ಆಟಗಾರರನ್ನು ಕೀಳಾಗಿ ನೋಡುವ ಸಂಜೀವ್ ಗೋಯೆಂಕಾ ಐಪಿಎಲ್ ಫ್ರಾಂಚೈಸಿ ಮಾಲೀಕರಾಗುವ ಅರ್ಹತೆಯನ್ನು ಕಳೆದುಕೊಂಡಿದ್ದಾರೆ.
ಹಾಗೇ ನೋಡಿದ್ರೆ ಆರ್‍ಸಿಬಿ.. ಪಂಜಾಬ್ ಕಿಂಗ್ಸ್, ಎಸ್‍ಆರ್‍ಎಚ್.. ಮುಂಬೈ ಇಂಡಿಯನ್ಸ್, ಸಿಎಸ್‍ಕೆ , ಡೆಲ್ಲಿ ಕ್ಯಾಪಿಟಲ್ಸ್ , ಕೆಕೆಆರ್, ಗುಜರಾತ್ ಟೈಟಾನ್ಸ್, ರಾಜಸ್ತಾನ ರಾಯಲ್ಸ್ ತಂಡದ ಮಾಲೀಕರನ್ನು ನೋಡಿ ಕಲಿಯಬೇಕಿದೆ. ಎಲ್‍ಎಸ್‍ಜಿ ತಂಡವನ್ನು ಬಿಟ್ರೆ ಟೀಮ್ ಮ್ಯಾನೇಜ್‍ಮೆಂಟ್‍ನಲ್ಲಿ ಯಾವುದೇ ಮಾಲೀಕರು ಆಟಗಾರರನ್ನು ಕೀಳಾಗಿ ನೋಡಿಲ್ಲ. ಆಟಗಾರರಿಗೆ ಕ್ಲಾಸ್ ತಗೋಬೇಕಾದ್ರೂ ಕೂಡ ಅದು ಡ್ರೆಸಿಂಗ್ ರೂಂಗೆ ಸೀಮಿತವಾಗುತ್ತದೆ. ಇನ್ನೊಂದೆಡೆ, ಪ್ರೀತಿ ಝೀಂಟಾ, ನೀತಾ ಅಂಬಾನಿ, ಶಾರೂಕ್‍ಖಾನ್‍ನಂತಹ ಫ್ರಾಂಚೈಸಿ ಮಾಲೀಕರು ಎದುರಾಳಿ ಆಟಗಾರರ ಆಟವನ್ನು ಕೊಂಡಾಡಿದ ನಿದರ್ಶನಗಳು ಕೂಡ ಇವೆ. ಆದ್ರೆ ಗೋಯೆಂಕಾ ಮಾತ್ರ ತನ್ನ ತಂಡ ಸೋಲಿನತ್ತ ಮುಖ ಮಾಡುತ್ತಿದ್ದಂತೆ ಮೈದಾನದಿಂದ ಹೊರಗೆ ಹೊಗುವ ರೀತಿಯಿಂದ ತಂಡದ ಆಟಗಾರರ ಆತ್ಮಸ್ಥೆರ್ಯವನ್ನು ಕಳೆದುಕೊಳ್ಳುವಂತೆ ಮಾಡುತ್ತಾರೆ.
saakshatv.com
ಅಂದ ಹಾಗೇ ಐಪಿಎಲ್‍ನಲ್ಲಿ ಆಟಗಾರರಿಗೆ ಎಲ್‍ಎಸ್‍ಜಿ ತಂಡದ ಪರವಾಗಿ ಆಡುವುದು ಅನಿವಾರ್ಯ ಆಗಿಬಿಟ್ಟಿದೆ. ದುಡ್ಡು ಕೊಟ್ಟು ಖರೀದಿ ಮಾಡುತ್ತಿರುವುದರಿಂದ ತಂಡದ ಪರವಾಗಿ ಆಡಲೇಬೇಕು. ಆದ್ರೆ ತಂಡ ಎಷ್ಟೇ ಪ್ರತಿಭಾವಂತ ಆಟಗಾರರನ್ನು ಒಳಗೊಂಡಿದ್ದರೂ ಮಾನಸಿಕ ಹಿಂಸೆಯ ಒತ್ತಡವನ್ನು ಮುಂದಿಟ್ಟುಕೊಂಡು ಉತ್ತಮ ಪ್ರದರ್ಶನ ನೀಡಲು ಸಾಧ್ಯನೇ ಇಲ್ಲ. ಈ ಹಿಂದೆ ಧೋನಿ, ಕೆ.ಎಲ್. ರಾಹುಲ್‍ಗೆ ಆಗಿದ್ದ ಅನುಭವವೇ ರಿಷಬ್ ಪಂತ್‍ಗೂ ಆಗಿದೆ. ಫಿಯರ್‍ಲೆಸ್ ಕ್ರಿಕೆmರ್ ಆಗಿದ್ದ ರಿಷಬ್ ಪಂತ್ ಈ ರೀತಿ ಕುಗ್ಗಿ ಹೋಗಿದ್ದು, ಈ ರೀತಿ ಹೀನಾಯ ಪ್ರದರ್ಶನ ನೀಡಿರುವುದು ಇದೇ ಮೊದಲು.
ಹೀಗಾಗಿ ರಿಷಬ್ ಪಂತ್ ಐಪಿಎಲ್‍ನ ಕಹಿ ಘಟನೆಯನ್ನು ಮರೆತು ಕಳೆದು ಹೋಗಿರುವ ಫಾರ್ಮ್ ಅನ್ನು ಮತ್ತೆ ಪಡೆದುಕೊಳ್ಳಬೇಕು. ತನ್ನ ಬ್ರ್ಯಾಂಡ್ ವ್ಯಾಲ್ಯೂ ಅನ್ನು ಉಳಿಸಿಕೊಳ್ಳಲು ಹರಸಾಹಸಪಡಲೇಬೇಕು. 1997 ಮಾಡೆಲ್‍ನ ರಿಷಬ್ ಪಂತ್ ಅನ್ನೋ ನಂಬರ್ -17 ಇಂಜಿನ್ ಮತ್ತೆ ರಿಬೋರ್ ಆಗುತ್ತಾ. ಅಥವಾ ಸರ್ವಿಸ್ ಆಗುತ್ತಾ ಗೊತ್ತಿಲ್ಲ..ಒಟ್ಟಿನಲ್ಲಿ ರಿಪೇರಿ ಅಂತೂ ಆಗಲೇಬೇಕು. ಅದಕ್ಕಾಗಿ ನೆಟ್ಸ್‍ನಲ್ಲಿ ಬ್ಯಾಟಿಂಗ್ ತಾಲೀಮು ನಡೆಸಬೇಕು… ಸಾಕಷ್ಟು ಬೇವರು ಸುರಿಸಬೇಕು.. ಬ್ಯಾಟಿಂಗ್ ಟೆಕ್ನಿಕ್‍ನಲ್ಲಿ ಮತ್ತಷ್ಟು ಅಪ್‍ಗ್ರೇಡ್ ಆಗಬೇಕು.. ಹೊಸ ಅನ್ವೇಷನೆಯ ಶಾಟ್ಸ್‍ಗಳನ್ನು ಹೊಡೆಯಲು ಕಲಿಯಬೇಕು. ಆಗ ಮಾತ್ರ ಟೀಮ್ ಇಂಡಿಯಾದಲ್ಲಿ ಸ್ಪೈಡರ್ ಮೆನ್‍ನ ಫಿಯರ್ ಲೆಸ್ ಆಟವನ್ನು ಕಣ್ತುಂಬಿಕೊಳ್ಳಬಹುದು. ಇಲ್ಲದೆ ಇದ್ರೆ ರಿಷಬ್ ಪಂತ್ ಅನ್ನೋ ಬ್ರ್ಯಾಂಡ್ ಕಳೆದುಹೋಗಬಹುದು.. ಬೀ ಕೇರ್‍ಫುಲ್ ರಿಷಬ್ ಪಂತ್..!

Related posts

ವಿಐಪಿ ಸಂಸ್ಕೃತಿಗೆ ಆರ್ ಅಶೋಕ್ ಬ್ರೇಕ್: ಪ್ರಧಾನಿ ಮೋದಿ ಕರೆಗೆ ಓಗೊಟ್ಟು ಇಂಧನ ಉಳಿತಾಯಕ್ಕೆ ಮುಂದಾದ ವಿಪಕ್ಷ ನಾಯಕ

ಕಸ್ತೂರಿ ರಂಗನ್‌ ವರದಿ ಜಾರಿಗೆ ಕಾಲಾವಕಾಶ ಕೇಳುವ ನಿರ್ಣಯ, ಎನ್‌ಜಿಟಿಯಲ್ಲಿ ವಕೀಲರನ್ನು ನೇಮಿಸಿ ಹೋರಾಟ ಮಾಡಬೇಕು: ಪ್ರತಿಪಕ್ಷ ನಾಯಕ ಆರ್‌.ಅಶೋಕ ಸಲಹೆ

September 22, 2026
ಬರ ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಸ್ವಪಕ್ಷದ ವಿರುದ್ಧವೇ ತೊಡೆ ತಟ್ಟಿದ ಹಿರಿಯ ನಾಯಕ ಎಚ್ ಕೆ ಪಾಟೀಲ್ -ಲಜ್ಜೆಗೆಟ್ಟ ಸರ್ಕಾರಕ್ಕೆ ಸ್ವಪಕ್ಷದವರೇ ಉಗಿಯುತ್ತಿದ್ದಾರೆ ಎಂದ ಆರ್ ಅಶೋಕ್

ಬರ ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಸ್ವಪಕ್ಷದ ವಿರುದ್ಧವೇ ತೊಡೆ ತಟ್ಟಿದ ಹಿರಿಯ ನಾಯಕ ಎಚ್ ಕೆ ಪಾಟೀಲ್ -ಲಜ್ಜೆಗೆಟ್ಟ ಸರ್ಕಾರಕ್ಕೆ ಸ್ವಪಕ್ಷದವರೇ ಉಗಿಯುತ್ತಿದ್ದಾರೆ ಎಂದ ಆರ್ ಅಶೋಕ್

September 22, 2026

ಸನತ್ ರೈ
saakshatv.com

ShareTweetSendShare
Join us on:

Related Posts

ವಿಐಪಿ ಸಂಸ್ಕೃತಿಗೆ ಆರ್ ಅಶೋಕ್ ಬ್ರೇಕ್: ಪ್ರಧಾನಿ ಮೋದಿ ಕರೆಗೆ ಓಗೊಟ್ಟು ಇಂಧನ ಉಳಿತಾಯಕ್ಕೆ ಮುಂದಾದ ವಿಪಕ್ಷ ನಾಯಕ

ಕಸ್ತೂರಿ ರಂಗನ್‌ ವರದಿ ಜಾರಿಗೆ ಕಾಲಾವಕಾಶ ಕೇಳುವ ನಿರ್ಣಯ, ಎನ್‌ಜಿಟಿಯಲ್ಲಿ ವಕೀಲರನ್ನು ನೇಮಿಸಿ ಹೋರಾಟ ಮಾಡಬೇಕು: ಪ್ರತಿಪಕ್ಷ ನಾಯಕ ಆರ್‌.ಅಶೋಕ ಸಲಹೆ

by admin
September 22, 2026
0

ಕಸ್ತೂರಿ ರಂಗನ್‌ ವರದಿ ಜಾರಿಗೆ ಕಾಲಾವಕಾಶ ಕೇಳುವ ನಿರ್ಣಯ, ಎನ್‌ಜಿಟಿಯಲ್ಲಿ ವಕೀಲರನ್ನು ನೇಮಿಸಿ ಹೋರಾಟ ಮಾಡಬೇಕು: ಪ್ರತಿಪಕ್ಷ ನಾಯಕ ಆರ್‌.ಅಶೋಕ ಸಲಹೆ ಇದು ಕೇಂದ್ರ ಸರ್ಕಾರದ ಕೈಯಲ್ಲಿ...

ಬರ ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಸ್ವಪಕ್ಷದ ವಿರುದ್ಧವೇ ತೊಡೆ ತಟ್ಟಿದ ಹಿರಿಯ ನಾಯಕ ಎಚ್ ಕೆ ಪಾಟೀಲ್ -ಲಜ್ಜೆಗೆಟ್ಟ ಸರ್ಕಾರಕ್ಕೆ ಸ್ವಪಕ್ಷದವರೇ ಉಗಿಯುತ್ತಿದ್ದಾರೆ ಎಂದ ಆರ್ ಅಶೋಕ್

ಬರ ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಸ್ವಪಕ್ಷದ ವಿರುದ್ಧವೇ ತೊಡೆ ತಟ್ಟಿದ ಹಿರಿಯ ನಾಯಕ ಎಚ್ ಕೆ ಪಾಟೀಲ್ -ಲಜ್ಜೆಗೆಟ್ಟ ಸರ್ಕಾರಕ್ಕೆ ಸ್ವಪಕ್ಷದವರೇ ಉಗಿಯುತ್ತಿದ್ದಾರೆ ಎಂದ ಆರ್ ಅಶೋಕ್

by Shwetha
September 22, 2026
0

ಗದಗ: ಕರಾವಳಿ ಭಾಗದಲ್ಲಿ ಸಂಪುಟ ಸಭೆ ನಡೆಸಿ ಜೈಕಾರ ಹಾಕಿಸಿಕೊಳ್ಳುತ್ತಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಈಗ ಉತ್ತರ ಕರ್ನಾಟಕದ ಭಾಗದಿಂದ ಭಾರೀ ಆಘಾತ ಎದುರಾಗಿದೆ. ಗದಗ ತಾಲ್ಲೂಕನ್ನು...

ಲಂಚಕ್ಕೆ ಧರ್ಮದ ಹಣೆಪಟ್ಟಿ ಕಟ್ಟಿದ ಸಚಿವ ಶಿವಲಿಂಗೇಗೌಡರ ವಿರುದ್ಧ ರಾಜ್ಯಪಾಲರಿಗೆ ದೂರು: ಮಂತ್ರಿ ಸ್ಥಾನಕ್ಕೆ ಕುತ್ತು ತರುತ್ತಾ ಗೌರವದ ಉಡುಗೊರೆ ಹೇಳಿಕೆ

ಲಂಚಕ್ಕೆ ಧರ್ಮದ ಹಣೆಪಟ್ಟಿ ಕಟ್ಟಿದ ಸಚಿವ ಶಿವಲಿಂಗೇಗೌಡರ ವಿರುದ್ಧ ರಾಜ್ಯಪಾಲರಿಗೆ ದೂರು: ಮಂತ್ರಿ ಸ್ಥಾನಕ್ಕೆ ಕುತ್ತು ತರುತ್ತಾ ಗೌರವದ ಉಡುಗೊರೆ ಹೇಳಿಕೆ

by Shwetha
September 22, 2026
0

ಹಾಸನ: ಸಕಲೇಶಪುರದಲ್ಲಿ ನಡೆದ ಪ್ರಜಾಸೇವೆ ಸಭೆಯಲ್ಲಿ ಅಧಿಕಾರಿಗಳಿಗೆ ಗೌರವಯುತವಾಗಿ ಏನಾದರೂ ಕೊಡುವುದು ನಿಮ್ಮ ಧರ್ಮ ಎಂದು ಹೇಳಿಕೆ ನೀಡಿದ್ದ ಅಬಕಾರಿ ಸಚಿವ ಶಿವಲಿಂಗೇಗೌಡ ಅವರ ಸಂಕಷ್ಟ ಈಗ...

‘ಅಧಿಕಾರಿಗಳಿಗೆ ಗೌರವ ಕೊಡಿ, ಲಂಚ ನೀಡಬೇಡಿ’: ವೈರಲ್ ವಿಡಿಯೋ ವಿವಾದದ ಬಳಿಕ ಸಚಿವ ಶಿವಲಿಂಗೇಗೌಡ ಸ್ಪಷ್ಟನೆ

‘ಅಧಿಕಾರಿಗಳಿಗೆ ಗೌರವ ಕೊಡಿ, ಲಂಚ ನೀಡಬೇಡಿ’: ವೈರಲ್ ವಿಡಿಯೋ ವಿವಾದದ ಬಳಿಕ ಸಚಿವ ಶಿವಲಿಂಗೇಗೌಡ ಸ್ಪಷ್ಟನೆ

by Shwetha
September 22, 2026
0

ಅಬಕಾರಿ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರ ಹೇಳಿಕೆಯೊಂದು ಇದೀಗ ರಾಜಕೀಯ ವಲಯದಲ್ಲಿ ವಿವಾದಕ್ಕೆ ಕಾರಣವಾಗಿದೆ. ಸೆಪ್ಟೆಂಬರ್ 19ರಂದು ಸಕಲೇಶಪುರದಲ್ಲಿ ನಡೆದ...

ಶಾಲಾ ಮಕ್ಕಳಿಗೆ ಅ.3ರಿಂದ 19 ದಿನಗಳ ದಸರಾ ರಜೆ

ಶಾಲಾ ಮಕ್ಕಳಿಗೆ ಅ.3ರಿಂದ 19 ದಿನಗಳ ದಸರಾ ರಜೆ

by Shwetha
September 22, 2026
0

ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ 2026-27ನೇ ಶೈಕ್ಷಣಿಕ ಸಾಲಿನ ದಸರಾ ರಜೆಯ ವೇಳಾಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟಿಸಿದೆ. ಶೈಕ್ಷಣಿಕ ವೇಳಾಪಟ್ಟಿಯ ಪ್ರಕಾರ, ಅಕ್ಟೋಬರ್ 3ರಿಂದ ಅಕ್ಟೋಬರ್ 21ರವರೆಗೆ ಒಟ್ಟು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram