ಜಮ್ಮು ಕಾಶ್ಮೀರದಲ್ಲಿ  3 ಭಯೋತ್ಪಾದಕರ ಹತ್ಯೆ – ಕುಪ್ವಾರ, ಕುಲ್ಗಾಮ್ ನಲ್ಲಿ ಎನ್ಕೌಂಟರ್

1 min read

ಜಮ್ಮು ಕಾಶ್ಮೀರದಲ್ಲಿ  3 ಭಯೋತ್ಪಾದಕರ ಹತ್ಯೆ – ಕುಪ್ವಾರ, ಕುಲ್ಗಾಮ್ ನಲ್ಲಿ ಎನ್ಕೌಂಟರ್

ಭಾನುವಾರ ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಮತ್ತು ಕುಲ್ಗಾಮ್‌ನಲ್ಲಿ ಭದ್ರತಾ ಪಡೆಗಳು ನಡೆಸಿದ ಎರಡು ಎನ್‌ಕೌಂಟರ್‌ಗಳಲ್ಲಿ ಮೂವರು ಭಯೋತ್ಪಾದಕರನ್ನ ಸದೆಬಡೆಯಲಾಗಿದೆ.  ಕುಪ್ವಾರಾ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ, ಅವರಲ್ಲಿ ಒಬ್ಬ ಪಾಕಿಸ್ತಾನಿ ಮತ್ತು ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ಸದಸ್ಯ ಎಂದು ಗುರುತಿಸಲಾಗಿದೆ.

ಪ್ರಸ್ತುತ ಭದ್ರತಾ ಪಡೆಗಳು ಈ ಪ್ರದೇಶದಲ್ಲಿ 2-3 ಭಯೋತ್ಪಾದಕರನ್ನು ಸುತ್ತುವರಿದಿವೆ ಎಂದು ಪೊಲೀಸ್ ಮಹಾನಿರೀಕ್ಷಕ ವಿಜಯ್ ಕುಮಾರ್ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಸೇನೆಯಿಂದ ಬಂಧನಕ್ಕೊಳಗಾಗಿದ್ದ ಭಯೋತ್ಪಾದಕ ಶೌಕತ್ ಅಹ್ಮದ್ ಶೇಖ್ ಎಂಬಾತನಿಂದ ಮಾಹಿತಿ ಪಡೆದ ಭದ್ರತಾ ಪಡೆಗಳು ಕುಪ್ವಾರ ಕಾರ್ಯಾಚರಣೆ ಆರಂಭಿಸಿವೆ.ಕುಪ್ವಾರ ಮಾತ್ರವಲ್ಲದೆ ಕುಲ್ಗಾಮ್‌ನ ದಮ್ಹಾಲ್ ಹಂಜಿ ಪೋರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಎನ್‌ಕೌಂಟರ್ ಆರಂಭವಾಗಿದೆ. ಇಲ್ಲಿಯೂ ಒಬ್ಬ ಉಗ್ರನನ್ನು ಹತ್ಯೆ ಮಾಡಲಾಗಿದೆ.

ಶುಕ್ರವಾರ, ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಪಾಂಪೋರ್ ಪ್ರದೇಶದಲ್ಲಿ ಗುಂಡಿನ ದಾಳಿಯಲ್ಲಿ ಹತ್ಯೆಯಾಗಿರು ರೀತಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ ಶವ ನಿಗೂಢ ಪರಿಸ್ಥಿತಿಯಲ್ಲಿ ಪತ್ತೆಯಾಗಿದೆ.  ಸ್ಥಳದಿಂದ ಎರಡು ಪಿಸ್ತೂಲ್ ಕಾಟ್ರಿಡ್ಜ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಕೊಲೆಯಾದ ಪೊಲೀಸ್ ಪೇದೆಯನ್ನು ಸಬ್ ಇನ್ಸ್ ಪೆಕ್ಟರ್ ಫಾರೂಕ್ ಅಹ್ಮದ್ ಮಿರ್ (50) ಎಂದು ಗುರುತಿಸಲಾಗಿದೆ.

ಅವರನ್ನು ಪಂಪೋರಾದ ಲೆತ್‌ಪೆರಾದಲ್ಲಿ 23 ಬೆಟಾಲಿಯನ್ ಐಆರ್‌ಪಿಯಲ್ಲಿ ನಿಯೋಜಿಸಲಾಗಿತ್ತು. ಅವರ ಕುಟುಂಬವು ತಂದೆ, ಹೆಂಡತಿ ಮತ್ತು ಮೂವರು ಮಕ್ಕಳನ್ನು ಒಳಗೊಂಡಿದೆ. ಇವರಲ್ಲಿ ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರ ಸೇರಿದ್ದಾರೆ. ಘಟನೆಯ ನಂತರ, ಭದ್ರತಾ ಪಡೆಗಳು ಇಡೀ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd